ಮಧ್ಯಪ್ರದೇಶದಲ್ಲಿ  ಜೀವ ಜಲಕ್ಕೆ ಹಾಹಾಕಾರ

ಮಧ್ಯಪ್ರದೇಶ: ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಕಳ್ಳತನವಾಗುವ ಸಾಧ್ಯತೆ ಇದೆ ಎಂದು ನೀರು ಸಂಗ್ರಹಿಸಿರುವ ಡ್ರಮ್ಗೆ ಗ್ರಾಮಸ್ಥರು ಬೀಗ ಹಾಕುತ್ತಿದ್ದಾರೆ. ಪ್ರತೀ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಈ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಈ ವರ್ಷ ಕೂಡ ನೀರಿನ ಸಮಸ್ಯೆ ಎಂದುರಾಗಿದೆ. ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ, ಪಂಚಾಯಿತಿ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದ್ದರಿಂದ ಕೆಲವೊಮ್ಮೆ ನೀರನ್ನು ಕದಿಯಲಾಗುತ್ತದೆ. ಹೀಗಾಗಿ ನಾವು ಬೀಗ ಹಾಕುತ್ತಿದ್ದೇವೆ. ಈ ನೀರನ್ನು 3 ಕಿ.ಮೀ. ದೂರದಿಂದ ತಂದು ಸಂಗ್ರಹಿಸಿದ್ದೇವೆ ಎಂದಿದ್ದಾರೆ.ಈ ಬಗ್ಗೆ ಮಾತನಾಡಿರುವ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ಅಧಿಕಾರಿ, ಪವರ್ ಪಂಪ್ ಮತ್ತು ಹ್ಯಾಂಡ್ ಪಂಪ್​​ಅನ್ನು ಗ್ರಾಮದಲ್ಲಿ ಅಳವಡಿಸಿದ್ದೇವೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಹಲವು ವ್ಯವಸ್ಥೆಗಳನ್ನು ಮಾಡುತ್ತೇವೆ. ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಇಂತಹ ಸಮಸ್ಯೆ ಎದುರಾಗಿದೆ. ಹ್ಯಾಂಡ್‌ ಪಂಪ್‌ಗಳು ಕಾರ್ಯನಿರ್ವಹಿಸದಿದ್ದರೆ ಅವುಗಳನ್ನು ಸರಿಪಡಿಸುತ್ತೇವೆ ಎಂದಿದ್ದಾರೆ.

 

 

Please follow and like us:

Leave a Reply

Your email address will not be published. Required fields are marked *

Next Post

ಗಾಜು ಪುಡಿಗುಟ್ಟಿಸುವ ಶಕ್ತಿ ಇದೆಯಾ.. ಸಾವಧಾನ ಆಮೆಗೆ

Thu May 28 , 2020
ಆಮೆಯ ಬಗ್ಗೆ ಸಾಮಾನ್ಯವಾಗಿ ಒಂದು ಕಲ್ಪನೆ ಇದೆ, ಸಾವಧಾನವಾಗಿ ಚಲಿಸುವ ಪ್ರಾಣಿ ಎಂಬುದು ಜನಜನಿತ. ಆದರೆ ಇತ್ತೀಚೆಗೆ ವೈರಲ್ ಆದ ಸುದ್ದಿ ಅಚ್ಚರಿ ಹುಟ್ಟಿಸುವಂತಿದೆ. ಲ್ಯಾಟೊನ್ಯಾ ಎಂಬಾಕೆ ತನ್ನ ಸಹೋದರ ಕೆವಿನ್ ನೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಮುಂಭಾಗದ ಗ್ಲಾಸ್ ಗೆ ವಸ್ತುವೊಂದು ಬಡಿದಿದೆ. ಬಡಿದ ರಭಸಕ್ಕೆ ಗ್ಲಾಸ್ ಒಡೆದಿದೆ. ಆದರೆ ಅಲ್ಲೊಂದು ಅಚ್ಚರಿ ಕಾದಿತ್ತು. ಅದು ಕಲ್ಲು ಅಥವ ಯಾವುದೇ ಗಟ್ಟಿ ಪದಾರ್ಥವಾಗಿರಲಿಲ್ಲ. ಬದಲಿಗೆ ಆಮೆ ಅಲ್ಲಿ ಕಂಡಿತ್ತು. […]

Advertisement

Wordpress Social Share Plugin powered by Ultimatelysocial