ಬರ್ತ್ ಡೇ ನೆಪದಲ್ಲಿ ಮೋಜು ಮಸ್ತಿಗೆ ಬಂದು ಮಸಣ ಸೇರಿದರು..!

ಲಾಕ್ ಡೌನ್ ನಡುವೆಯೂ ಗೆಳೆಯನ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಮೋಜು ಮಸ್ತಿಗೆಂದು ಬೈಕ್ ನಲ್ಲಿ ಹೋಗಿದ್ದ 8 ಮಂದಿ ಪೈಕಿ ಮೂವರು ಜಲಸಮಾಧಿಯಾಗಿದ್ದಾರೆ. ಬರ್ತ್ ಡೇ ಬಾಯ್ ಕೂಡ ಸಾವಿಗೀಡಾಗಿದ್ದು ಸಂಭ್ರಮಾಚರಣೆ ದುರಂತ ಅಂತ್ಯ ಕಂಡಿದೆ. ಬೆಂಗಳೂರು ರಾಮಮೂರ್ತಿ ನಗರದ ಚಂದ್ರು(20) ರಾಜು(19) ಮತ್ತು ನವೀನ್ ಕುಮಾರ್(24) ಮೃತ ದುರ್ದೆವಿಗಳು ಎಂದು  ತಿಳಿಒದು ಬಂದಿದೆ. ಬರ್ತ್ ಡೇ ಮಾಡಲೆಂದು ರಾಮಮೂರ್ತಿ ನಗರದಿಂದ ನವೀನ ಸೇರಿ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು 4 ಬೈಕ್ ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿಗೆ ಲಾಂಗ್ ಡ್ರೈವ್ ಬಂದಿದ್ದರು . ಆರಂಭದಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದರು.ಆದ್ರೆ ಲಾಕ್ ಡೌನ್ ಹಿನ್ನೆಲೆ ದೇವಾಲಯದ ಬಾಗಿಲು ಹಾಕಿದ್ದರಿಂದ ಹೊರಗೇ ನಿಂತು ಕೃ ಮುಗಿದು ಬಳಿಕ ತಿಪ್ಪಗಾನಹಳ್ಳಿ ಕೆರೆಯ ಬಳಿ ಮೋಜು ಮಾಡಲು ಹೋಗಿದಾಗ ಈ ಅವಘಡ ಸಂಭವಿಸಿದೆ. ತಿಪ್ಪಗಾನಹಳ್ಳಿ ಕೆರೆಯಲ್ಲಿ ಆಟವಾಡಲೆಂದು 8 ಮಂದಿಯೂ ನೀರಿನಲ್ಲಿ ಇಳಿದಿದ್ದಾರೆ. ಈ ವೇಳೆ ಮೂವರು ಯುವಕರು ನೀರುಪಾಲಾಗಿದ್ದಾರೆ. ತಮ್ಮ ಕಣ್ಣ ಎದುರಲ್ಲೇ ಸ್ನೇಹಿತರು ನೀರು ಪಾಲಾಗುತ್ತಿದ್ದರೂ ಉಳಿಸಿಕೊಳ್ಳಲು ಆಗದ ಐವರು ಸ್ನೇಹಿತರು ಪರದಾಡಿದ್ದಾರೆ. ಇನ್ನೂ  ಈ ಸಂಬಂಧ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಮೃತ ದೇಹಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಮುಕ್ತಿಗೊಳಿಸಲು ಪ್ರಾರ್ಥನೆ ಮಾಡೋಣ

Tue May 26 , 2020
ರಂಜಾನ್ ಹಬ್ಬ ಮನುಷ್ಯನಲ್ಲಿ ಸತ್ಯ,  ನ್ಯಾಯ,  ನೀತಿ, ಧರ್ಮ,  ಮಾನವೀಯ ಪ್ರಜ್ಞೆ ಮೂಡಿಸುವಂಥ ಹಬ್ಬವಾಗಿದೆ ಎಂದು  KPCC  ರಾಜ್ಯ ಕಾರ್ಯಾಧ್ಯಕ್ಷ ಈಶ್ವರ್  ಖಂಡ್ರೆ  ಹೇಳಿದ್ದಾರೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ವತಿಯಿಂದ ಎಲ್ಲಾ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಇದ್ ಮುಬಾರಕ್ ಶುಭಾಶಯಗಳನ್ನು ಕೋರುತ್ತೇನೆ. ಈ ಹಬ್ಬವು ಮುಸ್ಲಿಂ ಬಾಂಧವರಿಗೆ ಪವಿತ್ರವಾದ ಹಬ್ಬವಾಗಿದೆ,  ಈ ಹಬ್ಬ ಮನುಷ್ಯನಲ್ಲಿ ಸತ್ಯ,  ನ್ಯಾಯ,  ನೀತಿ, ಧರ್ಮ,  ಮಾನವೀಯ ಪ್ರಜ್ಞೆ ಮೂಡಿಸುವಂಥ […]

Advertisement

Wordpress Social Share Plugin powered by Ultimatelysocial