ವಾಡಿ: ಪಟ್ಟಣದಲ್ಲಿ ಶುಕ್ರವಾರ ಅಪ್ರಾಪ್ತ ಬಾಲಕಿಯ ಮದುವೆಗೆ ಸಿದ್ಧತೆ ನಡೆದ ವೇಳೆ ದಾಳಿ ಮಾಡಿದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಚೈಲ್ಡ್ ಲೈನ್ ಸಂಘಟನೆಯವರು ಮದುವೆ ನಿಲ್ಲಿಸಿ, ಬಾಲಕಿಯನ್ನು ರಕ್ಷಿಸಿದರು. 16 ವರ್ಷದ ಬಾಲಕಿಯ ಮದುವೆ ಕಲಬುರ್ಗಿಯ 26 ವರ್ಷದ ಯುವಕನೊಂದಿಗೆ ನಿಶ್ಚಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರ ಸಹಾಯದಿಂದ ದಾಳಿ ನಡೆಸಿದ ಅಧಿಕಾರಿಗಳು ಮದುವೆ ನಿಲ್ಲಿಸಿದರು. ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ನಾಗಮ್ಮ ಬಳ್ಳೂರಗಿ, ಚೈಲ್ಡ್ಲೈನ್ ಸಂಯೋಜಕ ಸುಂದರರಾಜ ಚಂದನಕೇರಾ, ಸೇರಿದಂತೆ ಸ್ಥಳೀಯ ಪೊಲೀಸರು ಇದ್ದರು.
ಬಾಲ್ಯ ವಿವಾಹ ತಡೆದ ಅಧಿಕಾರಿಗಳು

Please follow and like us: