ಖಾಸಗಿ ಬಸ್ ಪ್ರಯಾಣ ದುಬಾರಿ

ಬೆಂಗಳೂರು : ಮೇ ೪ರಂದು ಖಾಸಗಿ ಬಸ್‌ಗಳ ಟಿಕೆಟ್ ದರ ಎಂಟು ಪಟ್ಟು ಹೆಚ್ಚಳ ಮಾಡಿ ಜನರ ಸುಲಿಗೆಗೆ ಹೊಂಚು ಹಾಕಿವೆ. ಮೇ ೩ರ ನಂತರ ಬಸ್‌ಗಳ ಸಂಚಾರಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಇನ್ನೇನು ಆರಂಭಗೊಳ್ಳಲಿದೆ. ಈ ಸಂದರ್ಭವನ್ನು ಬಳಸಿಕೊಳ್ಳಲು ಖಾಸಗಿ ಬಸ್‌ಗಳ ಮಾಲೀಕರು ಮುಂದಾಗಿದ್ದಾರೆ. ಕೆಲವು ಬಸ್‌ಗಳು ಬೆಂಗಳೂರಿನಿAದ ಹುಬ್ಬಳ್ಳಿ, ಬೆಳಗಾವಿ, ಮುಂಬೈ ಹೀಗೆ ಇತರೆ ಪ್ರದೇಶಗಳಿಗೆ ತೆರಳುವವರಿಗೆ ಪ್ರತಿ ಟಿಕೆಟ್‌ಗೆ ೮೫೦೦ ರೂ ದರ ನಿಗದಿಪಡಿಸಲಿದ್ದಾರೆ. ಸಾಮಾನ್ಯ ಶುಲ್ಕಕ್ಕಿಂತ ಎಂಟು ಪಟ್ಟು ಹೆಚ್ಚಾದಂತಾಗಿದೆ. ಹಾಗೆಯೇ ವಿಮಾನ ಟಿಕೆಟ್ ದರಕ್ಕಿಂತಲೂ ಹೆಚ್ಚಳವಾದಂತಾಗಿದೆ. ಹೈದರಾಬಾದ್‌ಗೆ ೫೪೦೦ ರೂ. ಒಟ್ಟಿನಲ್ಲಿ ೩ ಸಾವಿರಕ್ಕಿಂತ ಹೆಚ್ಚಿನ ಹಣವನ್ನೇ ತೆರಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಖಾಸಗಿ ಬಸ್‌ಗಳು ಟಿಕೆಟ್‌ಗೆ ಇಷ್ಟೊಂದು ದರ ನಿಗದಿ ಮಾಡಿದೆ.
ಏಪ್ರಿಲ್ ೧೫ರ ಬಳಿಕ ಲಾಕ್‌ಡೌನ್ ತೆರವುಗೊಳಿಸುವ ವಿಶ್ವಾಸವಿತ್ತು. ಆದರೆ ಮೇ ೩ರವರೆಗೆ ವಿಸ್ತರಣೆ ಮಾಡಿದ್ದರು. ಆದರೆ ವಿಮಾನ ಹಾಗೂ ರೈಲು ಸಂಚಾರ ಆರಂಭವಾಗುವ ಯಾವುದೇ ಲಕ್ಷಣಗಳಿಲ್ಲ, ಆದರೆ ಬಸ್ ಓಡಾಡಬಹುದೇನೋ ಎನ್ನುವ ವಿಶ್ವಾಸವನ್ನು ಹೊಂದಿದ್ದಾರೆ. ಒಂದೊಮ್ಮೆ ಆನ್‌ಲೈನ್ ಬುಕಿಂಗ್ ಆರಂಭಿಸಿದರೆ ಜನರು ಲಾಕ್‌ಡೌನ್ ತೆರವುಗೊಳಿಸಲಾಗಿದೆ ಎಂದು ಭಾವಿಸುತ್ತಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾಕಷ್ಟು ಬಸ್‌ಗಳು ಕಳೆದ ಎರಡು ತಿಂಗಳಿನಿAದ ಸಂಕಷ್ಟದಲ್ಲಿದೆ. ಲಾಕ್‌ಡೌನ್ ತೆರವುಗೊಳಿಸಿದ ಬಳಿಕವೂ ಬಸ್‌ನಲ್ಲಿ ಕೇವಲ ಶೇ.೫೦ರಷ್ಟು ಮಂದಿ ಮಾತ್ರ ಪ್ರಯಾಣಿಸಬಹುದಾಗಿದೆ. ಹಾಗಿದ್ದಾಗ ಪ್ರಯಾಣಿಕರು ಸಂಚಾರ ನಡೆಸುತ್ತಾರೆ ಎನ್ನುವುದು ಖಾತ್ರಿ ಇಲ್ಲ. ನಾವು ನಾಲ್ಕೈದು ಪಟ್ಟು ಹಣವನ್ನು ತೆತ್ತು ಬೆಂಗಳೂರಿಗೆ ಬರಲು ಸಾಧ್ಯವಿಲ್ಲ, ಕೆಎಸ್‌ಆರ್‌ಟಿಸಿ ತನ್ನ ಬುಕಿಂಗ್ ಆರಂಭಿಸುತ್ತದೆ ಎನ್ನುವ ನಂಬಿಕೆ ಇದೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ಹೈದರಾಬಾದ್ ೫,೪೦೦ ರೂ., ಮುಂಬೈ ೮,೫೦೦ ರೂ., ಪುಣೆ ೪೦೦೦ ದಿಂದ ೮೫೦೦, ಚೆನ್ನೈ ೩೦೦೦ ರೂ., ಎರ್ನಾಕುಲಮ್ ೨೫೦೦ ರೂ., ಗೋವಾ ೨೫೦೦ ರೂ. ಮಂಗಳೂರು ೧೭೧೦ ರೂ., ಬೆಳಗಾವಿ ೮೫೦೦ ರೂ., ಹುಬ್ಬಳ್ಳಿ ೮೫೦೦ ರೂ., ಶಿವಮೊಗ್ಗ ೩೦೦೦ ರೂ. ಈ ರೀತಿಯ ಬಸ್ ಟಿಕೆಟ ದರವನ್ನು ನಿಗದಿಪಡಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕವಿತಾಗೆ ಗೌಡಗೆ ಮಿಸ್ ಆಯ್ತು ಚಾನ್ಸ್

Fri May 1 , 2020
ಕೊರೊನಾದಿಂದ ಚಿತ್ರೋದ್ಯಮ ಸ್ಥಗಿತಗೊಂಡಿದ್ದು, ನಟಿ ಕವಿತಾ ಗೌಡನಿಗೂ ಕೆಲವು ಚಾನ್ಸ್ ಮಿಸ್ ಆಗಿವೆ. ಕಳೆದ ವರ್ಷ ಗುಬ್ಬಿ ಮೇಲೆ ಬ್ರಹ್ಮಾಸ್ತç ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕವಿತಾ ಆ ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಎಲ್ಲಾ ಅಂದುಕೊAಡAತೆ ಆಗಿದ್ರೆ ಕವಿತಾ ಅವರ ಎರಡು ಚಿತ್ರಗಳು ಬಿಡುಗಡೆಯಾಗಬೇಕಿದ್ದವು. ಲಾಕ್‌ಡೌನ್‌ನಿಂದ ಅಪರೂಪದ ಅವಕಾಶ ಮೀಸ್ ಆಗಿದೆಯಂತೆ. ದಿಗಂತ ಅಭಿನಯದ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಸುಮಂತ್ ಶೈಲೆಂದ್ರ ಅಭಿನಯದ ಗೋವಿಂದ ಗೋವಿಂದ ಚಿತ್ರಗಳಲ್ಲಿ ಕವಿತಾ ನಟಿಸಿದ್ದು, ಎರಡು […]

Advertisement

Wordpress Social Share Plugin powered by Ultimatelysocial