ಅಸ್ಸಾಂ: ರೇಷ್ಮೆ ಪಂಚೆ, ರೇಷ್ಮೆ ಸೀರೆ, ರೇಷ್ಮೆ ಶಲ್ಯ ನೋಡಿದ್ದ ಜನತೆಗೆ ಈಗ ರೇಷ್ಮೆ ಕುಸುರಿಯನ್ನು ಒಳಗೊಂಡ ಮಾಸ್ಕ್ ಪರಿಚಯವಾಗಿದೆ. ಅಸ್ಸಾಂನಲ್ಲಿ ನಡೆದ ಮದುವೆಯಲ್ಲಿ ವಧು-ವರರು ಸಾಂಪ್ರದಾಯಿಕ ರೇಷ್ಮೆ ಮಾಸ್ಕನ್ನು ಧರಿಸಿ ಗಮನ ಸೆಳೆದಿದ್ದಾರೆ. ಮದುವೆ ಫೋಟೋ, ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಜಾಲತಾಣಿಗರ ಮನಗೆದ್ದಿದೆ. ಕೊರೋನ ವೈರಸ್ ಹಿನ್ನೆಲೆ ಮಾಸ್ಕ್ ಧರಿಸುವುದು ಕಡ್ಡಾಯ, ಮದುವೆ ಸಮಾರಂಭದಲ್ಲಿ ಮಾಸ್ಕ್ ವಧೂವರರ ಅಲಂಕಾರದ ಸೊಬಗನ್ನೇ ಅಧಿಕ ಗೊಳಿಸಿದೆ. ಅಸ್ಸಾಂನಲ್ಲಿ ನಡೆದ ಮದುವೆಯಲ್ಲಿ ದಂಪತಿಗಳು ಮಾಸ್ಕ್ ಧರಿಸಿದ್ದರೂ ಅದು ಅವರ ಅಂದಚೆಂದವನ್ನು ಹೆಚ್ಚಿಸಿತ್ತು. ಕಾರಣ ಅವರ ಧರಿಸಿದ್ದ ಬಟ್ಟೆಗೆ ಹೋಲುವಂತೆ ರೇಷ್ಮೆಯಲ್ಲಿ ಕಲಾತ್ಮಕವಾಗಿ ಸಿದ್ಧಪಡಿಸಿದ್ದ ಮಾಸ್ಕ್ ಧರಿಸಿದ್ದರು. ಫ್ಯಾಶನ್ ಡಿಸೈನರ್ ನಂದಿನಿ ಬೋರ್ ಕಾಕತಿ ಅವರು ಈ ಮಾಸ್ಕ್ ಸಿದ್ಧಪಡಿಸಿದ್ದು, ಅದರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಸ್ಕ್ ಬಳಕೆ ಉತ್ತೇಜಿಸುವುದು ನಮ್ಮ ಉದ್ದೇಶ. ಹೀಗಾಗಿ ಕಲಾತ್ಮಕವಾಗಿ ವಿನ್ಯಾಸಗೊಳಿಸಿದೆವು ಎಂದಿದ್ದಾರೆ.
ರೇಷ್ಮೆ ಮಾಸ್ಕ್ ಪರಿಚಯಿಸಿದ ನವ ಜೋಡಿಗಳು

Please follow and like us: