ಗುಟ್ಕಾ-ಸಿಗರೇಟಿಗಾಗಿ ಹಾಹಾಕಾರ

ಲಾಕ್‌ಡೌನ್ ಆಗಿ ನಲವತ್ತು ದಿನಗಳೇ ಕಳೆದಿದೆ, ನಶೆಯ ಸಾಮಾಗ್ರಿಗಳಿಲ್ಲದೆ, ನಾಲಿಗೆ ಸತ್ತುಬಿದ್ದಿದೆ. ತುಟಿಗಳು ಚುಟುಚುಟು ಅಂತಿದೆ. ಇನ್ನಾಗೊಲ್ಲಾ ಕಣ್ರಿ ಅಂತಿದ್ದಾರೆ ಹಲವು ಜನ. ಇದಕ್ಕೆ ಸಾಕ್ಷಿ ಗುಜರಾತ್‌ನ ಸುರೇಂದ್ರ ನಗರ ತಾಲೂಕಿನಲ್ಲಿ ನಡೆದ ಘಟನೆ.
ಬಿಡಿ,ಸಿಗರೇಟು,ಗುಟ್ಕಾ,ಪಾನ್ ಇಲ್ಲದೇನೆ ದಿನಗಳೇ ಹೋಗುತ್ತಿಲ್ಲ. ಇಂತವರ ಆಸೆ ಪೂರೈಸಲು ಇಲ್ಲಿನ ಸುದಾಮ್ದಾ ನಗರದಲ್ಲಿ ಬೀಡಾ ಅಂಗಡಿಯೊAದನ್ನು ಅದರ ಮಾಲೀಕನೊಬ್ಬ ತೆರೆದಿದ್ದ. ಲಾಕ್‌ಡೌನ್ ನಡುವೆ ಅಂಗಡಿ ಓಪನ್ ಮಾಡುವಂತಿಲ್ಲ. ಆದಾಗ್ಯೂ ಶಾಪ್ ಓಪನ್ ಮಾಡಿದ್ದರ ಪರಿಣಾಮ ಎಂಬAತೆ ನೂರಕ್ಕೂ ಹೆಚ್ಚು ಮಂದಿ ಒಂದೆ ಸಲ, ಅಂಗಡಿಯಲ್ಲಿ ತಮಗೆ ಬೇಕಾದನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಎಲ್ಲಿ ಪೊಲೀಸರು ಬಂದು ಬಿಡ್ತಾರೋ? ಎಲ್ಲಿ ಇರೋ ಸ್ಟಾಕ್ ಖಾಲಿಯಾಗಿ ತಮಗೇನು ಸಿಗುವುದಿಲ್ಲ ಎನ್ನುವ ಆತಂಕವೋ? ಏನೋ ಅಲ್ಲಿದ್ದವರು ಅಂಗಡಿಯೊಳಕ್ಕೆ ನುಗ್ಗಿಬಿಟ್ಟಿದ್ದರು. ಕೆಲವರು ಶೆಟರ್ ಹಿಡಿದುಕೊಂಡು ಎಳೆದಾಡಿದ್ರು. ಇನ್ನು ಕೆಲವರು ಇರೋ ಜನರ ಮೈಮೇಲೆ ಹತ್ತಿ ಒಳಕ್ಕೆ ನುಗ್ಗಿದ್ದರು.
ಕೇವಲ ಕೆಲವೇ ನಿಮಿಷಗಳಲ್ಲಿ ಅಂಗಡಿಯಲ್ಲಿ ದೊಂಬಿಯೇ ನಡೆದು ಹೋಯಿತು. ವಿಷಯ ತಿಳಿದು ಸ್ಥಳಕ್ಕೆಬಂದ ಪೊಲೀಸರು ಅಂಗಡಿ ಮಲೀಕನ ವಿರುದ್ಧ ಕೇಸ್ ಜಡಿದು, ಅಂಗಡಿಯಲ್ಲಿದ್ದ ೧೨,೬೦೦ರೂಪಾಯಿಗಳನ್ನು ಜಪ್ತಿ ಮಡಿ ತೆಗೆದುಕೊಂಡು ಹೋಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ವಿಧಿವಶ

Sun May 3 , 2020
ಬೆಂಗಳೂರು:ನಾಡೋಜ ನಿಸ್ಸಾರ್ ಅಹ್ಮದ್ ಇಂದು ಬೆಂಗಳೂರಿನ ಪದ್ಮನಾಭನಗರದ ಮನೆಯಲ್ಲಿ ನಿಧನರಾಗಿದ್ದಾರೆ. ೮೪ ರ‍್ಷದ ನಿಸ್ಸಾರ್ ಅಹ್ಮದ್ ಕೆಲವು ದಿನಗಳಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ರು. ಅಮೇರಿಕಾದಲ್ಲಿ ತಮ್ಮ ಪುತ್ರ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ರು. ಕೊವಿಡ್ ವೈರಸ್ ನಿಂದಾಗಿ ಮಗನ ಅಂತಿಮ ರ‍್ಶನ ಪಡೆಯೋದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಪುತ್ರ ಶೋಕ ಕಾಡಿತ್ತು. ಅಲ್ಲದೆ ವಯೋ ಸಹಜ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ರು. ನವ್ಯ ಸಾಹಿತ್ಯ ಪ್ರಕಾರದಲ್ಲಿ ಕೃಷಿ ಮಾಡಿದ್ದ ನಿಸ್ಸಾರ್ ಅಹ್ಮದ್ ನಿತ್ಯೋತ್ಸವ […]

Advertisement

Wordpress Social Share Plugin powered by Ultimatelysocial