ಮಾಜಿ ಸಿಎಂ ವಿರುದ್ಧ ಅಶ್ಲೀಲ ಪೋಸ್ಟ್‌; ಯುವಕನ ಬಂಧನ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ 4 ವರ್ಷದ ಹಿಂದಿನ ಫೋಟೋ ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ಅಶ್ಲೀಲ ಬರಹ ಹಾಗೂ ಫೋಟೋ ಪೋಸ್ಟ್‌ ಮಾಡಿದ್ದ ಬಾದಾಮಿಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 4 ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯೊಬ್ಬರು ಅವರಿಗೆ ವೇದಿಕೆಯಲ್ಲಿ ಕೆನ್ನೆಗೆ ಮುತ್ತು ಕೊಟ್ಟಿದ್ದು ಸುದ್ದಿಯಾಗಿತ್ತು. ಈಗ ಅದೇ ಫೋಟೋ ಬಳಸಿಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್‌ಬುಕ್‌ನಲ್ಲಿ ಯುವಕ ಪೋಸ್ಟ್‌ ಮಾಡಿದ್ದ. ಮಾಜಿ ಸಿಎಂ ಸ್ವಕ್ಷೇತ್ರ ಬಾದಾಮಿಯ ಖ್ಯಾಡ ಗ್ರಾಮದ ಸಂಗಪ್ಪ ಸಿದ್ರಾಮಣ್ಣವರ್‌ ಎಂಬಾತ ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ ವ್ಯಕ್ತಿ. ಮಹಾತ್ಮ ಗಾಂಧಿ ಎನ್ನುವ ಫೇಸ್‌ಬುಕ್‌ ಫೇಜ್‌ನಲ್ಲಿನ ಪೋಸ್ಟ್‌ ಶೇರ್‌ ಮಾಡಿದ್ದ. ಯುವಕನನ್ನು ಪೊಲೀಸರು ಬಂಧಿಸಿದ್ದು, ಬಾದಾಮಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2016ರಲ್ಲಿ ತರೀಕೆರೆ ತಾಲೂಕು ಪಂಚಾಯಿತಿ ಸದಸ್ಯೆ ಗಿರಿಜಾ ಎಂಬುವವರು ವೇದಿಕೆಯಲ್ಲೇ ಸಿದ್ದರಾಮಯ್ಯನವರ ಕೆನ್ನೆಗೆ ಮುತ್ತು ನೀಡಿದ್ದರು. ಸಿದ್ದರಾಮಯ್ಯನವರ ಅಭಿಮಾನಿಯಾಗಿದ್ದ ನಾನು ರಾಜಕೀಯಕ್ಕೆ ಬರಲು ಅವರೇ ಸ್ಫೂರ್ತಿ. ಅವರನ್ನು ಹತ್ತಿರದಿಂದ ನೋಡಿ ಖುಷಿಯಾಗಿ ಮುತ್ತು ಕೊಟ್ಟೆ ಎಂದು ಗಿರಿಜಾ ಅವರು ಸಮರ್ಥನೆಯನ್ನೂ ಮಾಡಿಕೊಂಡಿದ್ದರು.

ಆ ಫೋಟೋ ಮತ್ತು ವಿಡಿಯೋಗಳು ಆಗ ಸಾಕಷ್ಟು ವೈರಲ್ ಆಗಿದ್ದವು. ಈಗ ಅದನ್ನೇ ಬಳಸಿ ಅಶ್ಲೀಲವಾಗಿ ಪೋಸ್ಟ್‌ ಶೇರ್‌ ಮಾಡಲಾಗಿತ್ತು. ಮಹಾತ್ಮಾ ಗಾಂಧಿ ಪೇಜ್‌ನಿಂದ ಶೇರ್‌ ಮಾಡಿದ್ದು, ಆದರೆ ಆ ಪೇಜ್ ಕ್ರಿಯೇಟ್ ಮಾಡಿದವರು ಯಾರು ಎನ್ನುವುದು ಗೊತ್ತಿಲ್ಲ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಹಶೀಲ್ದಾರ್ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಯುವಕನನ್ನು ಬಿಡುಗಡೆಗೊಳಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ತೀವ್ರ ಮಳೆಯಿಂದ ಜನಜೀವನ ಅಸ್ತವ್ಯಸ್ತ

Wed May 27 , 2020
ಕೋವಿಡ್-೧೯ರ ಅಟ್ಟಹಾಸದ ನಡುವೆ ಧಾರಾಕಾರ ಮಳೆಗೆ ಅಸ್ಸಾಂ ನ ಧೇಮಾಜಿ, ಲಾಖಿಂಪುರ್, ರ‍್ಯಾಂಗ್, ನಾಲ್ಬಾರಿ, ಗೋಲಾಪಾರಾ, ದಿಬ್ರುಗಢ್ ಮತ್ತು ಟಿನ್ ಸುಕಿಯಾ ಜಿಲ್ಲೆಗಳ ಜನರು ಮಳೆಯಿಂದಾಗಿ ಸಂಕಷ್ಟಗೊಳಗಾಗಿದ್ದಾರೆ. ಹಾಗೂ ಸುಮಾರು ಎರಡು ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ, ೯ಸಾವಿರ ಗ್ರಾಮಸ್ಥರನ್ನು ೩೫ ನಿರಾಶ್ರಿತ ಶಿಬಿರಗಳಿಗೆ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ. ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ೧೦೦೭ ಹೆಕ್ಟೇರ್ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಅಷ್ಟೇ ಅಲ್ಲದೇ ೧೬,೫೦೦ ದೇಶೀಯ ಪ್ರಾಣಿ, […]

Advertisement

Wordpress Social Share Plugin powered by Ultimatelysocial