ಜೋಗ ಜಲಪಾತಕ್ಕೆ ಪ್ರವಾಸಿಗರ ಭೇಟಿಗೆ ಅನುಮತಿ

ಸಾಗರ: ಎರಡೂವರೆ ತಿಂಗಳ ನಂತರ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರ ಭೇಟಿಗೆ ಅನುಮತಿ ನೀಡಲಾಗಿದೆ. ಕೊರೊನಾ ವೈರಸ್‌ ಲಾಕ್‌ಡೌನ್‌ನ ಬಳಿಕ ಮತ್ತೆ ಜೋಗದಲ್ಲಿ ಪ್ರವಾಸಿಗರ ಸದ್ದು ಕೇಳುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗಕ್ಕೆ ರಾಜ್ಯದ ಅನೇಕ ಭಾಗಗಳಿಂದ ಜನರು ಭೇಟಿ ನೀಡುತ್ತಾರೆ. ಲಾಕ್‌ಡೌನ್‌ನಿಂದ ಪ್ರವಾಸಿಗರಿಗೆ ನಿರ್ಬಂಧ ಇತ್ತು, ಆದರೆ, ಇಂದಿನಿಂದ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಬಹುದಾಗಿದೆ. ಕೊರೊನಾ ವೈರಸ್ ನಿಂದಾಗಿ ಜೋಗದಲ್ಲಿಯೂ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಿದೆ. ಪ್ರವಾಸಿಗರು ಮಾಸ್ಕ್‌ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಜೋಗ ನೋಡಲು ಬಂದವರಲ್ಲಿ ಹಲವರು ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಕೂತು ಊಟ ಮಾಡಿ ಕಾಲ ಕಳೆಯುತ್ತಿದ್ದರು. ಆದರೆ, ಸದ್ಯಕ್ಕೆ ಊಟ ಹಾಗೂ ತಿಂಡಿಗೆ ನಿಷೇಧ ಮಾಡಲಾಗಿದೆ. ಪ್ರವಾಸಿಗರಿಗೆ ಜೋಗ ಜಲಪಾತ ನೋಡಲು ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಹಲವು ಕಡೆ ಔಷಧಿ ಸಿಂಪಡನೆ ಮಾಡಿದ್ದು, ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಳೆಗಾಲದ ಪ್ರಾರಂಭ ಆಗಿದ್ದು, ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿ ಇರಲಿದೆ. ಜೋಗಕ್ಕೆ ಬರುವ ಪ್ರವಾಸಿಗರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ಸ್ಯಾನಿಟೈಸರ್‌ಮಾಡಲಾಗುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ

Mon Jun 8 , 2020
ಚಾಮರಾಜನಗರ: ಮೂವರು ವಿದೇಶಿಯರು ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅರಣ್ಯದ ರಸ್ತೆಗಳಲ್ಲಿ ಸುತ್ತಾಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಬಾಡಿಗೆ ಬೈಕ್​ಗಳಲ್ಲಿ ಬಂದಿದ್ದ ಅವರು ಅನುಮತಿಯಿಲ್ಲದೆ ಬಂಡೀಪುರ ಅರಣ್ಯ ಪ್ರವೇಶಿಸಿ ಸುತ್ತಾಡಿದ್ದಾರೆ. ಇವರನ್ನು ಅರಣ್ಯ ಸಿಬ್ಬಂದಿ ತಡೆದು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ ಒರಟಾಗಿ ವರ್ತಿಸಿ ರೇಗಾಡಿದ್ದಾರೆ. ಹೀಗಾಗಿ ಈ ಮೂವರನ್ನು ಅತಿಕ್ರಮಪ್ರವೇಶದ ಆರೋಪದ ಮೇರೆಗೆ ಗುಂಡ್ಲುಪೇಟೆ ಪೊಲೀಸರ ವಶಕ್ಕೆ ನೀಡಲಾಗಿದೆ. ಡಿ.ಆರ್.ಡಿ.ಓದಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಲು ಪೋರ್ಚುಗೀಸ್ ದೇಶದ […]

Advertisement

Wordpress Social Share Plugin powered by Ultimatelysocial