ಉತ್ತರ ಪ್ರದೇಶ: ಕಾನ್ಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆಯೊಬ್ಬರು ಮಾತನಾಡಿರುವ ವಿಡಿಯೋ ಒಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ತಬ್ಲಿಘಿ ಜಮಾತ್ ಸದಸ್ಯರನ್ನು ಅವರು ಭಯೋತ್ಪಾದಕರು ಎಂದು ಕರೆದಿದ್ದಾರೆ. ತಮ್ಮ ಕಚೇರಿಯಲ್ಲಿ ಹಲವು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಾಂಶುಪಾಲೆ. ಕೊರೊನಾ ಸೋಂಕು ಅಂಟಿಸಿಕೊಂಡ ತಬ್ಲಿಘಿ ಜಮಾತ್ ಸಂಘಟನೆ ಸದಸ್ಯರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ ಎಂದಿದ್ದಾರೆ. ತಬ್ಲಿಘಿ ಜಮಾತ್ ಸದಸ್ಯರಿಗೆ ಚಿಕಿತ್ಸೆ ನೀಡಲು ಐಸೋಲೇಷನ್ ವಾರ್ಡ್‌ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ತೆರಿಗೆದಾರರ ಕೋಟ್ಯಂತರ ರೂ ಹಣ ವ್ಯಯವಾಗುತ್ತಿದೆ ಎಂದು ಹೇಳಿದ್ದಾರೆ. ಇವರಿಗೆ ಈ ರೀತಿ ಚಿಕಿತ್ಸೆ ಕೊಡುವ ಬದಲು ಕಾಡುಗಳಲ್ಲಿ ಬಿಡಬೇಕು ಅಥವಾ ಜೈಲುಗಳಲ್ಲಿ ಕೂಡಿ ಹಾಕಬೇಕು ಎಂದು ಗುಡುಗಿದ್ದಾರೆ. ಈ ವಿಡಿಯೋ ಎಂದು ಚಿತ್ರೀಕರಣ ಮಾಡಲಾಗಿತ್ತು ಅನ್ನೋದು ತಿಳಿದುಬಂದಿಲ್ಲ. ಆದ್ರೆ, ಪ್ರಾಂಶುಪಾಲೆ ಆರತಿ ಲಾಲ್‌ಚಂದಾನಿ ಮಾತನಾಡುತ್ತಿರುವುದು ಈ ವಿಡಿಯೋದಲ್ಲಿ ಆಡಿಯೋ ಸಮೇತ ದಾಖಲಾಗಿದೆ.
ತಬ್ಲಿಘಿ ಜಮಾತ್ ಸದಸ್ಯರು ಭಯೋತ್ಪಾದಕರು: ಪ್ರಾಂಶುಪಾಲೆ

Please follow and like us: