ರಾಜತಾಂತ್ರಿಕ ಮಾರ್ಗದಲ್ಲಿ ಕನಕಪುರ ‘ಬಂಡೆ’; ಡಿಕೆಶಿ ‘ಪ್ಯಾನ್ ಕರ್ನಾಟಕ ಲೀಡರ್’!

ದರ್ಪ- ದಾಷ್ಟ್ಯ ಬಿಟ್ಟ ಆಯಂಗ್ರಿ ಯಂಗ್ ಮ್ಯಾನ್: ರಾಜತಾಂತ್ರಿಕ ಮಾರ್ಗದಲ್ಲಿ ಕನಕಪುರ 'ಬಂಡೆ'; ಡಿಕೆಶಿ 'ಪ್ಯಾನ್ ಕರ್ನಾಟಕ ಲೀಡರ್'!newup

ಬೆಂಗಳೂರು: ಮಾತಿನಲ್ಲೇ ದರ್ಪ ದಾಷ್ಟ್ಯ ತೋರುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬದಲಾಗಿದ್ದಾರೆ. ತಮ್ಮ ರಾಜತಾಂತ್ರಿಕ ನಿಲುನಿವಿನೊಂದಿಗೆ ತಮ್ಮ ವ್ಯಕ್ತಿತ್ವದಲ್ಲಿ ಪರಿವರ್ತನೆಗೊಂಡಿರುವ ಡಿಕೆಶಿ ಪಕ್ಷದಲ್ಲಿ ತಮ್ಮ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹೊಸ ಇಮೇಜ್ ಕಟ್ಟಿಕೊಂಡಿದ್ದು, ಪಕ್ಷದೊಳಗಿನ ನಾಯಕರ ಜೊತೆಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಹಿರಿಯ ನಾಯಕ ಎಂ ಬಿ ಪಾಟೀಲ್ ಅವರೊಂದಿಗಿರುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಶಿವಕುಮಾರ್ ಹಂಚಿಕೊಂಡಿದ್ದರು, ಈ ಫೋಟೋ ಇಮೇಜ್ ಮೇಕ್ ಓವರ್‌ಗೆ ಸಾಕ್ಷಿಯಾಗಿದೆ.

ಡಿಕೆ ಶಿವಕುಮಾರ್ ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಅದರಲ್ಲೂ ವಿಶೇಷವಾಗಿ ಮಾಜಿ ಸಚಿವ ಎಂಬಿ ಪಾಟೀಲ್ ಅವರಿಗೆ ಹತ್ತಿರವಾಗಲು ಬೆಳಗಾವಿ ಅಧಿವೇಶನವನ್ನು ಬಳಸಿಕೊಂಡಿದ್ದಾರೆ, ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ನಡುವಿನ ಬಾಂಧವ್ಯದ ಪಕ್ಷದ ಕಾರ್ಯಕರ್ತರಿಗೆ ಸಮಾಧಾನ ತಂದಿದೆ. ಶಿವಕುಮಾರ್ ಪ್ಯಾನ್-ಕರ್ನಾಟಕ ನಾಯಕರಾಗಿ ಬೇರೂರಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಇದರ ಜೊತೆಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿನ ಶೀತಲ ಸಮರಕ್ಕೆ ತೆರೆ ಎಳೆಯಲು ಬಯಸಿರುವ ಡಿಕೆಶಿ ಉತ್ತಮ ಭಾಂದವ್ಯ ಹೊಂದಲು ಮುಂದಾಗಿದ್ದಾರೆ, ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಮೊದಲು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada0

Please follow and like us:

Leave a Reply

Your email address will not be published. Required fields are marked *

Next Post

ಸ್ಫೂರ್ತಿಯಾದ ಶಕ್ತಿಧಾಮ;ಮೈಸೂರಿಗೆ ಒಲಿದ ಬಂಗಾರದ ಮನುಷ್ಯ

Fri Dec 24 , 2021
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಶಕ್ತಿಧಾಮ ಎಲ್ಲರ ಗಮನವನ್ನು ಸೆಳೆದಿದೆ ಹಾಗೂ ಹೆಚ್ಚಿನ  ಮನೆಮಾತಾದ ವಿಷಯವಾಗಿದೆ, ಇದರ ವಿಶೇಷತೆ ಎಂದರೆ ಕನ್ನಡ ಚಿತ್ರರಂಗದಲ್ಲಿಯೇ ಚಿಕ್ಕ ವಯಸ್ಸಿನಿಂದ ತಮ್ಮ ಕಲೆಯನ್ನು ವ್ಯಕ್ತಪಡಿಸಿಕೊಂಡು,ಅಭಿನಯದ ಛಾಪನ್ನು ಮೂಡಿಸಿದಂತಹ ಹೆಸರಾಂತ ಕಲಾವಿದ ಪುನೀತ್‌ ರಾಜ್‌ಕುಮಾರ್. ಇವರು  ಹುಟ್ಟಿನಿಂದಲೇ ತಮ್ಮ  ಹೆಸರಿನ ಜೊತೆಗೆ ತಮ್ಮ ಸರಳತೆಯಿಂದಲೇ ಹೆಚ್ಚಾಗಿ ಕನ್ನಡಿಗರ ಮನೆ ಮನಸ್ಸನ್ನು ಗೆದಿದ್ದರು.ಆದರೆ ಅವರ ಶಕ್ತಿಧಾಮ ಎಂಬುದು ಕೌಟುಂಬಿಕ ಹಿನ್ನೆಲೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಇಲ್ಲಿ ಆಶ್ರಯದ […]

Advertisement

Wordpress Social Share Plugin powered by Ultimatelysocial