ಜೂನ್‌ನಿಂದ ಭಾರತ-ಬಾಂಗ್ಲಾದೇಶ ರೈಲು ಸೇವೆ ಆರಂಭ ̤̤̤

ನವದೆಹಲಿ ಮೇ 29: ಭಾರತ ಮತ್ತು ಬಾಂಗ್ಲಾದೇಶ ನಡುವಿನ ರೈಲು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೂರನೇ ಪ್ರಯಾಣಿಕ ರೈಲು ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.

ಮಿಥಾಲಿ ಎಕ್ಸ್ ಪ್ರೆಸ್ ರೈಲು ಸೇವೆಯು ಜೂನ್‌ 1 ರಿಂದ ಆರಂಭವಾಗುತ್ತಿದೆ.

ಈ ರೈಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಮತ್ತು ಬಾಂಗ್ಲಾದೇಶದ ಢಾಕಾ ನಡುವೆ ಕಾರ್ಯನಿರ್ವಹಿಸಲಿದೆ.

ನೂತನ ಮಿಥಾಲಿ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಜೂನ್‌ 1 ರಂದು ನವದೆಹಲಿಯ ರೈಲು ಭವನದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ರೈಲು ಸಚಿವರು ವರ್ಚುಯಲ್ ಮೂಲಕ ಉದ್ಘಾಟಿಸಲಿದ್ದಾರೆ.

ಮಿಥಾಲಿ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿ: ಪ್ರತಿ ಭಾನುವಾರ ಮತ್ತು ಬುಧವಾರ ಮಿಥಾಲಿ ಎಕ್ಸ್ ಪ್ರೆಸ್ ರೈಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಯಿಂದ ಬೆಳಗ್ಗೆ 11.45 ಕ್ಕೆ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಇದು ಬಾಂಗ್ಲಾದೇಶದ ಢಾಕಾ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ರಾತ್ರಿ 10.30 ಕ್ಕೆ ತಲುಪಲಿದೆ.

ಅದೇ ರೀತಿ, ಮಿಥಾಲಿ ಎಕ್ಸ್ ಪ್ರೆಸ್ ರೈಲು ಬಾಂಗ್ಲಾದೇಶದ ಢಾಕಾ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ರಾತ್ರಿ 9.50 ಕ್ಕೆ ಹೊರಡಲಿದೆ. ಮತ್ತು ಅದು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ರೈಲು ನಿಲ್ದಾಣಕ್ಕೆ ಬೆಳಗ್ಗೆ 7.15 ಕ್ಕೆ ಆಗಮಿಸಲಿದೆ.

ಎರಡು ಕಡೆ ಕೆಲವು ಹೊತ್ತು ನಿಲ್ಲಲಿದೆ.

ಸಾಮಾನ್ಯವಾಗಿ ಮಿಥಾಲಿ ಎಕ್ಸ್ ಪ್ರೆಸ್ ರೈಲು ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲುವುದಿಲ್ಲ. ಆದರೆ ಎರಡು ರೈಲು ನಿಲ್ದಾಣಗಳಲ್ಲಿ ಕೆಲವು ನಿಮಿಷಗಳ ಕಾಲ ವಿರಾಮಕ್ಕಾಗಿ ನಿಲುಗಡೆ ಮಾಡಲಾಗುತ್ತದೆ. ಮೊದಲನೆಯದಾಗಿ ಹಲ್ದಿಬರಿ ರೈಲು ನಿಲ್ದಾಣ ಮತ್ತು ಎರಡನೆಯದಾಗಿ ಚಿಲಹಟಿ ರೈಲು ನಿಲ್ದಾಣದಲ್ಲಿ ಕೆಲವು ನಿಮಿಷಗಳ ಕಾಲ ನಿಲುಗಡೆ ಮಾಡಲಾಗುತ್ತದೆ.

ರೈಲಿನಲ್ಲಿ ಎಸಿ ಬೋಗಿಗಳು ಮಾತ್ರ ಲಭ್ಯ: ನ್ಯೂ ಜಲ್ಪೈಗುರಿ-ಢಾಕಾ ಕಂಟೋನ್ಮೆಂಟ್ ನಡುವಿನ ಮಿಥಾಲಿ ಎಕ್ಸ್ ಪ್ರೆಸ್ ರೈಲು ಒಂದು ಫಸ್ಟ್ ಕ್ಲಾಸ್ ಎಸಿ(ಆಸನಗಳು ಮಾತ್ರ) ಬೋಗಿ, ನಾಲ್ಕು ಎಸಿ ಚೇರ್ ಕಾರುಗಳ ಬೋಗಿಗಳು ಮತ್ತು ಎರಡು ಲಗೇಜ್ ಕಮ್ ಜನರೇಟರ್ ವ್ಯಾನ್‌ ಗಳನ್ನು ಒಳಗೊಂಡಿರುವ ಬೋಗಿಗಳನ್ನು ಹೊಂದಿರುತ್ತದೆ. ಮಿಥಾಲಿ ಎಕ್ಸ್ ಪ್ರೆಸ್ನಲ್ಲಿ ಮೂರು ರೀತಿಯ ಸೀಟುಗಳು- ಎಸಿ ಬರ್ತ್, ಎಸಿ ಸೀಟ್ ಮತ್ತು ಎಸಿ ಚೇರ್ ಸೀಟುಗಳು ಲಭ್ಯವಿವೆ.

ಟಿಕೆಟ್ ದರ: ಮಿಥಾಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ರೈಲಿನ ಟಿಕೆಟ್ ಬೆಲೆಯೊಂದಿಗೆ ಶೇ.15ರಷ್ಟು ವ್ಯಾಟ್ ಹಾಗೂ 500 ಬಾಂಗ್ಲಾದೇಶಿ ಟಾಕಾ ಪಾವತಿಸಬೇಕಾಗುತ್ತದೆ. ರೈಲಿನ ಎಸಿ ಬರ್ತ್ ಟಿಕೆಟ್ ಬೆಲೆ 4905 ಬಾಂಗ್ಲಾದೇಶಿ ಟಾಕಾ, ಎಸಿ ಸೀಟ್ ಟಿಕೆಟ್ ಬೆಲೆ 3805 ಬಾಂಗ್ಲಾದೇಶಿ ಟಾಕಾ ಮತ್ತು ಎಸಿ ಚೇರ್ ಟಿಕೆಟ್ ಬೆಲೆ 2705 ಬಾಂಗ್ಲಾದೇಶಿ ಟಾಕಾ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಇತಿಹಾಸದ ಪುಟಗಳಲ್ಲಿ ತಾಜ್‌ಮಹಲ್‌ಗೆ ಪ್ರೀತಿಯ ಸಂಕೇತ!

Sun May 29 , 2022
ಭಾರತದ ಇತಿಹಾಸದ ಪುಟಗಳಲ್ಲಿ ತಾಜ್‌ಮಹಲ್‌ಗೆ ಪ್ರೀತಿಯ ಸಂಕೇತ ಎಂಬ ಹೆಸರು ನೀಡಲಾಗಿದೆ. ಶಹಜಹಾನ್ ತಾನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ಪತ್ನಿ ಮುಮ್ತಾಜ್ ಮೃತಪಟ್ಟಾಗ ಆಕೆಯ ನೆನಪಿಗಾಗಿ ಇದನ್ನು ಕಟ್ಟಿಸಿದ್ದ ಎಂದು ನಾವು ಪುಸ್ತಕಗಳಲ್ಲಿ ಓದಿದ್ದೇವೆ. ಆದರೆ ಕೆಲವು ಇತಿಹಾಸಕಾರರು ಇದನ್ನು ಒಪ್ಪುವುದಿಲ್ಲ. ಇದೆಲ್ಲ ಸುಳ್ಳಿನ ಕಂತೆ ಎಂಬುದು ಅವರ ಖಚಿತ ಅಭಿಪ್ರಾಯ. ತಾಜ್‌ ಮಹಲನ್ನು ಶಹಜಹಾನ್ ಕಟ್ಟಿಸಲಿಲ್ಲ. ಅಲ್ಲಿ ಮೊದಲೇ ಬೃಹತ್ತಾದ ಒಂದು ಹಿಂದೂ ದೇವಸ್ಥಾನ ಇತ್ತು. ಅದಕ್ಕೆ ಶಹಜಹಾನ್ ಕಾಲದಲ್ಲಿ […]

Advertisement

Wordpress Social Share Plugin powered by Ultimatelysocial