ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ, ಸ್ಥಳಪರಿಶೀಲನೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆಯಾಜ್ಞೆ ನೀಡಿದ್ದು, ಯಾವುದೇ ಅಧ್ಯಯನ ಪ್ರವಾಸ ಕೈಗೊಳ್ಳದಿರಲು ಆದೇಶ ಹೊರಡಿಸಿದ್ದಾರೆ. ಸ್ಪೀಕರ್ ಆದೇಶಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಭ್ರಷ್ಟಾಚಾರ ಕುರಿತು ತನಿಖೆ ಮಾಡಲು ಸ್ಪೀಕರ್ ನೀಡಿರುವ ತಡೆ ಸಂವಿಧಾನ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನ ಬುಡಮೇಲು ಮಾಡುತ್ತದೆ. ವಿಧಾನಮಂಡಲ ಸಮಿತಿಗಳ ಅಧಿಕಾರ ಮೊಟಕುಮಾಡುವ ಪ್ರಯತ್ನ ತಕ್ಷಣ ಕೈಬಿಡಿ ಎಂದು ಮನವಿ ಮಾಡಿದ್ದಾರೆ.
ಪರಿಶೀಲನೆಗೆ ಸ್ಪೀಕರ್ ತಡೆಯಾಜ್ಞೆ

Please follow and like us: