ಮಂಗಳೂರಿನಲ್ಲಿ ಇಂದಿನಿಂದ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಖಾಸಗಿ ಬಸ್ಸುಗಳಿಗೆ ಸ್ಯಾನಿಟೈಸರ್ ಮಾಡಲಾಗಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಒಳ ಭಾಗ, ಹೊರ ಭಾಗ ಸೇರಿದಂತೆ ಪೂರ್ತಿ ಬಸ್‌ಗೆ ಸ್ಯಾನಿಟೈಸರ್ ಮಾಡಲಾಗಿದ್ದು, ಫುಟ್ ಬೋರ್ಡ್‌ಗಳಿಗೆ ಸ್ಯಾನಿಟೈಸರ್ ಸಿಂಪಡನೆ ಮಾಡಲಾಗುತ್ತಿದೆ. ಇನ್ನು ಬಸ್ ನಿಲ್ದಾಣದಲ್ಲಿ ಖಾಸಗಿ ಸಂಸ್ಥೆಯು ಬಸ್‌ಗಳ ಪ್ರತಿ ಟ್ರಿಪ್ ಬಳಿಕ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕರಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಹೇಳಲಾಗಿದೆ.
ಮಂಗಳೂರು ಖಾಸಗಿ ಬಸ್ ಸಂಚಾರ ಆರಂಭ

Please follow and like us: