ಮಂಗಳೂರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರನ್ನು ರೈಲಿನ ಮೂಲಕ ಊರಿಗೆ ಕಳುಹಿಸಿ ಕೊಡಲಾಗುತ್ತದೆ ಎಂಬ ವದಂತಿ ಮಂಗಳೂರಿನಲ್ಲಿ ಹಬ್ಬಿದ್ದು, ಇದರಿಂದಾಗಿ ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಾವಿರಾರು ಜನರ ಸೇರಿ ಗೊಂದಲ ಉಂಟಾದ ಘಟನೆ ಇಂದು ನಡೆದಿದೆ. ಮಂಗಳೂರಿನಿಂದ ರೈಲಿನಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ಕಳುಹಿಸುತ್ತಾರೆ ಅಂತ ವದಂತಿ ಹರಡಿತ್ತು. ಇಂದು ಮುಂಜಾನೆಯಿಂದಲೇ ಸಾವಿರಾರು ಕಾರ್ಮಿಕರು ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಆದರೆ ರೈಲ್ವೇ ಸಿಬ್ಬಂದಿ‌‌ ಯಾವುದೇ ರೈಲು ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಸೇರಿದ ವಲಸೆ ಕಾರ್ಮಿಕರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಆದರೆ ಇದರಿಂದ ಆಕ್ರೋಶಗೊಂಡ ವಲಸೆ ಕಾರ್ಮಿಕರು ಹಿಂದುರುಗದೆ ‘We want to go home’ ಪೋಸ್ಟರ್ ಹಿಡಿದು ಪ್ರತಿಭಟನೆಗೆ ನಡೆಸಿದ್ದಾರೆ. ಈ ವೇಳೆ ಸ್ಥಳದಿಂದ ಹೋಗುವಂತೆ ಪೊಲೀಸರು ಮನವೊಲಿಸಲು ಪ್ರಯತ್ನ ಪಟ್ಟರೂ ಕಾರ್ಮಿಕರು ಪೊಲೀಸರ ಮಾತನ್ನು ಕೇಳದೆ, ನಾವು ಉಪವಾಸವಿದ್ದರೂ ಪರವಾಗಿಲ್ಲ ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು‌‌ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ವರದಿ: ಸ್ಪೀಡ್  ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ರೈಲು ದುರಂತ ಹಿನ್ನೆಲೆ: ರಾಹುಲ್ ಗಾಂಧಿ ಸಂತಾಪ

Fri May 8 , 2020
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಇಂದು  ಬೆಳಗ್ಗಿನ ಜಾವ ಗೂಡ್ಸ್ ರೈಲು ಹರಿದು 15 ಕಾರ್ಮಿಕರು ಸಾವನ್ನಪ್ಪಿರುವ ಘಟನೆಯ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ಆಘಾತ ವ್ಯಕ್ತಪಡಿಸಿದರು.ಈ ಕುರಿತು  ಟ್ವೀಟ್ ಮಾಡಿರುವ  ಅವರು, ನನ್ನ ಕಾರ್ಮಿಕರು ಹಾಗೂ ಸಹೋದರರು ಗೂಡ್ಸ್ ರೈಲಿನಡಿ ಸಿಲುಕಿ ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದೇನೆ. ರಾಷ್ಟ್ರನಿರ್ಮಾಣಕಾರರಾಗಿರುವ ವಲಸೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರನ್ನು ದೇಶದಾದ್ಯಂತ ನಡೆಸಿಕೊಳ್ಳುತ್ತಿರುವ ರೀತಿಗೆ ನಾವು ನಾಚಿಕೆಪಡಬೇಕಾಗಿದೆ. ಮೃತ ಕಾರ್ಮಿಕರ ಕುಟುಂಬಗಳಿಗೆ ನನ್ನ […]

Advertisement

Wordpress Social Share Plugin powered by Ultimatelysocial