ಬೆಂಗಳೂರಿನಲ್ಲಿ ‘ಕೋವಿಡ್ ರೂಪಾಂತರಿ ಪತ್ತೆ’ಗೆ ಮಹತ್ವದ ಕ್ರಮ:

ಬೆಂಗಳೂರು: ಕೊರೋನಾ ಬಳಿಕ, ಈಗ ಕೋವಿಡ್ ರೂಪಾಂತರಿ ( Covid19 variant ) ಆಂತಕ ನಗರದಲ್ಲಿ ಹೆಚ್ಚಾಗಿದೆ. ಈ ಕೊರೋನಾ ರೂಪಾಂತರಿ ಪತ್ತೆಗೆ ಮಹತ್ವ ಹೆಚ್ಚೆಯನ್ನು ಬಿಬಿಎಂಪಿ ( BBMP ) ಇರಿಸಿದ್ದು, ಪಾಲಿಕೆ ವ್ಯಾಪ್ತಿಯ 34 ಎಸ್ ಟಿ ಪಿ ಕೊಳಚೆ ನೀರನ್ನು ಪರೀಕ್ಷೆಸೋದಕ್ಕೆ ಇಂದಿನಿಂದ ಆರಂಭಿಸಲಿದೆ.

ಈ ಬಗ್ಗೆ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕ ಚಂದ್ರ ನೇತೃತ್ವದಲ್ಲಿ ಜಲ ಮಂಡಳಿ, ಖಾಸಗೀ ಪ್ರಯೋಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ಕೊರೋನಾ ರೂಪಾಂತರಿ ಸೋಂಕು ಪತ್ತೆ ಹಚ್ಚಲು ನಗರದ 34 ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಕೊಳಚೆ ನೀರನ್ನು ಮೇ.5ರ ಇಂದಿನಿಂದ ಸಂಗ್ರಹಿಸಿ, ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಅಂದಹಾಗೇ ಕೊಳಚೆ ನೀರಿನಿಂದಲೂ ಕೊರೋನಾ ರೂಪಾಂತರಿ, ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. 15 ದಿನಗಳ ಹಿಂದೆಯೇ ಕೊಳಚೆ ನೀರು ಪರೀಕ್ಷೆ ಮಾಡಿದ ಪರಿಣಾಮ, ಹೆಚ್ಚು ಜನರಿಗೆ ಹರಡೋದನ್ನು ಅಲ್ಲಿ ತಪ್ಪಿಸಲಾಗಿತ್ತು. ಈ ಹಿನ್ನಲೆಯಲ್ಲಿಯೇ ಬಿಬಿಎಂಪಿಯಿಂದ ನಗರದಲ್ಲಿ ಕೋವಿಡ್ ರೂಪಾಂತರಿ ತಡೆಗಟ್ಟುವ ನಿಟ್ಟಿನಲ್ಲಿ 34 ಎಸ್ ಟಿ ಪಿಗಳಿಂದ ನೀರು ಸಂಗ್ರಹಿಸಿ, ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನು ಬಿಬಿಎಂಪಿ ನಡೆಸುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇ 7-8ಕ್ಕೆ ಶುರು YPL...ಇದು ವಿಷ್ಣುದಾದಾ ಅಭಿಮಾನಿಗಳ ಯಜಮಾನ ಪ್ರೀಮಿಯರ್ ಲೀಗ್!

Thu May 5 , 2022
ಈಗ ಎಲ್ಲೆಲ್ಲೂ IPL ಫೀವರ್ ಶುರುವಾಗಿದೆ. ಈ ಐಪಿಎಲ್ ಹಂಗಾಮದ ನಡುವೆ YPL ಟೂರ್ನಿ ಶುರುವಾಗ್ತಿದೆ. ನಾವು ಕೆಪಿಎಲ್(ಕರ್ನಾಟಕ ಪ್ರೀಮಿಯರ್ ಲೀಗ್) ಸಿಸಿಎಲ್ ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಕೇಳಿದ್ದೇವೆ ಇದು ಯಾವುದು YPL ಅನ್ನೋ ಪ್ರಶ್ನೆಗೆ ಉತ್ತರ ಯಜಮಾನ ಪ್ರೀಮಿಯರ್ ಲೀಗ್. ವಿಷ್ಣುಸೇನಾ ಸಮಿತಿಯಿಂದ ಆಯೋಜಿಸಲಾಗಿರುವ ಈ ಟೂರ್ನಿಯ ಸಂಪೂರ್ಣ ಜವಾಬ್ದಾರಿಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ಇದೇ 7 ಮತ್ತು 8ರಂದು‌ ನಡೆಯಲಿರುವ YPL ಟೂರ್ನಿಮೆಂಟ್ […]

Advertisement

Wordpress Social Share Plugin powered by Ultimatelysocial