ಮಂಗಳೂರು: ಲಾಕ್ಡೌನ್ ಬಳಿಕ ಸ್ಥಗಿತಗೊಂಡಿದ್ದ ದೇಶೀಯ ನಾಗರಿಕ ವಿಮಾನಯಾನ ಇಂದು ಆರಂಭಗೊಂಡಿದ್ದರೂ, ಪ್ರಯಾಣಿಕರ ಕೊರತೆಯಿಂದಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆಯ ತನಕ ಯಾವುದೇ ವಿಮಾನಗಳು ಹಾರಾಟ ನಡೆಸಲಿಲ್ಲ. ಇಂದು ಆರು ವಿಮಾನಗಳ ಆಗಮನ ಮತ್ತು ನಿರ್ಗಮನ ನಿಗದಿಯಾಗಿತ್ತು. ಈ ಪೈಕಿ ಮುಂಬೈ- 2, ಚೆನ್ನೈ ಮತ್ತು ಬೆಂಗಳೂರಿನ ತಲಾ ಒಂದು ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದಾಗಿದೆ. ಸಂಜೆ ಬೆಂಗಳೂರಿನಿಂದ 2 ವಿಮಾನಗಳ ಆಗಮನ ಮತ್ತು ನಿರ್ಗಮನ ಮಾತ್ರ ನಿಗದಿಯಾಗಿದೆ.
ಪ್ರಯಾಣಿಕರಿಲ್ಲದ ಬಿಕೋ ಎನ್ನುತ್ತಿರುವ ವಿಮಾನ ನಿಲ್ದಾಣ

Please follow and like us: