ಉತ್ತರ ಪ್ರದೇಶದಲ್ಲಿ ಪ್ರತಿಪಕ್ಷಗಳು ಕೆಲವೇ ಜಾತಿಗಳಿಗಾಗಿ ಕೆಲಸ ಮಾಡಿದ್ದವು:ಕೇಂದ್ರ ಗೃಹ ಸಚಿವ ಅಮಿತ್ ಶಾ 

ಉತ್ತರ ಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಪ್ರತಿಪಕ್ಷಗಳು ಕೆಲವೇ ಜಾತಿಗಳಿಗಾಗಿ ಕೆಲಸ ಮಾಡಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.ನಿಷಾದ್ ಪಕ್ಷ’ದ ಜತೆಗೂಡಿ ಬಿಜೆಪಿ ಆಯೋಜಿಸಿದ್ದ ‘ಸರ್ಕಾರ್ ಬನಾವೊ, ಅಧಿಕಾರ್ ಪಾವೊ’ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದ್ದಾರೆ.ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಿದ್ದಾಗಲೆಲ್ಲಾ ಅವರ ಜಾತಿಗಾಗಿ ಮಾತ್ರ ಕೆಲಸ ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಎಲ್ಲ ಹಿಂದುಳಿದ ಜಾತಿ ಮತ್ತು ಬಡವರಿಗಾಗಿ ಕೆಲಸ ಮಾಡಿದ್ದಾರೆ’ ಎಂದು ಶಾ ಹೇಳಿದ್ದಾರೆ.ಯೋಗಿ ಆದಿತ್ಯನಾಥ್ ಅವರ ಆಳ್ವಿಕೆಯಲ್ಲಿ ಉತ್ತರ ಪ್ರದೇಶದಲ್ಲಿ ಅಪರಾಧ ಕೃತ್ಯಗಳು ಮತ್ತು ಮಾಫಿಯಾ ಚಟುವಟಿಕೆಗಳನ್ನು ಬೇರುಸಹಿತ ಕಿತ್ತುಹಾಕಲಾಗಿದೆ. ಹಿಂದಿನ ಸರ್ಕಾರಗಳಿದ್ದಾಗ ರಾಜ್ಯದಲ್ಲಿ ಮಾಫಿಯಾ ಆಡಳಿತವಿತ್ತು. ಬಡವರ ಅಭಿವೃದ್ಧಿ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ.ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಪ್ಟನ್‌ ವರುಣ್‌ ಸಿಂಗ್‌ ಗೆ ಕಣ್ಣೀರಿನ ವಿದಾಯ

Sat Dec 18 , 2021
ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಂಭೀರ ಗಾಯಾಳುವಾಗಿ, ಡಿ.15ರಂದು ಕೊನೆಯುಸಿರೆಳೆದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಕಲ ಸರಕಾರಿ ಹಾಗೂ ಸೇನಾ ಗೌರವಗಳೊಂದಿಗೆ ನಡೆಸಲಾಯಿತು.ಅಂತ್ಯಕ್ರಿಯೆಗೂ ಮೊದಲು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್‌ ಸೇರಿ ಅನೇಕ ಹಿರಿಯ ನಾಯಕರು ಮತ್ತು ಸೇನಾ ಅಧಿಕಾರಿಗಳು ಕ್ಯಾ| ವರುಣ್‌ ಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.ನೌಕಾಪಡೆಯಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಅಗಿರುವ ವರುಣ್‌ ಸಿಂಗ್‌ […]

Advertisement

Wordpress Social Share Plugin powered by Ultimatelysocial