ಕಿಚ್ಚನ ಸುದ್ದಿ  – ಅಕ್ಟೋಬರ್‌ 11ರಿಂದ ಕೋಟಿಗೊಬ್ಬ 3 ಅಡ್ವಾನ್ಸ್ಡ್ ಟಿಕೆಟ್ ಬುಕಿಂಗ್ ಶುರು

ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಕುತೂಹಲ ಮೂಡಿಸಿ ಕಾತುರದಿಂದ ಕಾಯುತ್ತಿರುವ ಚಿತ್ರ ಅಂದ್ರೆ ಕೋಟಿಗೊಬ್ಬ 3 . ಅಭಿನಯ ಚಕ್ರವರ್ತಿ  ಸುದೀಪ ಅಭಿನಯದ ಕೋಟಿಗೊಬ್ಬ3 ರಾಜ್ಯಾದ್ಯಂತ 1,000 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲು  ಸಿದ್ಧತೆ ನಡೆದಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ. ಸದ್ಯಕ್ಕೆ 1,000 ಸ್ಕ್ರೀನ್ ಗಳು ಎಂದುಕೊಂಡಿದ್ದರೂ ಮುಂಬರಲಿರುವ ದಿನಗಳಲ್ಲಿ ಸ್ಕ್ರೀನ್ ಸಂಖ್ಯೆಯನ್ನು ಏರಿಸಲಿದ್ದೇವೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ.

ಕೋಟಿಗೊಬ್ಬ3 ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣಪತ್ರ ಸಿಕ್ಕಿದ್ದು ,ಈ ಚಿತ್ರ ಅಕ್ಟೋಬರ್ 14ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲು ಸಿದ್ದವಾಗಿದೆ. ದಸರಾ ಹಬ್ಬದ ಸಂಭ್ರಮದ ನಡುವೆ ತೆರೆ ಕಾಣುತ್ತಿರುವುದರಿಂದ ಹಬ್ಬದ ಉತ್ಸಾಹದ ಜೊತೆಗೇ ಸಿನಿಮಾ ನೋಡಿ ಸಂಭ್ರಮ ಹೆಚ್ಚಿಸಿಕೊಳ್ಳುವ  ಸುಸಂದರ್ಭ ಎಂದು ಸೂರಪ್ಪ ಬಾಬು ಆಶಿಸಿದ್ದಾರೆ.

ಸಿನಿಮಾಗೆ ಅಡ್ವಾನ್ಸ್ಡ್ ಟಿಕೆಟ್ ಬುಕಿಂಗ್ ಅಕ್ಟೋಬರ್ 11-12 ರಿಂದ ಶುರುವಾಗಲಿದೆ.ಆಯುಧ ಪೂಜೆಯ ದಿನವೇ ಬಿಡುಗಡೆಯಾಗುತ್ತಿರುವುದರಿಂದಾಗಿ  ಆ ದಿನ ಮಾರ್ನಿಂಗ್ ಶೋ ಇರುವುದಿಲ್ಲ. ಜನರು ಆಯುಧ ಪೂಜೆ ಹಬ್ಬವನ್ನು ಮುಗಿಸಿ  ನಂತರ ಸಿನಿಮಾ ನೋಡಲು ಮನೆಮಂದಿ ಸಹಿತ ಚಿತ್ರಮಂದಿರಕ್ಕೆ ಬರಲಿ ಎನ್ನುವ ಕಾರಣಕ್ಕೆ ಚಿತ್ರತಂಡ ಈ ನಿರ್ಧಾರ  ತೆಗೆದುಕೊಂಡಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಮಾಧುರಿ ದೀಕ್ಷಿತ್ ಕೇಶ ಸೌಂದರ್ಯದ ಗುಟ್ಟು..!

Thu Oct 7 , 2021
                ಬಾಲಿವುಡ್ನ ಎವರ್ಗ್ರೀನ್ ತಾರೆ ಸೌಂದರ್ಯದ ಗಣಿ ಮಾಧುರಿ ದೀಕ್ಷಿತ್ರ ವಯಸ್ಸು 54. ಆದರೂ 30 ವರ್ಷದವರಂತೆ ಕಾಣುವ ಅವರು ಇತ್ತೀಚೆಗೆ ತಮ್ಮ ಸುಂದರ ಕೇಶರಾಶಿಯ ಸೌಂದರ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ. ನನ್ನ ಮುಖ ಮತ್ತು ಕೂದಲಿಗೆ ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸುತ್ತೇನೆ ನನ್ನ ಕೂದಲ ಆರೈಕೆಯನ್ನು ಮನೆಯಲ್ಲೇ ತಯಾರಿಸಿದ ಎಣ್ಣೆಯಿಂದ ಮಾಡಿಕೊಳ್ಳುತ್ತೇನೆ ಎಂದಿರುವ ಅವರು ಎಣ್ಣೆಯನ್ನು ತಯಾರಿಸುವ […]

Advertisement

Wordpress Social Share Plugin powered by Ultimatelysocial