ದೇಹ ದಾನ ಮಾಡಲು ಮುಂದಾದ ಯುವಕ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ವಿರೇಶ್ ಕುರವತ್ತಿ ಎಂಬ ಯುವಕ ಕೊರೊನಾ ಸಂಬಂಧ ನಡೆಯುತ್ತಿರುವ ಪ್ರಯೋಗಕ್ಕೆ ತನ್ನ ದೇಹವನ್ನು ಬಳಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾನೆ.ಯುವಕ ವಿರೇಶ್ ಕುರುವತ್ತಿ ನರಸಾಪುರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿದ್ದು, ಎಬಿವಿಪಿ ಕಾರ್ಯಕರ್ತನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾನೆ.ದೇಶಕ್ಕಾಗಿ ತನ್ನಿಂದ ಏನಾದರೂ ಸೇವೆ ಮಾಡಲು ಮನಸ್ಸು ಹಂಬಲಿಸುತ್ತಿತ್ತು. ಕೊನೆ ಪಕ್ಷ ಕೊರೊನಾ ವೈರಸ್ ಔಷಧಿ ಪ್ರಯೋಗಕ್ಕಾದರೂ ನನ್ನ ದೇಹ ದಾನ ಮಾಡಿ ವಿಶ್ವದಲ್ಲಿ ಆಗುತ್ತಿರುವ ಸಾವು-ನೋವುಗಳು ನಿಯಂತ್ರಣಕ್ಕೆ ಬರಲು ಸಹಕಾರಿಯಾಗುತ್ತದೆ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾನೆ.

Please follow and like us:

Leave a Reply

Your email address will not be published. Required fields are marked *

Next Post

ಸಹೋದರಿಯ ಪುನರ್ ಮಿಲನ

Sat May 23 , 2020
ಡೇವ್ ಎಂಬ ನಾಯಿ ಮರಿ ತನ್ನ ಮಾಲೀಕನೊಂದಿಗೆ ವಾಕ್ ಮಾಡುವ ಸಂದರ್ಭದಲ್ಲಿ ಎದುರಾದ ತನ್ನ ಸಹೋದರಿಯನ್ನು ಗುರುತಿಸಿ ಮನುಷ್ಯರ ರೀತಿ ತಬ್ಬಿಕೊಂಡ ಪ್ರಸಂಗ ನಡೆದಿದೆ. ಮನುಷ್ಯ ಕುಟುಂಬ ಪುನರ್ಮಿಲನಗಳು ಯಾವಾಗಲೂ ನಡೆಯುತ್ತಿರುತ್ತವೆ. ಇಂತ ಪುನರ್‌ಮಿಲನಗಳು ವ್ಯಕ್ತಿಗಳನ್ನು ಭಾವುಕರನ್ನಾಗಿಸುತ್ತದೆ. ಆದರೆ, ಈ ಸುದ್ದಿ ನಾಯಿ ಮರಿಗಳಿಗೆ ಸಂಬಂಧಿಸಿದ ಪುನರ್ಮಿಲನ. ಲಿಬ್ಬಿ ಎಂಬುವರು ತಮ್ಮ ತಂದೆ ಕಳಿಸಿದ ಎರಡು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ನಾಯಿ ಮರಿಗಳು ಒಟ್ಟಿಗೆ ಹುಟ್ಟಿದ್ದು, […]

Advertisement

Wordpress Social Share Plugin powered by Ultimatelysocial