ಉಕ್ರೇನ್ ಯುದ್ದ: ರಷ್ಯಾದಲ್ಲಿ ಜಾಗತಿಕ ಸುದ್ದಿವಾಹಿನಿ ಬಿಬಿಸಿ ಪತ್ರಕರ್ತರ ಕಾರ್ಯ ಸ್ಥಗಿತ

 

ಲಂಡನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರದಂದು ಹೊಸ ಕಾನೂನು ತಂದಿದ್ದಾರೆ. ಇದರ ಅನ್ವಯ, ‘ದೇಶ ಹಾಗೂ ಸೇನೆಯ ವಿರುದ್ಧ ನಕಲಿ ಸುದ್ದಿ ಹಂಚಿದರೆ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದಾಗಿದೆ’.ಈ ಕಾನೂನನ್ನು ಜಾರಿಗೊಳಿಸಿದ ಕೂಡಲೇ, ಬಿಬಿಸಿ, ಸಿಎನ್‌ಎನ್, ಬ್ಲೂಮ್‌ಬರ್ಗ್ ಮತ್ತು ಇತರ ಸುದ್ದಿ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸೀಮಿತಗೊಳಿಸುವುದಾಗಿ ತಿಳಿಸಿವೆ.ರಷ್ಯಾದ ಈ ಶಾಸನವು “ಸ್ವತಂತ್ರ ಪತ್ರಿಕೋದ್ಯಮದ ಪ್ರಕ್ರಿಯೆಯನ್ನು ಅಪರಾಧೀಕರಿಸುವಂತೆ ತೋರುತ್ತಿದೆ” ಬಿಬಿಸಿ ಸಿಬ್ಬಂದಿಯ ಸುರಕ್ಷತೆಯೇ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಬಿಬಿಸಿ ಡೈರೆಕ್ಟರ್-ಜನರಲ್ ಟಿಮ್ ಡೇವಿ ತಿಳಿಸಿದ್ದಾರೆ. ರಷ್ಯನ್ ಭಾಷೆಯಲ್ಲಿ ಬಿಬಿಸಿ ಸುದ್ದಿ ಸೇವೆಯು ರಷ್ಯಾದ ಹೊರಗಿನಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.ಈ ಅನಪೇಕ್ಷಿತ ಬೆಳವಣಿಗೆಯ ಸಂಪೂರ್ಣ ಪರಿಣಾಮಗಳನ್ನು ಅರಿತು ರಷ್ಯಾದ ಒಕ್ಕೂಟದೊಳಗಿನ ಎಲ್ಲಾ ಬಿಬಿಸಿ ನ್ಯೂಸ್ ಪತ್ರಕರ್ತರು ಮತ್ತು ಅವರ ಸಹಾಯಕ ಸಿಬ್ಬಂದಿಯ ಕೆಲಸವನ್ನು ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಯಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅದೃಷ್ಟ ಅಂದ್ರೆ ಇದಪ್ಪಾ..! ಲಾಟರಿಯಲ್ಲಿ ಕೋಟಿ ರೂ. ಗೆದ್ದ ಬಾಣಸಿಗ

Sat Mar 5 , 2022
ಅಬುಧಾಬಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆದ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದೆ. ಕಳೆದ 24 ವರ್ಷಗಳಿಂದ ಲಾಟರಿ ಟಿಕೆಟ್​ಗಳನ್ನು ಖರೀದಿಸುತ್ತಿರುವ ಸೈದಾಲಿ ಕಣ್ಣನ್​ 1998ರಲ್ಲಿ ಮೊದಲ ಬಾರಿಗೆ ನಗದು ಬಹುಮಾನವನ್ನು ಗೆದ್ದಿದ್ದರು. ಇದಾದ ಬಳಿಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾದ ಕಣ್ಣನ್​ ಕೊನೆಗೂ 2022ರಲ್ಲಿ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಣ್ಣನ್​ ಟಿಕೆಟ್​ ಖರೀದಿಸಲು ಸಹಾಯ […]

Advertisement

Wordpress Social Share Plugin powered by Ultimatelysocial