“ಬಿಬಿಎಂಪಿ ಟೆಲಿ ಹೆಲ್ತ್ ಲೈನ್” ಸೇವೆಗೆ ಚಾಲನೆ

ಕೋವಿಡ್-೧೯ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ನಾಗರೀಕರು ವೈದ್ಯರೊಂದಿಗೆ ನಿಖರ ಮಾಹಿತಿ ಮತ್ತು ಸಲಹೆ ಪಡೆಯುವ ಉದ್ದೇಶದಿಂದ ಪಾಲಿಕೆಯು ಬ್ಲೂಮ್ ರ‍್ಗ್ ಫಿಲಾಂಥ್ರಪಿಸ್ ಹಾಗೂ ವೈಟಲ್ ಸ್ಟ್ರಾಟಜೀಸ್ ಸಹಯೋಗದಲ್ಲಿ “ಬಿಬಿಎಂಪಿ ಟೆಲಿ ಹೆಲ್ತ್ ಲೈನ್” ಸೇವೆಗೆ ಮಹಾಪೌರರು ಹಾಗೂ ಆಯುಕ್ತರು ಅಧಿಕೃತ ಚಾಲನೆ ನೀಡಿದರು.
ಕೋವಿಡ್-೧೯ ಹಿನ್ನೆಲೆ ನಗರದ ನಾಗರೀಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯು ಟೆಲಿ ಹೆಲ್ತ್ ಲೈನ್” ಆರಂಭಿಸಲಾಗಿದ್ದು, ೦೭೪೪೭೧೧೮೯೪೯ಗೆ ಉಚಿತವಾಗಿ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಪೂಜ್ಯ ಮಹಾಪೌರರು ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಮನಾಡಿದ ಮಹಾಪೌರರು, ನಾಗರೀಕರಿಗೆ ಅಗತ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವೆಯನ್ನು ಜಾರಿಗೊಳಿಸಲಾಗಿದ್ದು, ಅದಕ್ಕಾಗಿ ಪಾಲಿಕೆ 42 ವೈದ್ಯರು ನಾಗರೀಕರಿಗೆ ಅಗತ್ಯ ಮಾಹಿತಿ ನೀಡಿಲಿದ್ದಾರೆ. ಹೆಲ್ತ್ ಲೈನ್ ಸಂಖ್ಯೆ 07447118949ಗೆ ಕರೆ ಮಾಡಿ, ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.ಇಂದಿನಿಂದಲೇ ಈ ಸೇವೆ ಆರಂಭವಾಗಲಿದ್ದು, ನಾಲ್ಕು ಪಾಳಿಯಲ್ಲಿ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ 8 ರಿಂದ 11, ಬೆಳಗ್ಗೆ 11 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ಸಂಜೆ 5, ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಈ ಸೇವೆ ಲಭ್ಯವಿರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಮಹಾಪೌರ ಶ್ರೀ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕರು ಶ್ರೀ ಮುನೀಂದ್ರ ಕುಮಾರ್, , ಜೆ.ಡಿ.ಎಸ್ ಪಕ್ಷದ ನಾಯಕರು ಶ್ರೀಮತಿ ನೇತ್ರಾನಾರಾಯಣ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀ ಮಂಜುನಾಥ್ ರಾಜು.ಜಿ, ಆಯುಕ್ತರು ಶ್ರೀ ಬಿ.ಹೆಚ್.ಅನಿಲ್ ಕುಮಾರ್, ಸುರಪುರ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇತರರು ಭಾಗಿಯಾಗಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಕೊಡಗಿನಲ್ಲಿ ಡೆಂಗ್ಯೂ ಪತ್ತೆ

Thu Apr 23 , 2020
ಕೊಡಗಿನಲ್ಲಿ ಕೊರೊನಾ ತಕ್ಕ ಮಟ್ಟಿಗೆ ಕಡಿಮೆಯಾಯ್ತಪ್ಪಾ ಅಂದುಕೊಳ್ಳುವುಷ್ಟರಲ್ಲಿಯೇ ಇನ್ನೊಂದು ಮಾಹಾಮಾರಿ ಬಂದು ವಕ್ರಿಸಿದೆ. ಹೌದು ಮಡಿಕೇರಿ ತಾಲೂಕಿನ ಸುಂಟಿಕೊಪ್ಪದ ಇಬ್ಬರಲ್ಲಿ ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದೆ. ಸದ್ಯ ಚಿಕಿತ್ಸೆಯಿಂದ ಇಬ್ಬರು ಚೇತರಿಸಿಕೊಂಡಿದ್ದಾರೆ. ಜನರನ್ನು ಎಚ್ಚೆತ್ತುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದು, ಜಿಲ್ಲಾದ್ಯಂತ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿಎಚ್‌ಒ ಡಾ. ಮೋಹನ್ ಮಾಹಿತಿ ನೀಡಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial