ಬೆಂಗಳೂರಲ್ಲಿ ಚಿಕಿತ್ಸೆಗೆ ವಿಶೇಷ ರೋಬೋ

ಬೆಂಗಳೂರು: ಕೊರೊನಾ ಸೋಂಕಿತ ರೋಗಿಗಳಿಗೆ ಅಗತ್ಯ ಸೇವೆ ಸಲ್ಲಿಸಲು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ರೋಬೋಗಳನ್ನ ತಯಾರಿಸಲು ಮುಂದಾಗಿದೆ. ಕೊರೊನಾ ಸೋಂಕಿತರೊಂದಿಗೆ ವೈದ್ಯರು ಮತ್ತು ಇತರೆ ಆರೋಗ್ಯ ಕಾರ್ಯಕರ್ತರು ಪದೇ ಪದೇ ಸಂಪರ್ಕ ಹೊಂದುವುದರಿಂದ ಅವರಿಗೂ ಸೋಂಕು ತಗುಲುವ ಸಾಧ್ಯತೆಯಿದೆ. ಹೀಗಾಗಿ, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಿಶೇಷ ವಾರ್ಡ್ಗಳಲ್ಲಿ, ಪ್ರಾಥಮಿಕ ಉಪಚಾರ ಹಾಗೂ ಆರೈಕೆಗೆ ಈ ರೋಬೋಗಳನ್ನು ಬಳಸಬಹುದು ಎಂದು ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕಿ ಮತ್ತು ಡೀನ್ ಡಾ. ಸಿ. ಆರ್. ಜಯಂತಿ ಅಭಿಪ್ರಾಯಪಟ್ಟಿದ್ದಾರೆ. ಕೇರಳದಲ್ಲಿ ಈಗಾಗ್ಲೇ ಕೊರೊನಾ ವಾರ್ಡ್ಗಳಲ್ಲಿ ರೋಬೋ ಬಳಸಿ ಯಶಸ್ಸು ಕಂಡಿದ್ದಾರೆ. ಇದೀಗ ಇಲ್ಲಿಯೂ ಇದೇ ತಂತ್ರ ಬಳಸಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ ವಿಪ್ರೋ ಸಂಸ್ಥೆ ಅಗತ್ಯ ನೆರವು ನೀಡಿದ್ದು, ಮೊದಲ ಹಂತವಾಗಿ ಎರಡು ರೋಬೋಗಳನ್ನು ಅಭಿವೃದ್ಧಿಪಡಿಸಿದೆ. ಮುಂದಿನ ವಾರದಲ್ಲಿ ರೋಬೋ ಸೇವೆಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ನಿರ್ದೇಶಕಿ ಜಯಂತಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯ

Tue Apr 21 , 2020
ನ್ಯೂಯಾರ್ಕ್‌: ಅಮೆರಿಕ ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯ ಮೂಲದ ವಿಜ್ಞಾನಿ ಸುದರ್ಶನಂ ಬಾಬು ಅವರನ್ನು ನೇಮಕ ಮಾಡುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ್ದಾರೆ. ಈ ಮೂಲಕ, ವಿಶ್ವವಿಖ್ಯಾತವಾಗಿರುವ ಈ ಮಂಡಳಿಗೆ ಆಯ್ಕೆ ಆಗಿರುವ ಮೂರನೆಯ ಭಾರತೀಯರು ಸುದರ್ಶನಂ ಎನಿಸಿಕೊಂಡಿದ್ದಾರೆ. ಪರಿಸರ ವ್ಯವಸ್ಥೆಯಲ್ಲಿ ಸಂಶೋಧನೆ ಕೈಗೊಳ್ಳುವುದು, ಕೈಗಾರಿಕೆಗಳ ಉತ್ಪಾದನೆಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದರ ಜತೆಗೆ, ಅದಕ್ಕೆ ಸಂಬಂಧಿಸಿದಂತೆ ಪರಿಹಾರಗಳನ್ನು ಒದಗಿಸುವುದು ಹಾಗೂ ಇಂಧನ ಇಲಾಖೆಯ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ […]

Advertisement

Wordpress Social Share Plugin powered by Ultimatelysocial