ರಂಗೇಗೌಡ’ ಧಾರಾವಾಹಿಗೆ ದಶಮಾನೋತ್ಸವ ಸಂಭ್ರಮ..

‘ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ’ ಯಾರಿಗೆ ನೆನಪಿಲ್ಲ ಹೇಳಿ!? ದಶಕದ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಮಿಸ್ಟರ್ ಅಂಡ್ ಮಿಸಸ್ ರಂಗೇ ಗೌಡ” ಎಂಬ ಧಾರಾವಾಹಿ ಬಹಳ ಫೇಮಸ್ ಆಗಿತ್ತು. ಕನ್ನಡ ಕಿರುತೆರೆ ಪ್ರಿಯರ ಗೆದ್ದ ಈ ಧಾರಾವಾಹಿ ನಟರಾದ ರಘು ಅವರು ತಮ್ಮ ಧಾರವಾಹಿಯ ದಶಮಾನೋತ್ಸವವನ್ನು ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗಷ್ಟೇ ಹಂಚಿಕೊಂಡಿದ್ದಾರೆ.ಕಿರುತೆರೆ ನಟ ರಘು ಅವರು ಈ ಧಾರಾವಾಹಿಯ ನಾಯಕನಾಗಿ, ಅಮೃತ ರಾಮಮೂರ್ತಿಯವರು ಈ ಧಾರಾವಾಹಿಯ ನಾಯಕಿಯಾಗಿ ಅದ್ಬುತವಾಗಿ ನಟಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಅದಾದ ಮೇಲೆ ಅವರಿಬ್ಬರೂ ಬೇರೆ ಬೇರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರೂ ಸಹ ‘ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಗೆ ಈ ಜೋಡಿ ಫೇಮಸ್ ಎಂದು ಹೇಳಬಹುದು.ಸ್ನೇಹ ಪ್ರೀತಿಗೆ ತಿರುಗಿತು ಎಂದ ರಂಗೇಗೌಡಮಜಾ ವಿಷಯವೆಂದರೆ ಇದೇ ಧಾರಾವಾಹಿಯಲ್ಲಿ ಫೇಮಸ್ ಆದ ಈ ಜೋಡಿ ಮುಂದೆ ಬಾಳ ಸಂಗಾತಿಗಳಾಗಿ ಮುಂದುವರೆದಿದ್ದು. ಹೌದು, ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಘು ಅವರು “ಈ ಧಾರಾವಾಹಿಯಿಂದ ನನಗೆ ಲವ್ ಆಫ್ ಮೈ ಲೈಫ್ ಸಿಕ್ಕಿದರು” ಎಂದು ತಮ್ಮ ಮಡದಿ ಅಮೃತ ರಾಮಮೂರ್ತಿಯವರ ಬಗ್ಗೆ ಹೇಳಿಕೊಂಡಿದ್ದಾರೆ. ಈಗ ಈ ಜೋಡಿಗೊಂದು ಪುಟಾಣಿ ಮಗು ಕೂಡ ಇದೆ.”ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ”ದಲ್ಲಿ ನಾವು ನಟಿಸುತ್ತಿದ್ದಾಗ ಒಳ್ಳೆಯ ಸ್ನೇಹಿತರಾಗಿದ್ದೆವು. ನಾನು ಹಾಗೂ ಅಮೃತ ಅವರು ಶೂಟ್‌ನಲ್ಲಿ ಸಿಕ್ಕಿದಾಗಲೆಲ್ಲಾ ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು. ಹಾಗೂ ಪರಸ್ಪರ ನಟನೆಗೆ ಸಹಾಯ ಮಾಡುತ್ತಿದ್ದೆವು. ಧಾರಾವಾಹಿ ಮುಗಿದ ನಂತರ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾದರೂ ಸಹ ನಾವು ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳಲು ಶುರುವಾಯಿತು. ಆಗ ನಮಗೆ ಪರಸ್ಪರ ಇದ್ದ ನಿಜವಾದ ಫೀಲಿಂಗ್ಸ್ ಅರ್ಥವಾಯಿತು. ಹಾಗಾಗಿ ಒಂದು ದಿನ ಇಬ್ಬರು ಮೀಟ್ ಆಗಿ ನಮ್ಮ ಭಾವನೆಗಳನ್ನು ಹಂಚಿಕೊಂಡೆವು. ನಂತರ ನಡೆದದ್ದೆಲ್ಲವೂ ಅದ್ಭುತವೇ! ಮದುವೆಯಾಗಿ ಈಗ ಸುಖಿ ಸಂಸಾರ ನಮ್ಮದಾಗಿದೆ” ಎಂದು ಒಂದು ಸಂತೃಪ್ತಿಯಿಂದ ಹೇಳಿಕೊಳ್ಳುತ್ತಾರೆ ನಟ ರಘು.ತೆಲುಗು ಕಿರುತೆರೆಯಲ್ಲಿ ಬ್ಯುಸಿಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ರಾಜ್ ಗುರು ವಂಶದ ಕುಡಿ ಸಾಕೇತ್ ರಾಜ್ ಗುರು ಆಗಿ ನಟಿಸಿದ್ದ ರಘು ಗೌಡ ಸದ್ಯ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿ. ತೆಲುಗಿನ ‘ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ’ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ವ್ಯಾಯಾಮ ಮಾಡಿದ ಮೇಲೆ ಕಲ್ಲಂಗಡಿ ಜ್ಯೂಸ್ ಕುಡಿದರೆ, ಫುಲ್ ಎನರ್ಜಿ ಬರುತ್ತೆ!

Fri Feb 24 , 2023
  ವ್ಯಾಯಾಮ ಮಾಡುವುದು ದೇಹಕ್ಕೆ ಶಕ್ತಿ ಬರಲಿ ಎಂದು. ಈ ಸಂದರ್ಭದಲ್ಲಿ ಮಾಂಸ ಖಂಡಗಳು ಸಾಕಷ್ಟು ದಣಿದಿರುತ್ತವೆ. ಅವುಗಳಿಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ ಜೊತೆಗೆ ಸಾಕಷ್ಟು ಪೌಷ್ಟಿಕ ಸತ್ವಗಳ ಅಗತ್ಯತೆ ಕೂಡ ಇರುತ್ತದೆ.ವ್ಯಾಯಾಮ ಮಾಡಿದ ನಂತರದಲ್ಲಿ ಇಂತಹ ಅತ್ಯಂತ ಆರೋಗ್ಯಕರವಾದ ಯಾವುದಾದರೂ ಒಂದು ಆಹಾರವನ್ನು ಒಂದು ಗಂಟೆಯ ಒಳಗಾಗಿ ನೀವು ಸೇವನೆ ಮಾಡಲೇಬೇಕು.ಏಕೆಂದರೆ ವ್ಯಾಯಾಮದ ನಂತರ ನಿಮ್ಮ ಮಾಂಸ ಖಂಡಗಳು ಸಾಕಷ್ಟು ದುರ್ಬಲವಾಗಿರುತ್ತವೆ ಮತ್ತು ಕೆಲವೊಂದು ಕಡೆಗಳಲ್ಲಿ ಹರಿದುಕೊಂಡಿರುತ್ತವೆ. ಹಾಗಾಗಿ […]

Advertisement

Wordpress Social Share Plugin powered by Ultimatelysocial