UP Budget 2023: ಮೆಟ್ರೋ ರೈಲು ಸೇರಿ ಮೂಲಸೌಲಭ್ಯಗಳ ಅಭಿವೃದ್ಧಿಗೆ ₹ 55000 ಕೋಟಿ ಘೋಷಣೆ

ಖನೌ, ಫೆಬ್ರವರಿ 26: ಉತ್ತರ ಪ್ರದೇಶದ ರಾಜ್ಯ ಸರ್ಕಾರವು ಇಲ್ಲಿನ ಸರ್ವ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಅದರ ಭಾಗವಾಗಿ ಯೋಜನೆಗಳಿಗೆ ಅನುದಾನ ನೀಡುತ್ತಿದ್ದು, ಮೆಟ್ರೋ ರೈಲು ಮತ್ತು ಎಕ್ಸ್‌ಪ್ರೆಸ್‌ವೇ ಸೇರಿ ಮೂಲಸೌಲಭ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಘೋಷಿಸಿದೆ.

ರಾಜ್ಯ ಬಜೆಟ್ ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಡಿಸಿದ್ದಾರೆ. ಮೆಟ್ರೋ ರೈಲು ಮತ್ತು ಎಕ್ಸ್‌ಪ್ರೆಸ್‌ವೇ ಸೇರಿ ಮೂಲಸೌಲಭ್ಯಗಳ ಯೋಜನೆಗೆ ಅವರು, 55,000 ಕೋಟಿ ರೂ. ಹಣವನ್ನು ಒದಗಿಸುವುದಾಗಿ ಘೋಷಣೆ ಮಾಡಿದ್ದಾರೆ.

ಇವುಗಳ ಜೊತೆಗೆ ಶಿಕ್ಷಣ ಹಾಗೂ ಇತರ ವಲಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಅವುಗಳಿಗೆ ಬಜೆಟ್‌ನಲ್ಲಿ ಹೆಚ್ಚು ಹಣ ಒದಗಿಸಲಾಗಿದೆ. ದೇಶದ ದಕ್ಷಿಣದ ರಾಜ್ಯಗಳು ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿ ಯಾವಾಗಲೂ ಅಗ್ರಸ್ಥಾನದಲ್ಲಿವೆ. ಅದೇ ರೀತಿ ದೇಶದ ಉತ್ತರ ಭಾಗದ ರಾಜ್ಯಗಳು ಈ ವಲಯಗಳಲ್ಲಿ ಸೂಚ್ಯಂಕಗಳಲ್ಲಿ ಹಿಂದುಳಿದಿವೆ ಎನ್ನಲಾಗಿದೆ.

ದೇಶದ ಉತ್ತರ ಭಾಗದ ಪ್ರಮುಖ ರಾಜ್ಯಗಳಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರದಂತಹ ರಾಜ್ಯಗಳು ಕೆಟ್ಟ ಸ್ತರದಲ್ಲಿವೆ. ಈ ಸಂದರ್ಭದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶವನ್ನು ಎಲ್ಲಾ ಹಂತಗಳಲ್ಲಿ ರಾಜ್ಯವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿದ್ದು, ಅದಕ್ಕಾಗಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಆ ನಿಟ್ಟಿನಲ್ಲಿ ಅಗತ್ಯ ಕ್ರಮಗಳಲ್ಲಿ ಯುಪಿ ಸರ್ಕಾರ ಇತ್ತೀಚೆಗೆ ಹೆಚ್ಚಿನ ಗಮನ ಹರಿಸುತ್ತಿದೆ.

ಯುಪಿ ಪ್ರತಿ ಜಿಲ್ಲೆ, ನಗರದಲ್ಲಿ ಮೆಟ್ರೋ: ಚಿಂತನೆ

ಮಂಡಿಸಲಾದ ಯುಪಿ 2023-24ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚಿನ ಹಣ ಮೀಸಲಿಡಲಾಗಿದೆ. ಮೂಲಸೌಲಭ್ಯಗಳು ಯಾವವು ಎಂದು ನೋಡುವುದಾದರೆ ಮುಖ್ಯವಾಗಿ ಮೆಟ್ರೋ ರೈಲು, ಹೊಸ ರಸ್ತೆಗಳು, ರಸ್ತೆ ವಿಸ್ತರಣೆ, ರೂ. 55,000 ಕೋಟಿ ಹಂಚಿಕೆಯಾಗಿದೆ. ಈ ಎಲ್ಲವುಗಳು ರಾಜ್ಯದ ಅಭಿವೃದ್ಧಿಯನ್ನು ಸೂಚಿಸುತ್ತವೆ ಎಂದು ಯುಪಿ ಸರ್ಕಾರದ ಅಭಿಪ್ರಾಯವಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿವೃದ್ಧಿ ವಿಚಾರದಲ್ಲಿ ದೃಢವಾಗಿದ್ದರಿಂದಲೇ ರಾಜ್ಯದಲ್ಲಿ ಹೊಸ ವಿಮಾನ ನಿಲ್ದಾಣಗಳು ಸ್ಥಾಪನೆಯಾಗಲಿವೆ. ಅದರಂತೆ ಮುಂದಿನ ಕೆಲವೇ ವರ್ಷಗಳಲ್ಲಿ ರಾಜ್ಯದಲ್ಲಿ ಪ್ರತಿ ಜಿಲ್ಲೆಗಳು, ನಗರಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮೆಟ್ರೋ ರೈಲಿನಂತೆ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿಗಳು ಯೋಜನೆ ರೂಪಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೈಗಾರಿಕಾ ಕಾರಿಡಾರ್ ಸ್ಥಾಪನೆ

ಮೊದಲ ಹಂತದಲ್ಲಿ, ರಾಜ್ಯದ ಪ್ರಮುಖ ಭಾಗಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ನಂತರ, ಹೊಸ ವಿಮಾನ ನಿಲ್ದಾಣಗಳ ಬಂದರುಗಳು, ರಫ್ತು-ಆಮದು ಕೇಂದ್ರಗಳು ಮತ್ತು ಕೈಗಾರಿಕಾ ಕಾರಿಡಾರ್‌ಗಳನ್ನು ಸ್ಥಾಪಿಸುವ ಚಿಂತನೆ ನಡೆಸಲಾಗಿದೆ ಎಂದು ಅವರು ಬಜೆಟ್ ವೇಳೆ ತಿಳಿಸಿದ್ದಾರೆ.

ಪ್ರವಾಸೋದ್ಯಮಕ್ಕೆ ಸುಧಾರಣೆಗೆ ಆದ್ಯತೆ

ರಾಜ್ಯದ ಪ್ರವಾಸೋದ್ಯಮದ ಸುಧಾರಣವಾಗಿ ಉತ್ತರ ಪ್ರದೇಶದ ಆಧ್ಯಾತ್ಮಿಕ ಪ್ರವಾಸಿ ಸ್ಥಳಗಳನ್ನು ಎಲ್ಲ ಪ್ರದೇಶಗಳಿಗೆ ಸಂಪರ್ಕ ಸಾಧಿಸುವಂತೆ ಹೊಸ ರಸ್ತೆಗಳ ನಿರ್ಮಾಣ ಕಾರ್ಯ ಚುರುಕಾಗಿದೆ. ಇದಕ್ಕಾಗಿ 1,000 ಕೋಟಿ ಮೀಸಲಿಡಲಾಗಿದೆ. ಅದೇ ರೀತಿ ಕೈಗಾರಿಕಾ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ 50 ಕೋಟಿ ರೂ. ಕಾನ್ಪುರ್ ಹಾಗೂ ಆಗ್ರಾ ನಗರದಲ್ಲಿ ಮೆಟ್ರೋ ರೈಲು ಯೋಜನೆಗಳಿಗೆ ಕ್ರಮವಾಗಿ 585 ಕೋಟಿ ಹಾಗೂ 465 ಕೋಟಿ ರೂ.ಮೀಸಲಿಡಲಾಗಿದೆ.

ಯುಪಿ 1 ಟ್ರಲಿಯನ್ ಡಾಲರ್

ಇನ್ನು ದೆಹಲಿ-ಗಾಜಿಯಾಬಾದ್-ಮೀರತ್ ಎಕ್ಸ್‌ಪ್ರೆಸ್‌ವೇ ರಸ್ತೆ ಯುಪಿಗೆ ರೂ.1,300 ಕೋಟಿ ಹಣ ಮಂಜೂರಾಗಿದೆ. ಮುಂದಿನ ನಾಲ್ಕು ವರ್ಷ (2027)ಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ ತಲುಪಿದಾಗ ಕೇಂದ್ರವು 5 ಟ್ರಿಲಿಯನ್ ಡಾಲರ್ (350 ಲಕ್ಷ ಕೋಟಿ ರೂ.) ಆರ್ಥಿಕ ಗುರಿಯನ್ನು ಸಾಧಿಸಲಿದೆ. ದೇಶದ ಅತಿದೊಡ್ಡ ರಾಜ್ಯವಾಗಿರುವ ನಮ್ಮ ಉತ್ತರ ಪ್ರದೇಶವು 1 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಬಜೆಟ್ ನಲ್ಲಿ ರಾಜ್ಯದ ಮೂಲ ಸೌಕರ್ಯಗಳ ವೃದ್ಧಿಗೆ ಒತ್ತು ನೀಡಿರುವುದಾಗಿ ಅವರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ..!

Sun Feb 26 , 2023
    ಬಾಗಕೋಟೆ ಜಿಲ್ಲೆಯ ಕಲಾದಗಿಯಲ್ಲಿ ವಾಸ್ತವ್ಯ ಹೂಡಿರುವ ಆರ್‌ ಆಶೋಕ್‌ ಎರಡನೆಯ ದಿನದ ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಿದ್ದಾರೆ. ಕಲಾದಗಿ ಖಜ್ಜಿಡೋಣಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಬೆಳಿಗ್ಗೆ ವಸತಿ ಶಾಲೆ ಮಕ್ಕಳಿಗೆ ಊಟ ಬಡಿಸಿದರೆ ಶಾಲಾಕ್ಕಳೊಂದಿಗೆ ತಟ್ಟೆಇಡ್ಲಿ ಸಾಂಬಾರ್ ಸೇವನೆ ಮಾಡಿದ್ದಾರೆ. ಕಂದಾಯ ಸಚವರು ಮಕ್ಕಳೊಂದಿಗೆ ನಿತ್ಯ ಊಟಕ್ಕೂ ಮುಂಚೆ ಅನ್ನದಾತೋ ಸುಖಿಭವ ಎಂದು ಪ್ರಾರ್ಥನೆ ಮಾಡಿದ್ದರು. ನಂತರ ವಿಧ್ಯಾರ್ಥಿಗಳೊಂದಿಗೆ ತಿಂಡಿಸೇವಿಸಿದ್ದರು. ಶಾಲೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿದ್ದರು. […]

Advertisement

Wordpress Social Share Plugin powered by Ultimatelysocial