ರೈಲು ಐಸೋಲೇಶನ್ ವಾರ್ಡ್ನಲ್ಲಿ ಕೊರೊನಾ ರೋಗಿಗೆ ಚಿಕಿತ್ಸೆ

ದೆಹಲಿ: ಕೊರೊನಾ ವೈರಸ್ ಭೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಭೋಗಿಗಳನ್ನೇ ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತಿಲಾಗಿತ್ತು. ಇದೀಗ, ದೆಹಲಿಯಲ್ಲಿ ಮೊದಲ ಸಲ ರೈಲು ಐಸೋಲೇಶನ್ ವಾರ್ಡ್ನಲ್ಲಿ ಕೊರೊನಾ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ.ದೆಹಲಿ ಸರ್ಕಾರದ ಮನವಿ ಮೆರೆಗೆ AC ರಹಿತವಾದ 10 ಬೋಗಿಗಳನ್ನು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಿಯೋಜಿಸಲಾಗಿದೆ. ಅದರಲ್ಲಿ 160 ಬೆಡ್ ಗಳನ್ನು ಹೊಂದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುಂಚೆ ದೆಹಲಿಯಲ್ಲಿ ಸುಮಾರು 117 ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 20 ರಷ್ಟು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಆದೇಶಿಸಿತ್ತು.

Please follow and like us:

Leave a Reply

Your email address will not be published. Required fields are marked *

Next Post

ದೇಶದ ರಕ್ಷಣೆ ನನ್ನ ಹೊಣೆ / ಟ್ರಂಪ್ ವಿಶ್ವಾಸ

Tue Jun 2 , 2020
ದೇಶಾದಾದ್ಯಂತ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಪ್ರಕರಣಗಳನ್ನುದ್ದೇಶಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಪ್ರಮಾಣ ಮಾಡಿದಂತೆಯೇ ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಹೇಳಿದ್ದಾರೆ. ಟ್ರಂಪ್ ಅವರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಶ್ವೇತ ಭವನದ ಹತ್ತಿರ ರಕ್ಷಣಾ ಪಡೆಗಳು ಹಾಗೂ ಪ್ರತಿಭಟನಾ ನಿರತರ ನಡುವೆ ಘರ್ಷಣೆ ನಡೆಯಿತು. ಇದನ್ನು ತಡೆಯಲು ಸಾವಿರಾರು ಸೈನಿಕರನ್ನು ನಿಯೋಜಿಸುವುದಾಗಿ ಎಚ್ಚರಿಕೆ ನೀಡಿದ್ರು. ಅಮೆರಿಕನ್ನರೇ, ಅಧ್ಯಕ್ಷನಾಗಿ ನನ್ನ ಅತ್ಯುನ್ನತ ಕರ್ತವ್ಯವೆಂದರೆ, ನಮ್ಮ ಮಹಾನ್ ದೇಶ ಮತ್ತು […]

Advertisement

Wordpress Social Share Plugin powered by Ultimatelysocial