ಗಂಗೆಯಿಂದ ಗುಣವಾಗುತ್ತೆ ಕೊರೊನಾ..! ಕೊರೊನಾ ಔಷಧಿಯಾಗುತ್ತಾ ಗಂಗಾ ನದಿ ನೀರು..!

ದೇಶದೆಲ್ಲೆಡೆ ಲಾಕ್ ಡೌನ್ ಹಿನ್ನೆಲೆ ಗಂಗಾ ನದಿ ಸೇರಿದಂತೆ ಹಲವಾರು ನದಿಗಳು ಶುದ್ದಿಯಾಗಿ ಸ್ವಚ್ಚವಾಗಿ ಹರಿಯುತ್ತಿವೆ. ಈ ಮಧ್ಯೆ ಕೊರೊನಾವನ್ನು ಗುಣಪಡಿಸೋ ಶಕ್ತಿ ಗಂಗಾ ನದಿ ನೀರಿನಲ್ಲಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇದನ್ನು ಅಲ್ಲಗಳೆದಿದೆ. ಹಲವಾರು ದಿನಗಳಿಂದ ದೇಶದೆಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಯಾವುದೇ ಜನರು ನದಿ ನೀರನ್ನು ಬಳಸುತ್ತಿಲ್ಲ. ಅಲ್ಲದೇ ಗಂಗಾನದಿ ಸುತ್ತಮುತ್ತಲಿನ ಯಾವ ಕಾರ್ಖಾನೆಗಳು ಕೆಲಸ ಮಾಡುತ್ತಿಲ್ಲ. ಇದೇ ಕಾರಣವಾಗಿ ಗಂಗೆ ಸ್ವಚ್ಚವಾಗಿ ಹರಿಯುತ್ತಿದ್ದಾಳೆ. ಕೇಂದ್ರದ ಜಲಶಕ್ತಿ ಮಂಡಳಿಯ ಅಡಿಯಲ್ಲಿ ಬರುವ ಗಂಗಾ ನದಿ ಶುದ್ಧೀಕರಣದ ರಾಷ್ಟ್ರೀಯ ಮಿಷನ್, ಐಸಿಎಂಆರ್ ಗೆ ಕಳೆದ ಏಪ್ರಿಲ್ನಲ್ಲಿ ಪ್ರಸ್ತಾವಣೆಯೊಂದನ್ನು ಮುಂದಿಟ್ಟಿತ್ತು. ಶುದ್ಧವಾಗಿ ಹರಿಯುತ್ತಿರುವ ಗಂಗಾ ನದಿಯ ನೀರನ್ನು ಕೊರೊನಾ ವೈರಸ್ ವಿರುದ್ಧ ಔಷಧಿಯಾಗಿ ಬಳಸಬಹುದು ಎಂದು ಪ್ರಸ್ತಾವಣೆಯಲ್ಲಿ ತಿಳಿಸಲಾಗಿತ್ತು. ಇದರಿಂದ ಕೊರೊನಾ ವೈರಸ್ ಅನ್ನು ಗುಣಪಡಿಸಲು ಗಂಗಾ ನದಿ ನೀರನ್ನು ಬಳಕೆ ಮಾಡಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿತ್ತು.  ಗಂಗಾ ನದಿ ನೀರಿನಲ್ಲಿ ಔಷಧಿಯ ಗುಣಗಳಿವೆ. ರುದ್ರ ಪ್ರಯಾಗ್ ಮತ್ತು ಮಧ್ಯಪ್ರದೇಶದ ತೆಹ್ರಿ ಭಾಗದಲ್ಲಿ ಗಂಗಾ ನದಿ ಹರಿಯುತ್ತದೆ. ಈ ನದಿಯಲ್ಲಿ ಫೇಜ್ ಎಂಬ ಸೂಕ್ಷ್ಮಾಣು ಬ್ಯಾಕ್ಟೀರಿಯ ಪ್ರಭೇದಗಳಿವೆ. ಇವುಗಳಿಂದ ಮನುಷ್ಯನ ಮತ್ತು ಪ್ರಾಣಿಗಳಲ್ಲಿರುವ ವೈರಾಣುಗಳನ್ನು ತಿನ್ನುತ್ತದೆ. ಹೀಗಾಗಿ ಗಂಗಾ ನದಿ ನೀರನ್ನು ಔಷಧಿಯವಾಗಿ ಬಳಕೆ ಮಾಡಬಹುದಾಗಿದೆ. ಇದನ್ನು ಕ್ಲಿನಿಕಲ್ ಟೆಸ್ಟ್ ನಡೆಸುವಂತೆ ಜಲಶಕ್ತಿ ಮಂಡಳಿ ಐಸಿಎಂಆರ್ ಗೆ ಮನವಿ ಮಾಡಿಕೊಂಡಿತ್ತು. ಇನ್ನು ಇದಕ್ಕೆ ಉತ್ತರಿಸಿರುವ ಐಸಿಎಂಆರ್ ಪ್ರಸ್ತುತ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳಿಗ ಪ್ರಕಾರ ನೀಡಿರುವ ದತ್ತಾಂಶ ಸಾಕಾಗಲ್ಲ. ಇನ್ನು ಹೆಚ್ಚಿನ ವೈಜ್ಞಾನಿಕ ಟೆಸ್ಟ್ ನಡೆಸಲು ಔಷಧಿ ಗುಣಗಳಿವೆ ಎನ್ನುವ ಸಾಕ್ಷಗಳಿಲ್ಲ. ಹೀಗಾಗಿ ಇನ್ನು ಹೆಚ್ಚಿನ ಪುರಾವೆಗಳ ಅಗತ್ಯವಿದೆ ಎಂದು ಏಮ್ಸ್ ನ ಮಾಜಿ ಡೀನ್ ಶ್ರೀ ಗುಪ್ತಾ ಹೇಳಿದ್ದಾರೆ. ಈ ಎಲ್ಲ ಪ್ರಸ್ತಾವಣೆಗಳನ್ನ ರಾಷ್ಟ್ರೀಯ ಪರಿಸರ ಮತ್ತು ಸಂಶೋಧನಾ ಸಂಸ್ಥೆ ವಿಜ್ಞಾನಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಎನ್ಎಂಸಿಜಿ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಗಂಗಾ ನದಿಯ ವಿಶೇಷ ಗುಣ ಲಕ್ಷಣಗಳನ್ನು ಗುರ್ತಿಸಲು ನೀರಿನ ಗುಣಮಟ್ಟ ಮತ್ತು ಮಣ್ಣಿನ ಮೌಲ್ಯಮಾಪನ ನಡೆಸಲಾಗಿತ್ತು.  ಮೌಲ್ಯಮಾಪನ ವರದಿಯ ಪ್ರಕಾರ ಗಂಗಾ ನದಿ ನೀರಿನಲ್ಲಿ ರೋಗ ನಿರೋಧಕ ಬ್ಯಾಕ್ಟೀರಿಯೋಫೇಜಗಳಿವೆ. ಇದು ಬಿಟ್ಟರೇ ಗಂಗಾ ನದಿ ನೀರು ಮತ್ತು ಮಣ್ಣಿನಲ್ಲಿ ಆಂಟಿ ವೈರಲ್ ಗುಣಲಕ್ಷಣಗಳಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಎಲ್ಲದರ ಮಧ್ಯೆ ಗಂಗೆ ಮಾತ್ರ ಶುದ್ಧವಾಗಿ, ಶಾಂತವಾಗಿ ಹರಿಯುತ್ತಿದ್ದಾಳೆ. ಒಟ್ಟಾರೆ ಗಂಗಾ ಶುದ್ಧಿಗೆ ಕೋಟ್ಯಾಂತರ ಹಣ ವ್ಯಯಿಸಲು ರೆಡಿಯಾಗಿದ್ದ ಸರ್ಕಾರಕ್ಕೆ ಇದು ದೇವರ ಕೊಟ್ಟ ವರವಾಗಿ ಪರಿಣಮಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರಿಂದ ವೈನ್ ಶಾಪ್ ಬಂದ್

Fri May 8 , 2020
ಲಾಕ್ ಡೌನ್ ಸಮಯದಲ್ಲಿ ನೆಮ್ಮದಿಯಿಂದ ಇದ್ದ ಗ್ರಾಮಸ್ಥರಿಗೆ ಸಂಕಷ್ಟ ಬಂದೊದಗಿದೆ. ಕುಡಿತದಿಂದ  ಹೊಡೆದಾಟ, ಕೌಟುಂಬಿಕ  ದೌರ್ಜನ್ಯಗಳು ಹೆಚ್ಚಾಗುತ್ತಿರುವುದರಿಂದ ಮಹಿಳೆಯರು ಮದ್ಯದಂಗಡಿ ಬಂದ್ ಮಾಡುವಂತೆ  ಗಲಾಟೆ ಮಾಡಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ. ಮೊನ್ನೆಯಿಂದ ವೈನ್ ಶಾಪ್ ಆರಂಭವಾದ ಹಿನ್ನೆಲೆಯಲ್ಲಿ, ಮದ್ಯಪಾನ ಮಾಡಿ ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದಕ್ಕೆ ಗ್ರಾಮದ ಮಹಿಳೆಯರು ಒಂದಾಗಿ ಬಂದು ವೈನ್ ಶಾಪ್ ಮೇಲೆ ಕಲ್ಲು ತೂರಾಡಿ ತಮ್ಮ ಆಕ್ರೋಶವನ್ನು […]

Advertisement

Wordpress Social Share Plugin powered by Ultimatelysocial