ಬರಿದಾದ ಬೊಕ್ಕಸದಿಂದ ಗುತ್ತಿಗೆದಾರರ ಬಾಕಿ ಬಿಲ್!

 

ಪಾವತಿ ಕಷ್ಟಸಾಧ್ಯವಾಗುತ್ತಿದ್ದು, ಬಾಕಿ ಬಿಲ್ ಬೆಟ್ಟದಷ್ಟು ಬೆಳೆದಿದೆ. ಅನುದಾನದ ಕೊರತೆ ಹಿನ್ನೆಲೆಯಲ್ಲಿ ಬಿಲ್ ಪಾವತಿಸಲು ಸರ್ಕಾರ ಶೇ.

40ವರೆಗೆ ಕಮಿಷನ್‍ಗೆ ಕೈವೊಡ್ಡುತ್ತಿದೆ ಎಂಬ ಆರೋಪವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ.

ಅದರಲ್ಲೂ ಪಂಚಾಯತ್‍ರಾಜ್ ಇಲಾಖೆ, ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಬಾಕಿ ಬಿಲ್ ಬೆಳೆದು ನಿಂತಿದೆ. ಈ ಪ್ರಮುಖ ಮೂರು ಇಲಾಖೆಗಳ ಮೇಲೆ ಈ ಕಮಿಷನ್ ಆರೋಪ ಕೇಳಿ ಬಂದಿದ್ದು, ಸದ್ಯ ಈ ಮೂರು ಇಲಾಖೆಗಳ ಬಾಕಿ ಬಿಲ್ ಸ್ಥಿತಿಗತಿ ಹೀಗಿದೆ. ಲೋಕೋಪಯೋಗಿ ಇಲಾಖೆ ಮೇಲೆ ಬಾಕಿ ಬಿಲ್ ಹೊರೆ ತೀವ್ರವಾಗಿ ಬಿದ್ದಿದೆ.

ಲೋಕೋಪಯೋಗಿ ಇಲಾಖೆಯ ಮೇಲೂ ಕಮಿಷನ್ ಮಸಿ ಅಂಟಿದೆ. ಬಾಕಿ ಬಿಲ್ ಪಾವತಿ ಮಾಡದೇ ಕಾಮಗಾರಿಗಳ ಪೂರ್ಣ ಸಾಧ್ಯವಾಗುತ್ತಿಲ್ಲ. ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ ಮೊತ್ತ ಬೆಟ್ಟದಷ್ಟು ಬೆಳೆಯುತ್ತಲೇ ಇದೆ. ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಈ ಬಗ್ಗೆ ಒಪ್ಪಿಕೊಂಡಿದ್ದು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ಸಚಿವ ಮಹದೇವಪ್ಪರ ಕಾಲದಿಂದ ಬಾಕಿ ಬಿಲ್ ಹೊರೆ ಇಮ್ಮಡಿಯಾಗುತ್ತಲೇ ಇದೆ ಎಂದು ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಇಲಾಖೆಯಲ್ಲಿ ಪ್ರಸ್ತುತ 4,000 ಕೋಟಿ ರೂ. ಬಾಕಿ ಬಿಲ್ ಇದೆ. ಸುಮಾರು 11,200 ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಚಿವ ಡಾ.ಸುಧಾಕರ್‍ ಈವರೆಗೆ ಬಾಕಿ ಬಿಲ್ ಗಾಗಿ 5,252 ಕೋಟಿ: ಈವರೆಗೆ ಲೋಕೋಪಯೋಗಿ ಇಲಾಖೆ ಬಾಕಿ ಬಿಲ್ ಪಾವತಿಗಾಗಿ ಒಟ್ಟು 5,252 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕಾಮಗಾರಿಗೆ 1,340 ಕೋಟಿ ರೂ., ಜಿಲ್ಲಾ ಪ್ರಮುಖ ರಸ್ತೆ ಕಾಮಗಾರಿಗಳಿಗಾಗಿನ ಬಾಕಿ ಬಿಲ್ ಪಾವತಿಸಲು 2,657 ಕೋಟಿ ರೂ., ಕೇಂದ್ರ ರಸ್ತೆ ನಿ (ಸಿಆರ್‍ಎಫ್) ರಸ್ತೆ ಕಾಮಗಾರಿಗಳ ಬಾಕಿ ಬಿಲ್ ಗಾಗಿ 440 ಕೋಟಿ ರೂ. ಹಾಗೂ ಕೆ-ಶಿಪ್ ಕಾಮಗಾರಿಗಳ ಬಾಕಿ ಬಿಲ್ ಗಾಗಿ 815 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಯ ಬಾಕಿ ಬಿಲ್ 6,500 ಕೋಟಿ: ಜಲಸಂಪನ್ಮೂಲ ಇಲಾಖೆಯ ಮೇಲೆ ಸದ್ಯಕ್ಕೆ ಅತಿಹೆಚ್ಚು ಅಂದರೆ ಬರೋಬ್ಬರಿ ಸುಮಾರು 6,500 ಕೋಟಿ ರೂ. ಬಾಕಿ ಬಿಲ್ ಹೊರೆ ಇದೆ. ಜಲಸಂಪನ್ಮೂಲ ಇಲಾಖೆ ಅತಿ ಹೆಚ್ಚು ಬಾಕಿ ಬಿಲ್ ಹೊಂದಿದ ಇಲಾಖೆಯಾಗಿದೆ. 2021-22 ಆರ್ಥಿಕ ವರ್ಷದಲ್ಲಿ ಬರೋಬ್ಬರಿ 27,000 ಕೋಟಿ ರೂ. ಇದ್ದ ಬಾಕಿ ಬಿಲ್ ಈಗ 6,500 ಕೋಟಿ ರೂ.ಗೆ ಇಳಿದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ ಎರಡನೇ ವಾರದ ವರೆಗೆ ಸುಮಾರು 9,900 ಕೋಟಿ ರೂ. ಬಾಕಿ ಬಿಲ್ ಇತ್ತು. ಅದರಲ್ಲಿ 3,600 ಕೋಟಿ ರೂ. ಬಾಕಿ ಬಿಲ್ ಎತ್ತಿನ ಹೊಳೆ ಯೋಜನೆ ಕಾಮಗಾರಿ ಬಾಕಿ ಬಿಲ್ ಇತ್ತು. ಕೃಷ್ಣ ಭಾಗ್ಯ ಜಲ ನಿಗಮ 1,310 ಕೋಟಿ, 4,050 ಕೋಟಿ ರೂ. ಕರ್ನಾಟಕ ನೀರಾವರಿ ನಿಗಮ, ಸುಮಾರು 1,300 ಕೋಟಿ ರೂ. ಕಾವೇರಿ ನೀರಾವರಿ ನಿಗಮ ಹಾಗೂ ವಿಶ್ವೇಶ್ವರ ಜಲ ನಿಗಮದಲ್ಲಿ ಸುಮಾರು 3,200 ಕೋಟಿ ರೂ. ಮೊತ್ತದ ಬಿಲ್ ಪಾವತಿಯಾಗದೇ ಉಳಿದುಕೊಂಡಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ.

ಇಲಾಖೆಯ 20,500 ಕೋಟಿ ರೂ. ಬಾಕಿ ಬಿಲ್ ಚುಪ್ತಾ: 2021-22 ಆರಂಭದಲ್ಲಿ 27,000 ಕೋಟಿ ರೂ.ಇದ್ದ ಬಾಕಿ ಬಿಲ್ ಈಗ 6,500 ಕೋಟಿಗೆ ಇಳಿದಿದೆ. ಸುಮಾರು 20,500 ಕೋಟಿ ರೂ. ಬಾಕಿ ಬಿಲ್ ಕ್ಲಿಯರ್ ಮಾಡಲಾಗಿದೆ. 2021-22 ಹಣಕಾಸು ವರ್ಷದಲ್ಲಿ ಸುಮಾರು 11,000 ಕೋಟಿ ರೂ. ಪಾವತಿ ಮಾಡಲಾಗಿದೆ ಎಂದು ಸಚಿವ ಕಾರಜೋಳ ಹೇಳಿದ್ದಾರೆ. ಜಲಸಂಪನ್ಮೂಲ ಇಲಾಖೆ ಬಿಲ್ ಪಾವತಿ ವೇಳೆ ಸಣ್ಣ ಗುತ್ತಿಗೆದಾರರಿಗೆ ಆದ್ಯತೆ ನೀಡುತ್ತಿದ್ದು, ಈ ವರೆಗೆ 8,723 ಸಣ್ಣ ಗುತ್ತಿಗೆದಾರ 10,251 ಕೋಟಿ ರೂ. ಬಾಕಿ ಬಿಲ್ ನ್ನು ಕ್ಲಿಯರ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್‍ಡಿಪಿಆರ್‍ನಲ್ಲೂ ಬೆಟ್ಟದಷ್ಟು ಬಾಕಿ ಬಿಲ್: ಗ್ರಾಮೀಣಾಭಿವೃದ್ಧಿ ಹಾಗೂ ಪಂ.ರಾಜ್ ಇಲಾಖೆ ಸದ್ಯ ಕೇಂದ್ರ ಬಿಂದುವಾಗಿದೆ. ಇಲಾಖೆ ಸಚಿವರಾಗಿದ್ದ ಈಶ್ವರಪ್ಪರ ಮೇಲೆ ಕಮಿಷನ್ ಆರೋಪ ಮಾಡಿ ಗುತ್ತಿಗೆದಾರ ಸಂತೋಷ್ ಪಾಟೀಲ್ ನೇಣಿಗೆ ಶರಣಾಗಿದ್ದ. ಆ ಮೂಲಕ ಆರ್ ಡಿಪಿಆರ್ ನಲ್ಲಿ ಬಾಕಿ ಬಿಲ್ ಸದ್ದು ಮಾಡಿದೆ.

ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಆರ್ ಡಿಪಿಆರ್ ನಲ್ಲಿ ಸುಮಾರು 4,200 ಕೋಟಿ ರೂ. ಬಾಕಿ ಬಿಲ್ ಹೊರೆ ಇದೆ ಎನ್ನಲಾಗಿದೆ.ಕಳೆದ ಮೂರು ವರ್ಷಗಳಿಂದ 6,000 ಕೋಟಿ ರೂ. ಮೊತ್ತ ದ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಪೈಕಿ 2,000 ಕೋಟಿ ರೂ. ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ.

ಆರ್‍ಡಿಪಿಆರ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್ ಎಲ್.ಕೆ. ನಿಖರ ಬಾಕಿ ಬಿಲ್ ಮೊತ್ತದ ಅಂಕಿ ಅಂಶವನ್ನು ಕಲೆ ಹಾಕುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೈಕೋರ್ಟ್ ಬೀಸಿದ ಚಾಟಿಗೆ ಏಟಿಗೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ,

Fri Apr 22 , 2022
ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ತಕ್ಷಣ ಆರಂಭಿಸಲು ಕಾರ್ಯಾದೇಶವನ್ನು ನೀಡಿದೆ. ಪೈಥಾನ್ ಯಂತ್ರದ ಮೂಲಕ ಗುಂಡಿ ಮುಚ್ಚುವ ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್ (ಎಆರ್‌ಟಿಎಸ್) ಸಂಸ್ಥೆಗೆ ಏ.20ರಂದು ತಾತ್ಕಾಲಿಕ ಕಾರ್ಯಾದೇಶ ನೀಡಲಾಗಿದೆ ಎಂದು ಬಿಬಿಎಂಪಿ ನೀಡಿದೆ. ಹಾಗಾಗಿ ನ್ಯಾಯಾಲಯ ತಕ್ಷಣವೇ ಗುಂಡಿ ಮುಚ್ಚುವ ಕಾರ್ಯ ಆರಂಭಸುವಂತೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿತು. ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಕೋರಮಂಗಲದ ವಿಜಯ್ ಮೆನನ್ 2015ರಲ್ಲಿ ಮತ್ತಿತರರು […]

Advertisement

Wordpress Social Share Plugin powered by Ultimatelysocial