ಬೆಂಗಳೂರು: ಲಾಕ್ಡೌನ್ ಹಂತ ಹಂತವಾಗಿ ಸಡಿಲಿಕೆ ಆದ ಬೆನ್ನಲ್ಲೇ ಜನರ ಸಂಚಾರಕ್ಕಾಗಿ ಬಿಎಂಟಿಸಿ ಬಸ್ಗಳು ರಸ್ತೆಗಿಳಿದಿವೆ. ಆದರೆ ಜನ ಮಾತ್ರ ಬಸ್ಗಳತ್ತ ಮುಖ ಮಾಡುತ್ತಿಲ್ಲರಲಿಲ್ಲ. ಇದಕ್ಕೆ ಕೊರೊನಾ ಭಯ ಕಾರಣ ಇರಬಹುದಾ ಅಂತಾ ಯೋಚಿಸಲಾಗಿತ್ತು. ಆದರೆ ಅಸಲಿ ಕಥೆ ಕೋವಿಡ್ ಆತಂಕವಲ್ಲ, ಬದಲಿಗೆ ಡೈಲಿ ಪಾಸ್ 70 ರೂಪಾಯಿ ನಿಗದಿ ಮಾಡಿರೋದು ಎಂಬ ಸತ್ಯ ತಿಳಿದುಬಂದಿದೆ. ಸಾಕಷ್ಟು ವಿರೋಧಗಳು ವ್ಯಕ್ತವಾದ ನಂತರ ಬಿಎಂಟಿಸಿ ಟಿಕೆಟ್ ರೇಟಿನಲ್ಲಿ ಸಡಿಲಿಕೆ ತಂದರೂ ಕೂಡಾ, ಕಿಲೋ ಮೀಟರ್ ಪ್ರಯಾಣದ ಮೂಲಕ ಹೊಸ ದರವನ್ನ ನಿಗದಿ ಮಾಡಿತು. ಹೀಗೆ ಹೊಸ ದರ ನಿಗದಿ ಮಾಡಿದ ಬೆನ್ನಲ್ಲೇ, ಖಾಲಿ ಖಾಲಿಯಾಗಿದ್ದ ಬಸ್ ನಿಲ್ದಾಣ ಹಾಗೂ ಬಸ್ಗಳು ಭರ್ತಿಯಾಗಿವೆ. ಜನಸಾಮಾನ್ಯರು ಕೊರೊನಾ ವೈರಸ್ ಭಯವಿಲ್ಲದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಬಸ್ಸು ಹತ್ತುವ ದೃಶ್ಯಗಳು ಇದೀಗ ಕಂಡುಬಂದಿವೆ.
ಪ್ರಯಾಣಿಕರಿಂದ ಭರ್ತಿಯಾದ ಬಿಎಂಟಿಸಿ

Please follow and like us: