ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ.

ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಲೆ ಪಾವತಿಗೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ನೀಡಿದ್ದ ಗಡುವಿನಲ್ಲಿ 5 ಕಾರ್ಖಾನೆಗಳು ಒಟ್ಟು 13.65 ಕೋಟಿ ರೂ ಬಾಕಿ ಪಾವತಿಸಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಂಕರ ಪಾಟೀಲ್ ಮುನೇನಕೊಪ್ಪ ,ಗಡುವು ಮುಗಿದರೂ 15.91 ಕೋಟಿ ರೂ ಬಾಕಿ ಉಳಿಸಿಕೊಂಡಿರುವ ಎರಡು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಈಗಾಗಲೇ ನೋಟಿಸ್ ಜಾರಿಗೊಳಿಸಿದ್ದು ರೈತರಿಗೆ ಬಾಕಿ ಪಾವತಿಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟು 87 ನೊಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು ಇವುಗಳ ಪೈಕಿ 64 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿವೆ ಕಳೆದ 2020 – 21ನೇ ಹಂಗಾಮಿನಲ್ಲಿ ಕಾರ್ಖಾನೆಗಳು ರೈತರಿಗೆ ಕಬ್ಬು ಬಿಲ್ ಪಾವತಿಸಿರುವ ಪ್ರಮಾಣ ಶೇಕಡ 99.97 ರಷ್ಟಿದೆ. ಮೂರು ದಿನಗಳ ಹಿಂದೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದ ಮೊತ್ತ 42.17 ಕೋಟಿ ರೂ ಗಳಾಗಿದ್ದು, ಎರಡು ದಿನಗಳ ಬಳಿಕ ಬಾಕಿ ಮೊತ್ತ 15.91 ಕೋಟಿ ರೂ ಗೆ ಇಳಿಕೆಯಾಗಿದೆ, ಎಂದು ತಿಳಿಸಿದರು.

ಕೇಂದ್ರ ಸರ್ಕಾರವು 2021- 22ನೇ ಹಂಗಾಮಿಗೆ ಸಂಬಂಧಪಟ್ಟಂತೆ ನ್ಯಾಯ ಮತ್ತು ಲಾಭದಾಯಕ ಬೆಲೆ ಶೇಕಡ 10ರ ಇಳುವರಿಗೆ ಪ್ರತಿ ಟನ್ ಕಬ್ಬಿಗೆ 2900 ರೂ ನಿಗದಿಪಡಿಸಿ ಆದೇಶ ಹೊರಡಿಸಿರುತ್ತದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಬ್ ಡ್ರೈವರ್‌ಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ? ಸಂಜನಾ ಗಲ್ರಾನಿ ..!

Wed Oct 6 , 2021
ಓಲಾ ಕ್ಯಾಬ್ ಡ್ರೈವರ್‌ಗಳ ಬಗ್ಗೆ ದೂರುಗಳು ಬರುವುದು ಹೊಸದೇನೂ ಅಲ್ಲ. ಬೆಂಗಳೂರಿನಲ್ಲಿ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಓಲಾ ಕ್ಯಾಬ್ ಗ್ರಾಹಕರು ಡ್ರೈವರ್‌ಗಳ ಮೇಲೆ ದೂರು ನೀಡುತ್ತಲೇ ಇರುತ್ತಾರೆ. ಸಂಜನಾ ಗಲ್ರಾನಿ ಇಂದು ಬೆಳಿಗ್ಗೆ ಕ್ಯಾಬ್ ಡ್ರೈವರ್ ಒಬ್ಬ ಕಿರುಕುಳ ನೀಡಿದ್ದಾಗಿ  ಘಟನೆ ಬಗ್ಗೆ ಕ್ಯಾಬ್ ಸೇವೆ ಒದಗಿಸುವ ಓಲಾ ಸಂಸ್ಥೆಗೆ ದೂರು ನೀಡಿದ್ದಾರೆ. ”ನಾವು ನಾಲ್ಕು ಮಂದಿ ಕಾರಿನಲ್ಲಿದ್ದೆವು ಏಸಿ ಏರಿಸುವಂತೆ ಮನವಿ ಮಾಡಿದರೂ” ಆತ ನಮ್ಮ ಮನವಿ ಕೇಳಿಸಿಕೊಳ್ಳದೆ  ಇದಕ್ಕಿಂತಲೂ […]

Advertisement

Wordpress Social Share Plugin powered by Ultimatelysocial