ಮೇ ೩ರಿಂದ ವಿಮಾನ ಹಾರಾಟ

ನವದೆಹಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪುನಾರಂಭಕ್ಕೆ ಸಿದ್ಧತೆಗಳನ್ನು ನಡೆಸಲಾಗಿದೆ. ಲಾಕ್ಡೌನ್ ನಿರ್ಬಂಧವನ್ನು ಸಡಿಲಗೊಳಿಸಲಾಗಿದ್ದು, ಹಲವು ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಮೇ ಮೂರರವರೆಗೂ ಲಾಕ್ಡೌನ್ ಜಾರಿಯಲ್ಲಿರಲಿದ್ದು, ಮೇ ೩ರ ಬಳಿಕ ವಿಮಾನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಈ ಹಿಂದೆ ಆರಂಭಿಸಲಾಗಿದ್ದ ಟಿಕೆಟ್ ಬುಕ್ಕಿಂಗ್ ಗೆ ಅನುಮತಿ ನೀಡಿಲ್ಲ ಎಂದು ತಿಳಿಸಿತ್ತು. ಮೇ ೩ ರ ನಂತರ ವಿಮಾನಯಾನಕ್ಕೆ ಅವಕಾಶ ಸಿಗುವ ನಿರೀಕ್ಷೆಯಲ್ಲಿ ದೆಹಲಿ ವಿಮಾನನಿಲ್ದಾಣದಲ್ಲಿ ಪುನಾರಂಭಕ್ಕೆ ಸಿದ್ಧತೆಗಳನ್ನು ಆರಂಭಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಆಸ್ಟ್ರೇಲಿಯಾದ ನಷ್ಟ ತಪ್ಪಿಸಲು ಟೀಂ ಇಂಡಿಯಾನೆ ಆಧಾರ

Sat Apr 25 , 2020
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಲಾಕ್‌ಡೌನ್‌ನಿಂದಾಗಿ ತುಂಬಾನೆ ನಷ್ಟದಲ್ಲಿದೆ. ಈ ಕಾರಣಕ್ಕೆ ಶೇ ೮೦% ರಷ್ಟು ಸಿಬ್ಬಂದಿಗೆ ವೇತನ ರಹಿತ ರಜೆಯನ್ನು ಕೊಟ್ಟು ಮನೆಗೆ ಕಳುಹಿಸಿದೆ. ಇನ್ನೂ ಇದೇ ಡಿಸೆಂಬರ್ ಜನವರಿಯಲ್ಲಿ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿಯು ಲಾಕ್‌ಡೌನ್‌ನಿಂದಾಗಿ ನಿಂತುಹೋಗುವ ಸಾಧ್ಯತೆ ಇದೆ. ಹಾಗಾದರೆ ಸುಮಾರು ೧೪೦೦ ಕೋ. ರೂಪಾಯಿ ನಷ್ಟವಾಗಲಿದೆ. ಈ ನಷ್ಟವನ್ನು ಎದುರಿಸಲು ಸಿದ್ಧವಿಲ್ಲದ ಕ್ರಿಕೆಟ್ ಸಂಸ್ಥೆ ಮುಂಬರುವ ಟೀಂ ಇಂಡಿಯಾ ವಿರುದ್ಧದ ಸರಣಿಯನ್ನು […]

Advertisement

Wordpress Social Share Plugin powered by Ultimatelysocial