ಕೆಜಿಎಫ್​ ಚಾಪ್ಟರ್​ 2 ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.!

 

ನವದೆಹಲಿ: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2 ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಏಪ್ರಿಲ್​ 14ರಂದು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲೂ ಕೆಜಿಎಫ್​ ಚಾಪ್ಟರ್​ 2 ದಾಖಲೆ ಬರೆದಿದ್ದು, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರವನ್ನು ಹಿಂದಿಕ್ಕಿದೆ.

ಇನ್ನು ಚಿತ್ರ ಹೇಗಿರಲಿದೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇರಲಿದೆ. ಅದಕ್ಕೆ ಉತ್ತರ ಇಲ್ಲಿದೆ.

ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ ಉಮೇರ್​ ಸಂಧು ಕೆಜಿಎಫ್​ ಚಾಪ್ಟರ್​ 2 ಚಿತ್ರದ ಮೊದಲ ವಿಮರ್ಶೆಯನ್ನು ನೀಡಿದ್ದಾರೆ. ಚಿತ್ರವನ್ನು ಮೆಚ್ಚಿಕೊಂಡಿರುವ ಉಮೇರ್​, ವಿಶ್ವದರ್ಜೆಯ ಸಿನಿಮಾ ಎಂದು ಹಾಡಿ ಹೊಗಳಿದ್ದಾರೆ.

ಕೆಜಿಎಫ್​ ಚಾಪ್ಟರ್ 2 ಒಂದು ಹೈ ಆಕ್ಟೇನ್​ ಮನರಂಜನಾ ಮಸಾಲ ಸಿನಿಮಾ ಆಗಿದೆ. ನಿಮ್ಮ ಭರವಸೆಯನ್ನು ಖಂಡಿತ ಉಳಿಸಿಕೊಳ್ಳುತ್ತದೆ. ಈ ಚಿತ್ರ ನಿಮ್ಮನ್ನು ಸಂಪೂರ್ಣ ಮನರಂಜಿಸಲಿದೆ. ಬೆರಗುಗೊಳಿಸುವ ಸಾಹಸ, ಅಚ್ಚರಿಯ ಸ್ಥಳಗಳು ಮತ್ತು ಚಿತ್ರವನ್ನು ಸೊಗಸಾಗಿ ಪ್ರಸ್ತುತ ಪಡಿಸಿದ್ದಾರೆ. ಬಾಕ್ಸ್​ಆಫೀಸ್​ನಲ್ಲಿ ಈ ಸಿನಿಮಾಗೆ ವೀಕ್ಷಕರು ಅದ್ಧೂರಿ ಸ್ವಾಗತವನ್ನು ನೀಡಲಿದ್ದಾರೆ. ಯಶ್​ ಅವರ ನಟನೆ ಅದ್ಭುತವಾಗಿದ್ದು, ಈ ಚಿತ್ರ ಬ್ಲಾಕ್​ಬ್ಲಸ್ಟರ್​ ಆಗಲಿದೆ ಎಂದು ಹೇಳಿದ್ದಾರೆ.

ಕೆಜಿಎಫ್​ ಚಾಪ್ಟರ್​ 2 ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಪ್ರಿಲ್ 14 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕೆಜಿಎಫ್: ಚಾಪ್ಟರ್​ 2′ ಅನ್ನು ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀ ರಾಮನವಮಿ ಪ್ರಯುಕ್ತ ಕಂಡ್ಹಿಡಿ ನೋಡನ ಚಿತ್ರದ "ಮಿಡ್ಲ್ ಕ್ಲಾಸ್ ಗೀತೆ" ಇಂದು ಲೋಕಾರ್ಪಣೆಯಾಗಿದೆ.

Mon Apr 11 , 2022
  ಮ್ಯಾನ್ ಲಿಯೋ ಸಂಸ್ಥೆಯಲ್ಲಿ ನಿರ್ಮಾಣ ವಾಗಿರುವ, ಶಶಿಕುಮಾರ್, ದಿವ್ಯ ಚಂದ್ರಧರ ಹಾಗೂ ಯೋಗೇಶ್ ಕೆ. ಗೌಡ ಇವರ ಸಹ ನಿರ್ಮಾಣದಲ್ಲಿ, ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಹಾಗೂ ಪ್ರಣವ ಸೂರ್ಯ ನಾಯಕ ನಾಗಿ ಅಭಿನಯಿಸಿರುವ “ಕಂಡ್ಹಿಡಿ ನೋಡನ” ಚಿತ್ರದ ಗೀತಾರ್ಪಣೆ. ಶ್ರೀಧರ್ ಕಷ್ಯಪ್ ರಾಗ ಸಂಯೋಜನೆ ಮಾಡಿ ಅವರೇ ಹಾಡಿರುವ ಈ ಗೀತೆಗೆ ಸಾಹಿತ್ಯ ಬರೆದಿರುವವರು ಪ್ರಮೋದ್ ಆಚಾರ್ಯ. ಪ್ರಣವ ಸೂರ್ಯ ನಾಯಕನಾಗಿ ಹಾಗೂ ನಾಯಕಿಯಾಗಿ ಪ್ರಿಯಾಂಕ ಮಳಲಿ ಅಭಿನಯಿಸಿರುವ […]

Advertisement

Wordpress Social Share Plugin powered by Ultimatelysocial