ವ್ಯಾಯಾಮ ಮಾಡಿದ ಮೇಲೆ ಕಲ್ಲಂಗಡಿ ಜ್ಯೂಸ್ ಕುಡಿದರೆ, ಫುಲ್ ಎನರ್ಜಿ ಬರುತ್ತೆ!

 

ವ್ಯಾಯಾಮ ಮಾಡುವುದು ದೇಹಕ್ಕೆ ಶಕ್ತಿ ಬರಲಿ ಎಂದು. ಈ ಸಂದರ್ಭದಲ್ಲಿ ಮಾಂಸ ಖಂಡಗಳು ಸಾಕಷ್ಟು ದಣಿದಿರುತ್ತವೆ. ಅವುಗಳಿಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ ಜೊತೆಗೆ ಸಾಕಷ್ಟು ಪೌಷ್ಟಿಕ ಸತ್ವಗಳ ಅಗತ್ಯತೆ ಕೂಡ ಇರುತ್ತದೆ.ವ್ಯಾಯಾಮ ಮಾಡಿದ ನಂತರದಲ್ಲಿ ಇಂತಹ ಅತ್ಯಂತ ಆರೋಗ್ಯಕರವಾದ ಯಾವುದಾದರೂ ಒಂದು ಆಹಾರವನ್ನು ಒಂದು ಗಂಟೆಯ ಒಳಗಾಗಿ ನೀವು ಸೇವನೆ ಮಾಡಲೇಬೇಕು.ಏಕೆಂದರೆ ವ್ಯಾಯಾಮದ ನಂತರ ನಿಮ್ಮ ಮಾಂಸ ಖಂಡಗಳು ಸಾಕಷ್ಟು ದುರ್ಬಲವಾಗಿರುತ್ತವೆ ಮತ್ತು ಕೆಲವೊಂದು ಕಡೆಗಳಲ್ಲಿ ಹರಿದುಕೊಂಡಿರುತ್ತವೆ. ಹಾಗಾಗಿ ಅವುಗಳಿಗೆ ಹೆಚ್ಚಿನ ಶಕ್ತಿ ಮತ್ತು ಚೈತನ್ಯ ಅವಶ್ಯಕತೆ ಇರುತ್ತದೆ. ಅಂತಹ ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಸಿಕೊಡುತ್ತಿದ್ದೇವೆ.ದೇಹಕ್ಕೆ ತಕ್ಷಣ ಶಕ್ತಿ ಕೊಡುವಲ್ಲಿ ಇವುಗಳ ಪಾತ್ರ ದೊಡ್ಡದು. ದೇಹದಲ್ಲಿ ಹಾನಿಯಾದ ಗ್ಲುಕೋಸ್ ಪ್ರಮಾ ಣವನ್ನು ಸರಿದೂಗಿಸಿ ರಕ್ತ ಸಂಚಾರದಲ್ಲಿ ಬಹಳ ಬೇಗನೆ ದೇಹಕ್ಕೆ ಹೀರಿಕೊಳ್ಳುವಂತೆ ಮಾಡುವ ಗುಣ ಇದರಲ್ಲಿ ಕಂಡು ಬರುತ್ತದೆ.ನಿಮ್ಮ ದೇಹಕ್ಕೆ ಹಾಗೂ ಮಾಂಸ ಖಂಡಗಳಿಗೆ ವ್ಯಾಯಾ ಮದ ನಂತರ ಕಾರ್ಬೋಹೈಡ್ರೇಟ್ ಸಿಗಬೇಕು ಎಂದರೆ ಬಾಳೆಹಣ್ಣು ಅಥವಾ ಹಣ್ಣಿನ ಜ್ಯೂಸ್ ಸೇವನೆ ಮಾಡ ಬೇಕು. ವ್ಯಾಯಾಮ ಮಾಡಿದ ತಕ್ಷಣ ಸೇವಿಸು ವುದು ಒಳ್ಳೆಯದು ವ್ಯಾಯಾಮ ಮಾಡಿದ ನಂತರ ಮಾಂಸ ಖಂಡಗಳಿಗೆ ಅಮೈನೋ ಆಮ್ಲಗಳು ಕೂಡ ಸಮರ್ಪಕ ಪ್ರಮಾಣದಲ್ಲಿ ಅವಶ್ಯಕತೆ ಇರುತ್ತದೆ.ಅದರಲ್ಲೂ ಉತ್ತಮ ಗುಣಮಟ್ಟದ ಪ್ರೋಟೀನ್ ಪ್ರಮಾಣ ರಕ್ತ ಸಂಚಾರದಲ್ಲಿ ಬಹಳ ಬೇಗನೆ ಅಮೈನೋ ಆಮ್ಲ ಗಳನ್ನು ಬಿಡುಗಡೆ ಮಾಡಿ ದೇಹಕ್ಕೆ ಶಕ್ತಿ ಕೊಡುತ್ತದೆ. ಅಂತಹ ಸಾಲಿಗೆ ಕೋಳಿ ಮೊಟ್ಟೆ ಸೇರುತ್ತದೆ.ಗ್ಲುಕೋಸ್ ಸೇವನೆ ಮಾಡಿದ ನಂತರದಲ್ಲಿ 20 ನಿಮಿಷ ಬಿಟ್ಟು ಇದನ್ನು ಸೇವನೆ ಮಾಡಬೇಕು.ವ್ಯಾಯಾಮದ ನಂತರದಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ದೇಹದ ಮಾಂಸ ಖಂಡಗಳಿಗೆ ಶಕ್ತಿ ಕೊಡುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಪ್ಪಿಗೆಯಿಲ್ಲದೆ ತೆಗೆದ ಮನೆಯೊಳಗಿನ ಫೋಟೋಗಳು.

Fri Feb 24 , 2023
ತಾನು ಮನೆಯೊಳಗಿದ್ದಾಗ ಫೋಟೋಗ್ರಾಫರ್ ತೆಗೆದಿರುವ ಫೋಟೋಗಳು ಖಾಸಗಿತನದ ಸಂಪೂರ್ಣ ಆಕ್ರಮಣವಾಗಿದೆ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿದ್ದಾರೆ. ಮುಂಬೈ: ತಾನು ಮನೆಯೊಳಗಿದ್ದಾಗ ಫೋಟೋಗ್ರಾಫರ್ ತೆಗೆದಿರುವ ಫೋಟೋಗಳು ಖಾಸಗಿತನದ ಸಂಪೂರ್ಣ ಆಕ್ರಮಣವಾಗಿದೆ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿದ್ದಾರೆ.ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿ ಫೋಸ್ಟ್ ಮಾಡಿರುವ ನಟಿ, ಮುಂಬೈ ಪೊಲೀಸರಿಗೆ ಅದನ್ನು ಟ್ಯಾಗ್ ಮಾಡಿದ್ದಾರೆ. ಇಂದು ಎಲ್ಲಾ ಮಿತಿಗಳನ್ನು ಮೀರಲಾಗಿದೆ ಎಂದು ಬರೆದುಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿರುವ ಆಲಿಯಾ ಭಟ್, […]

Advertisement

Wordpress Social Share Plugin powered by Ultimatelysocial