ರಾಜ್ಯ ಸರ್ಕಾರಕ್ಕೆ ಐಸಿಎಮ್‌ಆರ್ ಸೂಚನೆ

ಕೊರೊನಾ ಪರೀಕ್ಷೆಗಾಗಿ ಚೀನಾದಿಂದ ಭಾರತಕ್ಕೆ ಬಂದ ವೈದ್ಯಕೀಯ ಸಲಕರಣೆಗಳು ನಕಲಿಯಾದವು, ಮತ್ತು ಅವುಗಳು ರೋಗ ಪರೀಕ್ಷೆಯಲ್ಲಿ ನಂಬಲರ್ಹವಾದ ಫಲಿತಾಂಶವನ್ನು ತೋರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದ್ದವು. ಇದನ್ನ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕೂಡ ಗಂಭೀರವಾಗಿ ಪರಿಗಣಿಸಿ ಚೀನಾದಿಂದ ಬಂದ ಪರೀಕ್ಷಾ ಸಾಧನಗಳು ಬಳಕೆಗೆ ಯೋಗ್ಯವೋ ಅಲ್ಲವೋ ಎನ್ನುವ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಲೇ ಇತ್ತು. ಇದೀಗ   ICMR ರಾಜ್ಯ ಸರ್ಕಾರಗಳಿಗೆ ಆ್ಯಂಟಿ ಬಾಡಿ ಬ್ಲಡ್ ಟೆಸ್ಟ್ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಹೊರಡಿಸಿದ್ದು  Guangzhou Wondfo Biotech ಮತ್ತು Zhuhai Livzonw ಡಯಾಗ್ನೋಸ್ಟಿಕ್ಸ್ ಕಿಟ್‌ಗಳನ್ನು ಬಳಸದಂತೆ ಹೇಳಿದೆ. ಈ ಸಾಧನಗಳಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆ, ಹಾಗೂ ಸಮಾಧಾನಕರ ಫಲಿತಾಂಶ ನೀಡುತ್ತಿಲ್ಲ ಎನ್ನುವ ಆಧಾರದ ಮೇಲೆ ಐಸಿಎಮ್‌ಆರ್ ಈ ಮಾರ್ಗಸೂಚಿಯನ್ನು ಹೊರಡಿಸಿದೆ ಎನ್ನಲಾಗಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಅಪ್ರಾಪ್ತರಿಗೆ ಗಲ್ಲು ಶಿಕ್ಷೆ ರದ್ದು

Mon Apr 27 , 2020
ರಿಯಾಧ್: ಅಪ್ರಾಪ್ತರಾಗಿದ್ದಾಗ ನಡೆಸಿದ ಅಪರಾಧಗಳಿಗಾಗಿ ಯಾವುದೇ ವ್ಯಕ್ತಿಗೆ ಸೌದಿ ಅರೇಬಿಯಾ ಇನ್ನು ಮುಂದೆ ಮರಣದಂಡನೆ ವಿಧಿಸುವುದಿಲ್ಲ ಎಂದು ಸರಕಾರದ ಮಾನವ ಹಕ್ಕುಗಳ ಸಂಸ್ಥೆಯ ದೊರೆ ಸಲ್ಮಾನ್ ಅವರ ರಾಜಾಜ್ಞೆಯನ್ನು ಹೊರಡಿಸಿದೆ. ಈ ರಾಜಾಜ್ಞೆಯಂತೆ ಅಪ್ರಾಪ್ತರಿರುವಾಗ ಅಪರಾಧವೆಸಗಿದವರಿಗೆ ಮರಣದಂಡನೆ ವಿಧಿಸದೆ ಹತ್ತು ವರ್ಷ ಮೀರದ ಸೆರೆವಾಸ ಶಿಕ್ಷೆಯನ್ನು ವಿಧಿಸಲಾಗುವುದು. ಈ ಅವಧಿಯನ್ನು ಅವರು ಬಾಲಾಪರಾಧಿಗಳ ಕೇಂದ್ರಗಳಲ್ಲಿ ಕಳೆಯಬೇಕಿದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಅವ್ವದ್ ಅಲವ್ವದ್ ಹೇಳಿದ್ದಾರೆ. ಇರಾನ್ ಮತ್ತು […]

Advertisement

Wordpress Social Share Plugin powered by Ultimatelysocial