ಚಾಮರಾಜನಗರ: ಮೂವರು ವಿದೇಶಿಯರು ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅರಣ್ಯದ ರಸ್ತೆಗಳಲ್ಲಿ ಸುತ್ತಾಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಬಾಡಿಗೆ ಬೈಕ್ಗಳಲ್ಲಿ ಬಂದಿದ್ದ ಅವರು ಅನುಮತಿಯಿಲ್ಲದೆ ಬಂಡೀಪುರ ಅರಣ್ಯ ಪ್ರವೇಶಿಸಿ ಸುತ್ತಾಡಿದ್ದಾರೆ. ಇವರನ್ನು ಅರಣ್ಯ ಸಿಬ್ಬಂದಿ ತಡೆದು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ ಒರಟಾಗಿ ವರ್ತಿಸಿ ರೇಗಾಡಿದ್ದಾರೆ. ಹೀಗಾಗಿ ಈ ಮೂವರನ್ನು ಅತಿಕ್ರಮಪ್ರವೇಶದ ಆರೋಪದ ಮೇರೆಗೆ ಗುಂಡ್ಲುಪೇಟೆ ಪೊಲೀಸರ ವಶಕ್ಕೆ ನೀಡಲಾಗಿದೆ. ಡಿ.ಆರ್.ಡಿ.ಓದಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಲು ಪೋರ್ಚುಗೀಸ್ ದೇಶದ ನೂನೋ ರಿಕಾರ್ಡೋ ಬೆರ್ನಾಡೆಸ್ ಮಿರಾಂಡಾ, ಏಂಜೆಲೋ ಮೈಗ್ವೆಲ್ ಗ್ಯಾರಿಡೋ ಮತ್ತು ಥಾಮಸ್ ಪಿನ್ಹೋ ಮಾರ್ಕಿಜ್ ಎಂಬುವರು ಬೆಂಗಳೂರಿಗೆ ಬಂದಿದ್ದು ಅಲ್ಲಿಂದ ಅನುಮತಿ ಇಲ್ಲದೆ ಬಂಡೀಪುರಕ್ಕೆ ಬಂದಿದ್ದರು.
ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ

Please follow and like us: