ತಾಯೆ ಬಂದು ನೆಲೆಸೌ ಇಂದಿರೆ ಎನ್ನೆಯ ಮಂದಿರದೊಳಗಾನಂದದಿ

ತಾಯೆ ಬಂದು ನೆಲೆಸೌ
ಇಂದಿರೆ ಎನ್ನೆಯ ಮಂದಿರದೊಳಗಾನಂದದಿ
ಹಲವು ಕಾಲದಿ ಕಾಣದೆ ನಿಮ್ಮನ್ನು
ಬಳಲುತನಿರ್ಪೆನು ದೇವಿಯೆ
ನಳಿನಾನೇತ್ರೆ ಕರುಣಾದಿಂದಲಿ
ಒಲಿದು ಬಂದಿರಿ ದೇವಿಯೆ
ಮುತ್ತು ಮಾಣಿಕ್ಯದ ಮಂಟಪದಲ್ಲಿ
ರತ್ನದ ಪೀಠವನಿರಿಸುವೆನು
ವಿಷ್ಣು ಸಹಿತಲೆ ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಪೂಜಿಪೆ
ವರಮಣಿ ಖಚಿತದ ನೆರೆಗಿಂಡಿಯೊಳು
ಸುರನದಿ ಗಂಗೆಯ ತುಂಬುತಲಿ
ಸಿರಿವರನರಸಿಯ ಚರಣವ ತೊಳೆದು
ವರವಸ್ತ್ರಗಳಿಂದೊರೆಸುವೆನು
ಅಂಗಜ ಮಾತೆಗೆ ಅಭಿಷೇಕವನು
ಸಂಭ್ರಮದಿಂದಲಿ ಮಾಡುವೆನು
ಅಂದವಾದ ಪೀತಾಂಬರವನು
ಸುಂದರನಡುವಿನೊಳುಡಿಸುವೆನು
ಸಿರಿಮುಡಿಯೆಳೆಸುತ ಹೆರಳನು ಹಾಕುತ
ಪರಿಪರಿ ಕುಸುಮವ ಮುಡಿಸುವೆನು
ಸರಸೀಜಾಕ್ಷಿಗೆ ಸರ್ವಾಭರಣವ
ಪರಮಾದರದಿ ಹಾಕುವೆ
ಅರಶಿನ ಕುಂಕುಮ ಅಕ್ಷತೆ ಗಂಧ
ಪರಿಪರಿ ಕುಸುಮದ ಮಾಲೆಗಳ
ಸಿರಿವರನರಸಿಯ ಕೊರಳಿಗೆ ಹಾರವ
ಪರಮಾದರದಿ ಹಾಕುವೆ
ಪರಿಪರಿ ಪುಷ್ಪದಿಂದೊಡಗೂಡುತಲಿ
ವರಧೂಪಾದಿ ದೀಪಗಳ
ಬಗೆಬಗೆ ಭಕ್ಷ ಪಾಯಸದಿಂದಲೆ
ಮಿಗಿಲಾರೊಗಣೆ ಮಾಡುವೆ
ಮಂಗಳವಾದ್ಯದಿಂದೊಡಗೂಡುತಲಿ
ಅಂಗನೆಯರೆಲ್ಲರು ಹರುಷದಲಿ
ಮಂಗಳಾರತಿ ಎತ್ತಿ ಚಂದದಿ
ವಂದಿಸಿ ನಾನು ಬೇಡುವೆ
ರಕ್ಷಿಸು ರಕ್ಷಿಸು ತಾಯೆ ನಮ್ಮನು
ಪ್ರದಕ್ಷಿಣೆಗಳ ನಾ ಮಾಡುವೆನು
ರಕ್ಷಿಸೆಮ್ಮನು ಲಕ್ಷ್ಮೀ ನಿಮ್ಮನು

ಅರ್ಥಿಯಿಮ್ ಧ್ಯಾನಿಸಿ ಬೇಡುವೆಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನಂತ ಕಲ್ಲೋಳ

Mon Mar 28 , 2022
  ಅನಂತ ಕಲ್ಲೋಳ ಹಾಸ್ಯ ಬರಹಗಳಿಗೆ ಹೆಸರಾದ ವಿದ್ವಾಂಸರು. ಅನಂತಕಲ್ಲೋಳ 1937ರ ಮಾರ್ಚ್ 24ರಂದು ಕೊಲ್ಲಾಫುರದಲ್ಲಿ ಜನಿಸಿದರು. ತಂದೆ ಅಣ್ಣಾಜಿ ಕಲ್ಲೋಳ. ತಾಯಿ ರಮಾಬಾಯಿ. ಕನ್ನಡ ಗಂಡು ಮಕ್ಕಳ ಶಾಲೆ ಕ್ರಮಾಂಕ-೧ರಲ್ಲಿ ಇವರ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ನಡೆಯಿತು. ಹೈಸ್ಕೂಲು ವಿದ್ಯಾಭ್ಯಾಸ ಬೆಳಗಾವಿಯಲ್ಲಿ ನಡೆಯಿತು. ನಂತರ ಫಿಲಾಸಫಿ ಮತ್ತು ಸೈಕಾಲಜಿ ವಿಷಯಗಳಲ್ಲಿ ಬಿ.ಎ. ಆನರ್ಸ್ ಪದವಿಗೆ ಬೆಳಗಾವಿಯ ಲಿಂಗರಾಜ ಕಾಲೇಜು ಮತ್ತು ವಿಜಾಪುರದ ವಿಜಯ ಕಾಲೇಜುಗಳಲ್ಲಿ ಓದಿದರು. ಅನಂತ ಕಲ್ಲೋಳ […]

Advertisement

Wordpress Social Share Plugin powered by Ultimatelysocial