ಏಷ್ಯಾದ ಅತೀ ದೊಡ್ಡ ಏರ್ ಶೋಗೆ ಕೌಂಟ್ ಡೌನ್, ಇಂದು ‘ಏರೋ ಇಂಡಿಯಾ’ಗೆ ಮೋದಿ ಚಾಲನೆ

ಬೆಂಗಳೂರು: ಕಳೆದ ಆರು ದಿನಗಳ ಹಿಂದಷ್ಟೇ ಬೆಂಗಳೂರು  ತುಮಕೂರಿಗೆ  ಬಂದಿದ್ದ ಪ್ರಧಾನಿ ಮೋದಿ ಅವರು ಏರೋ ಇಂಡಿಯಾ 2023ರ  ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ನಿನ್ನೆ ಹೆಚ್​​ಎಎಲ್​ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಗಳನ್ನು ಸಿಎಂ ಬಸವರಾಜ ಬೊಮ್ಮಾಯಿ  ಅವರು ಸ್ವಾಗತಿಸಿದ್ದರು.
ಅಲ್ಲಿಂದ ನೇರ ರಾಜಭವನಕ್ಕೆ   ತೆರಳಿದ್ದ ಮೋದಿ, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ರಾತ್ರಿ ಕರ್ನಾಟಕ ವಿವಿಧ ರಂಗಗಳ ಗಣ್ಯರೊಂದಿಗೆ ಸಂವಾದವನ್ನು ನಡೆಸಿದ್ದರು. ಉಳಿದಂತೆ ಇಂದು ಬೆಳಗ್ಗೆ 9:30 ರಿಂದ 11:30ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಏರೋ ಇಂಡಿಯಾ ಶೋಗೆ ಚಾಲನೆ ನೀಡಲಿದ್ದಾರೆ. ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್  , ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ.

5 ದಿನ, 809 ವೈಮಾನಿಕ ವಲಯದ ಪ್ರದರ್ಶನ

ಇಂದಿನಿಂದ 5 ದಿನಗಳ ಕಾಲ ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಕಲರವದ ರಂಗು ಇರಲಿದೆ. ಅಮೆರಿಕಾ, ಬ್ರಿಟನ್​, ಇಸ್ರೇಲ್​, ಇಟಲಿ, ಜಪಾನ್​ ಸೇರಿ 20ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು ಏರ್​​ ಶೋದಲ್ಲಿ ಕಸರತ್ತು ಪ್ರದರ್ಶಿಸಲಿವೆ. ಅಲ್ಲದೆ, ಒಟ್ಟು 809 ವೈಮಾನಿಕ ವಲಯದ ಪ್ರದರ್ಶನಗಳು ನಡೆಯಲಿದೆ.

699 ಭಾರತೀಯ ಪ್ರದರ್ಶಕರು, 110 ವಿದೇಶಿ ಪ್ರದರ್ಶಕರು, 25 ದೇಶಗಳ ರಕ್ಷಣಾ ಸಚಿವರು ಏರ್ ಶೋನಲ್ಲಿ ಭಾಗವಹಿಸುತ್ತಾರೆ. ಐಎಎಫ್ ತೇಜಸ್ ದೇಸಿ ಸೂಪರ್ ಸಾನಿಕ್ ಫೈಟರ್ ಹೆಚ್ಚು ಹೈ ಲೈಟ್, ಆತ್ಮ ನಿರ್ಭರ್ ಪರಿಕಲ್ಪನೆಯ ಹೆಚ್​​ಎಎಲ್​ ಹೆಲಿಕಾಪ್ಟರ್​ಗಳ ಪ್ರದರ್ಶನವಾಗಲಿದ್ದು, ರಫೆಲ್ ಯುದ್ಧ ವಿಮಾನವು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ ಹೆಚ್​​ಎಎಲ್​ ನಿರ್ಮಿತ HLFT-42 ಸೂಪರ್‌ಸಾನಿಕ್ ಜೆಟ್ ಕೂಡ ಪ್ರದರ್ಶನ ನೀಡಲಿದೆ. ಕೆಲ ದಿನಗಳಿಂದ ಏರೋ ಇಂಡಿಯಾ 2023 ಆವೃತ್ತಿಗೆ ಕಳೆದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ತಾಲೀಮು ನಡೆಸಿವೆ.

ಝಗಮಗಿಸುತ್ತಿರುವ ರಸ್ತೆಗಳು!

ಇತ್ತ ಪ್ರಧಾನಿಗಳು ಆಗಮಿಸುತ್ತಾರೆ ಎಂದ ಕೂಡಲೇ ಸರ್ಕಾರ ಗುಂಡಿಬಿದ್ದ ರಸ್ತೆಗಳಿಗೆಲ್ಲಾ ಇದ್ದಕ್ಕಿದ್ದಂತೆ ಕಾಯಕಲ್ಪ ಮಾಡಿದೆ. ಕುಲಗೆಟ್ಟಿದ್ದ ರಸ್ತೆಗಳಿಗೆಲ್ಲಾ ಡಾಂಬರು ಹಾಕಿ ಝಗಮಗ ಅನಿಸಿದೆ. ವಾಹನ ಸವಾರರು ಬಾಯ್​ ಬಾಯ್ ಬಡಿದುಕೊಂಡರು ಸುಮ್ಮನಿದ್ದ ಸರ್ಕಾರ ಈಗ ಯಲಹಂಕ ಸುತ್ತಾಮುತ್ತ ಭರ್ಜರಿಯಾಗಿ ರಸ್ತೆ ರಿಪೇರಿ ಮಾಡಿ ಮುಗಿಸಿದೆ.

ಟ್ರಾಫಿಕ್​ ಬಿಸಿ ಹೆಚ್ಚಾಗುವ ಸಾಧ್ಯತೆ!

ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದಾರೆ. ಜೊತೆಗೆ ಏರೋ ಇಂಡಿಯಾ ಶೋ ಬೇರೆ ಇದೆ. ಹೀಗಾಗಿ ಯಲಹಂಕ ಸುತ್ತಮುತ್ತ ಊಹಿಸಲಾಗದಷ್ಟು ಟ್ರಾಫಿಕ್​ ಸಮಸ್ಯೆ ಎದುರಾಗುವುದು ಬಹುತೇಕ ಪಕ್ಕ ಆಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಕಾರುಗಳನ್ನು ದೂರವಿಟ್ಟರೆ ಉತ್ತಮ. ಸಂಚಾರಕ್ಕಾಗಿ ಬದಲಿ ಮಾರ್ಗಗಳನ್ನ ಆಯ್ಕೆ ಮಾಡಿಕೊಳ್ಳಬೇಕಿದೆ. ಇಲ್ಲ ಎಂದರೆ ಗಂಟೆಗಟ್ಟಲೆ ಟ್ರಾಫಿಕ್​​ನಲ್ಲಿ ಸಿಲುಕುವ ಸಾಧ್ಯತೆ ಹೆಚ್ಚಿದೆ. ಇನ್ನು ಸಾಧ್ಯವಾದರೆ ಬೆಳಗ್ಗೆ 7 ರಿಂದ 8 ಗಂಟೆ ಮೇಲೆ ಬಳ್ಳಾರಿ ರಸ್ತೆ, ಯಲಹಂಕ ಸುತ್ತಮುತ್ತ ಪ್ರದೇಶಗಳಿಗೆ ಹೋಗದಿರುವುದು ಉತ್ತಮ ಎನ್ನಬಹುದು.

ಶೋ ನೋಡಲು ಓರ್ವ ವ್ಯಕ್ತಿಗೆ 2,500 ರೂಪಾಯಿ ಟಿಕೆಟ್ ದರ ನಿಗದಿ

ಉಳಿದಂತೆ ಏರೋ ಇಂಡಿಯಾ ಶೋ ನೋಡಲು ಸಾರ್ವಜನಿಕರಿಗೆ ಫೆಬ್ರವರಿ 16 ಮತ್ತು 17 ರಂದು ಅವಕಾಶ ನೀಡಲಾಗಿದೆ. ಶೋಗೆ ಪ್ರವೇಶ ಪಡೆಯಲು ಸಾರ್ವಜನಿಕರು ಪ್ರತಿ ಟಿಕೆಟ್​ಗೆ 2500 ರೂಪಾಯಿ ನಿಗದಿ ಮಾಡಲಾಗಿದೆ. ಟಿಕೆಟ್​​ಗಳನ್ನು ಏರೋ ಇಂಡಿಯಾ ಅಧಿಕೃತ ವೆಬ್‌ಸೈಟ್  ನಲ್ಲಿ ಖರೀದಿಸಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಿಥುನ ರಾಶಿ ಭವಿಷ್ಯ

Mon Feb 13 , 2023
    ಮೋಜಿಗಾಗಿ ಹೊರಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ದೂರದ ಸಂಬಂಧಿಗಳಿಂದ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವುದು. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಎಲ್ಲಿಗಾದರೂ ಹೊರಗೆ ಹೋಗುತ್ತಿದ್ದರೆ ಬಟ್ಟೆಗಳನ್ನು ಚಿಂತನಶೀಲವಾಗಿ ಧರಿಸಿ. ನೀವು ಹಾಗೆ ಮಾಡದಿದ್ದರೆ ನಿಮ್ಮ ಪ್ರೇಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಇಂದು ಕೆಲಸದ ಸ್ಥಳದಲ್ಲಿ ನಿಮ್ಮ ಯಾವುದೊ ಹಳೆಯ ಕೆಲಸವನ್ನು ಪ್ರಶಂಸಿಸಬಹುದು. ನಿಮ್ಮ […]

Advertisement

Wordpress Social Share Plugin powered by Ultimatelysocial