ಠಾಣೆಗಳಿಗೆ ಸ್ಯಾನಿಟೈಸೇಷನ್

ದೊಡ್ಡಬಳ್ಳಾಪುರ ನಗರದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಆದೇಶದ ಮೇರೆಗೆ ಪೊಲೀಸ್ ಠಾಣೆಗಳಿಗೆ ಡ್ರೋಣ್ ಮೂಲಕ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಸುರಕ್ಷಿತ ದೃಷ್ಠಿಯಿಂದ ಸಿಟ್ರೋ ಬಯೋ ಶೀಲ್ಡ್ ಸೋಂಕು ನಿವಾರಕವನ್ನು ಪೊಲೀಸ್ ಠಾಣೆ ಮೇಲೆ ಡ್ರೋಣ್ ಮೂಲಕ ಸಿಂಪಡಣೆ ಮಾಡಲಾಗುತ್ತಿದೆ. ಈ ಸೋಂಕು ನಿವಾರಕ ಹಾನಿಕಾರಕವಲ್ಲದ ಆರ್ಗಾನಿಕ್ ಆಗಿದೆ. ಮೊದಲು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಲಾಗಿದ್ದು, ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ಠಾಣೆಗಳಲ್ಲೂ ಸಿಂಪಡಣೆ ಮಾಡಲಾಗುತ್ತದೆ. ಪೊಲೀಸರ ಬಗ್ಗೆ ಕಾಳಜಿವಹಿಸಿರುವ ಎಸ್‌ಪಿ ಚನ್ನಣ್ಣನವರ್ ಅವರ ಈ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

 ಆಸ್ಪತ್ರೆಗೆ ಹೋಗುವವರ ಗತಿ ಅದೋಗತಿ

Tue Jun 30 , 2020
ಕೊರೊನಾದಿಂದ ಜನರು ತತ್ತರಿಸಿಹೋಗಿದ್ದು, ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ಬಡವರ ಕರುಳನ್ನ ಕಿತ್ತು ತಿನ್ನುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ ಸಂಪೂರ್ಣ ಲಂಚಾವತಾರದ ಕೇಂದ್ರವಾಗಿ ಪರಿಣಮಿಸಿದ್ದರೂ ಕೂಡ ಯಾರೂ ಈ ಬಗ್ಗೆ ಕ್ಯಾರೆ ಅನ್ನುತ್ತಿಲ್ಲ. ಹೆರಿಗೆ ಮಾಡಲು ಹಣ ಪಡೆಯಲಾಗುತ್ತಿರುವ ವಿಷಯ ತಿಳಿದರೂ ಕೂಡ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಮಹೇಶ ಕುಮಠಳ್ಳಿ ಅವರ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. […]

Advertisement

Wordpress Social Share Plugin powered by Ultimatelysocial