ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ.

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದು, ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ  ಕೇಂದ್ರ ಸಕಾರವನ್ನು ಶ್ಲಾಘಿಸಿದ್ದಾರೆ.ಕೇಂದ್ರ ಬಜೆಟ್ ಕುರುತು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ ನಾಗೇಶ್, ಒಂದು ತರಗತಿ, ಒಂದು ಟಿವಿ ಚಾನಲ್ ಕಾರ್ಯಕ್ರಮದಲ್ಲಿ ಸ್ಥಳೀಯ ಭಾಷೆಯಲ್ಲಿ ಕಲಿಸಲು ಚಾನಲ್ಗಳ ಸಂಖ್ಯೆಯನ್ನು ೨೦೦ಕ್ಕೆ ಹೆಚ್ಚಿಸುವ ಪ್ರಧಾನಿ ನರೇದ್ರ ಮೋದಿ ಸರ್ಕಾರದ ಘೋಷಣೆ ಶ್ಲಾಘನೀಯ. ಇದು ಶಿಕ್ಷಣದ ಪ್ರಸರಣಕ್ಕೆ ಇನ್ನಷ್ಟು ನೆರವಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ.ಕೇಂದ್ರ ಸರ್ಕಾರ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ನಿರ್ಧಾರವಾಗಿದ್ದು, ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಈ ಯೋಜನೆ ತರಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್ ಅಲ್ಲಿ 1 ಕೋಟಿ ದಾಟಿದ ಫಾಲೋವರ್

Tue Feb 1 , 2022
ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಪ್ರಧಾನಿ ಮೋದಿ ಫೇಸ್ ಬುಕ್, ಟ್ವಿಟ್ಟರ್ ನಲ್ಲೂ ಹೆಚ್ಚಿನ ಸಂಖ್ಯೆಯ ಫಾಲೋವರ್ ಗಳನ್ನು ಹೊಂದಿದ್ದಾರೆ. ಇದೀಗ ಪ್ರಧಾನಿ ಮೋದಿಯ ಯೂಟ್ಯೂಬ್ ಚಂದಾದಾರರ ಸಂಖ್ಯೆ 1 ಕೋಟಿ ದಾಟಿದೆ.ಜಾಗತಿಕ ನಾಯಕರ ಪೈಕಿ ಅಮೆರಿಕಾಧ್ಯಕ್ಷ ಜೊ ಬೈಡನ್ ಯೂಟ್ಯೂಬಿನಲ್ಲಿ 7 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದರೆ, ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೊ 36 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ.ಇದೇ ವೇಳೆ ದೇಶದ ನಾಯಕರ ಪೈಕಿ ಕಾಂಗ್ರೆಸ್ ನಾಯಕ […]

Advertisement

Wordpress Social Share Plugin powered by Ultimatelysocial