ಬೀದರ್ : ತಾವು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೀರಿ ಆದರೆ ಕಡು ಬಡವರಿಗೆ ಯಾವುದೆ ಲಾಭವಾಗಿಲ್ಲ, ಅದರ ಬದಲು ತಾವು ಪ್ರತಿಯೊಬ್ಬ ಬೀದಿ ವ್ಯಾಪಾರಿಗಳಿಗೆ ಕಡು ಬಡವರಿಗೆ ತಲಾ 10, 000 ರೂಪಾಯಿಯಂತ್ತೆ ನೇರವಾಗಿ ಬ್ಯಾಂಕ್ ಖಾತೆಯಲ್ಲಿ ಹಾಕಿದರೆ ಅವರಿಗೆ 2, 3 ತಿಂಗಳು ಕುಟುಂಬಕ್ಕೆ ಸಹಾಯವಾಗುತ್ತದೆ ಎಂದು ಪ್ರಧಾನಮಂತ್ರಿಗಳಿಗೆ ಬೀದರ್ ಕ್ಷೇತ್ರದ ಶಾಸಕ ರಹೀಮ್ ಖಾನ್ ಮನವಿ ಮಾಡಿದ್ದಾರೆ. ಹೊರರಾಜ್ಯದಲ್ಲಿ ಲಾಕ್ ಡೌನ್ ನಲ್ಲಿ ಸಿಲುಕಿರುವ ಕೂಲಿಕಾರ್ಮಿಕರಿಗೆ ತಮ್ಮ ತಮ್ಮ ಊರಿಗೆ ಕಳುಹಿಸಲು ಟ್ರೈನ್ ಗಳ ವ್ಯವಸ್ಥೆ ಮಾಡಬೇಕು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಟ್ರೈನ್ ಗಳು ಕೇವಲ 10 ಕೇಳಿದರೆ ತಾವು ನೂರಾರು ಟ್ರೈನ್ಗಳನ್ನು ಕಳುಹಿಸಿದ್ದೀರಿ. ಬೇರೆ ರಾಜ್ಯದ ಮುಖ್ಯಮಂತ್ರಿಗಳು ಅನುಮತಿ ಕೊಡುತ್ತಿಲ್ಲವೆಂದ್ದು ಹೇಳುತ್ತಿದ್ದೀರಿ ರಾಜ್ಯ ಸರ್ಕಾರ ಅನುಮತಿ ಕೊಡುವ ಅವಶ್ಯಕತೆ ಇಲ್ಲ ತಮಗೆ ಪೂರ್ಣ ಅಧಿಕಾರವಿದೆ ತಾವು ಈ ಕುರಿತು ಗಮನ ಹರಿಸಬೇಕು. ಜನರು ಪ್ರಶ್ನೆ ಮಾಡುತ್ತಿದ್ದಾರೆ ಹೊರ ರಾಜ್ಯದಲ್ಲಿ ಸಿಲುಕಿರುವ ಜನರನ್ನು ತಮ್ಮ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡದ ಪ್ರಧಾನಮಂತ್ರಿಯವರು ದೇಶವನ್ನು ಹೇಗೆ ಸಂಭಾಳಿಸುತ್ತಾರೆ ಎಂದು ಹೇಳಿದ್ದಾರೆ.ತಾವು ದಯಮಾಡಿ ಕರ್ನಾಟಕದಲ್ಲಿಯೂ ಇತರ ರಾಜ್ಯಗಳಲ್ಲಿಯೂ ಟ್ರೈನ್ ವ್ಯವಸ್ಥೆ ಮಾಡಬೇಕೆಂದುತಮ್ಮಲ್ಲಿ ಈ ಮೂಲಕ ವಿನಂತ್ತಿ ಮಾಡಿಕೊಳ್ಳುತ್ತೆನೆಂದ್ದು ತಿಳಿಸಿದರು.
ಬೀದರ್ ಕ್ಷೇತ್ರದ ಶಾಸಕರಿಂದ ಪ್ರಧಾನಮಂತ್ರಿಗೆ ಮನವಿ

Please follow and like us: