ಚೀನಾ ವಿರುದ್ದ  ಹಾಕಿದ್ದ ಪೋಸ್ಟ್ ತೆಗೆದು ಹಾಕಿದ  ಟಿಕ್ ಟಾಕ್

ಭಾರತದಲ್ಲಿ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿರುವ ಆಪ್ ಗಳಲ್ಲಿ ಟಿಕ್ ಟಾಕ್ ಮುಂಚೂಣಿಯಲ್ಲಿದೆ. ಚೀನಾ ಮೂಲದ ಈ ಆಪ್ ಅನ್ನು ರಿಮೂವ್ ಮಾಡುವ ಅಭಿಯಾನ ಕೂಡ ನಡೆಸಲಾಗಿತ್ತು. ಇದೀಗ ಟಿಕ್ ಟಾಕ್ ಚೀನಾ ವಿರುದ್ಧದ ಪೋಸ್ಟ್ ಗಳಿಗೆ ಕೊಕ್ ನೀಡುತ್ತಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಖ್ಯಾತ ಕಮೆಡಿಯನ್ ಸಲೋನಿ ಗೌರ್ ಟಿಕ್ ಟಾಕ್ ನಲ್ಲಿ ಹಾಕಿದ್ದ ಪೋಸ್ಟ್ ಒಂದನ್ನು ತೆಗೆದು ಹಾಕಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಗೌರ್, ಟಿಕ್ ಟಾಕ್ ಈವರೆಗೆ ಮಹಿಳೆಯರ ಮೇಲಿನ ದೌರ್ಜನ್ಯ, ಪ್ರಾಣಿಹಿಂಸೆ ಮೊದಲಾದ ವಿಡಿಯೋಗಳನ್ನು ತೆಗೆದು ಹಾಕುತ್ತಿತ್ತು. ಈಗ ಚೀನಾ ವಿರುದ್ಧ ನಾನು ಮಾಡಿರುವ ವಿಡಂಬನಾತ್ಮಕ ವಿಡಿಯೋವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪಿಯೂಷ್ ಗೋಯಲ್  ತಾಯಿ ನಿಧನ

Sat Jun 6 , 2020
ನವದೆಹಲಿ: ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ ಚಂದ್ರಕಾಂತ ಗೋಯಲ್ ಇಂದು ಸಾವನ್ನಪ್ಪಿದ್ದು, ಈ ಕುರಿತು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಸಚಿವ ಗೋಯಲ್, ನನಗೆ ಇಷ್ಟು ಪ್ರೀತಿ, ವಾತ್ಸಲ್ಯದ ದಾರಿ ತೋರಿಸಿದ ತಾಯಿ ಇಂದು ಮುಂಜಾನೆ ನಿಧನರಾಗಿದ್ದಾರೆ. ತಾಯಿ ತೋರಿದ ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರು ತಮ್ಮ ಇಡೀ ಜೀವನವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದರು. ಇತರರ ಸೇವೆ ಸಲ್ಲಿಸುವ […]

Advertisement

Wordpress Social Share Plugin powered by Ultimatelysocial