ನವದೆಹಲಿ: ಭಾರತ-ಚೀನಾ ನಡುವೆ ಆಫ್ರಿಕಾದಲ್ಲಿ ಕುತೂಹಲಕಾರಿ ಕದನವೊಂದು ನಡಿತಿದೆ. ಆಫ್ರಿಕಾ ಖಂಡದಲ್ಲಿನ ಬೈಕ್ ಉದ್ಯಮದಲ್ಲಿ ಈಗ ಎರಡು ಭಾರತೀಯ ಕಂಪನಿಗಳು ಸೇರಿ ಚೀನಾದ ೨೦೦ ಕಂಪನಿಗಳನ್ನು ಸೋಲಿಸಿವೆ. ಬಜಾಜ್ ಆಟೊ, ಟಿವಿಎಸ್ ಆರ್ಭಟಕ್ಕೆ ಬೆಚ್ಚಿಬಿದ್ದ ಚೀನಿ ಕಂಪನಿಗಳು ಒಂದೊAದಾಗಿ ಹಿಂದೆ ಸರಿಯುತ್ತಿವೆ. ೧೦ ವರ್ಷಗಳ ಹಿಂದೆ ಇದ್ದ ೨೦೦ ಕಂಪನಿಗಳು ಈಗ ೪೦ಕ್ಕಿಳಿದಿವೆ. ಅಷ್ಟು ಮಾತ್ರವಲ್ಲ. ಈ ಎರಡು ಭಾರತೀಯ ಕಂಪನಿಗಳೇ ಮಾರುಕಟ್ಟೆಯಲ್ಲಿ ಶೇ.೫೦ರಷ್ಟು ಪಾಲು ಹೊಂದಿವೆ. ೧೦ ವರ್ಷಗಳ ಹಿಂದೆ ಚೀನೀ ಕಂಪನಿಗಳ ಪಾಲು ಶೇ.೯೦-೯೫ರಷ್ಟಿತ್ತು. ಅದರಲ್ಲೂ ಬಜಾಜ್ ಕಂಪನಿಯದ್ದು ಗರಿಷ್ಠ ಸಾಧನೆ, ಅದರ ಪಾಲೇ ಶೇ.೪೦. ೨೦೨೦ ಮಾರ್ಚ್ಗೆ ಮುಕ್ತಾಯವಾದ ವಿತ್ತೀಯವರ್ಷದಲ್ಲಿ, ಮಾರುಕಟ್ಟೆಯಲ್ಲಿ ಮಾರಾಟವಾದ ಒಟ್ಟು ೨೭ ಲಕ್ಷ ಬೈಕ್ಗಳ ಪೈಕಿ, ಬಜಾಜ್ ಹತ್ತಿರ ಹತ್ತಿರ ೧೦ ಲಕ್ಷ ಬೈಕ್ ಮಾರಿದೆ. ಇನ್ನೊಂದು ಕಡೆ ಟಿವಿಎಸ್ ನಿಧಾನಕ್ಕೆ ಏರಿಕೆ ಸಾಧಿಸುತ್ತಿದೆ.
ಭಾರತಕ್ಕೆ ಮಂಡಿಯೂರಿದ ಚೀನಾ

Please follow and like us: