ಲಂಚ ಪಡದ್ರೆ ಟ್ರಾನ್ಸಪರ್ ಭಾಗ್ಯ

 

ಲಂಚ ಸ್ವೀಕಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಎಸಿಪಿ ಪ್ರಭುಶಂಕರ್ ರನ್ನು ಸಿಸಿಬಿಯಿಂದ ವರ್ಗಾವಣೆ ಮಾಡಲಾಗಿದೆ. ರೇಡ್ ಮಾಡಿ ಪ್ರಕರಣ  ಮುಚ್ಚಿ ಹಾಕಲು ಸಿಗರೇಟ್ ಡೀಲರ್ ಗಳಿಂದ ಪ್ರಭುಶಂಕರ್ 60 ಲಕ್ಷರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸಿಸಿಬಿ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕಮಿಷನರ್ ಗೆ ವರದಿ ಸಲ್ಲಿಸಿದ್ದಾರೆ. ಕಾನೂನಿನ ಮುಂದೆ ಎಲ್ರೂ ಒಂದೇ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡೋದು ಸರಿಯಲ್ಲ.  ಇಷ್ಟಾದರೂ ಎಸಿಪಿಯನ್ನು ಅಮಾನತ್ತು ಮಾಡದೆ ವರ್ಗಾವಣೆ ಮಾಡಿರುವ ಕಮಿಷನರ್. ಲಂಚ ಪಡೆದಿರೋದು ಸಾಬೀತಾದ ಬೆನ್ನಲ್ಲೇ ಪ್ರಭುಶಂಕರ್ ರನ್ನು ಸಿಸಿಬಿಯಿಂದ ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವರದಿ:ಕ್ರೈಂ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಕೊನೆಗೂ ನಿಟ್ಟುಸಿರು ಬಿಟ್ಟ ಕೊಪ್ಪಳ ಜನತೆ..!

Sun May 10 , 2020
ಬಾಗಲಕೋಟೆಯಲ್ಲಿ ನಡೆದಿದ್ದ ಒಂದು ಮದುವೆ ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ಹರಡುವ ಭೀತಿಗೆ ಕಾರಣವಾಗಿತ್ತು. ಏಕೆಂದರೆ ಈ ಮದುವೆಯಲ್ಲಿ ಪಾಲ್ಗೊಂಡಿದ್ದ ಕೆಲವರಲ್ಲಿ ಕೊರೋನಾ ಸೋಂಕು ಕಂಡುಬಂದಿತ್ತು. ಅಲ್ಲದೆ, ಇವರ ಟ್ರಾವೆಲ್‌ ಹಿಸ್ಟರಿಯನ್ನು ಕೆದಕಿದಾಗ  ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್, ಹನುಮನಾಳದ ವರೆಗೆ ವಿಸ್ತರಿಸಿತ್ತು. ಈ ವಿಚಾರ ಸಾಮಾನ್ಯವಾಗಿ ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ನಿಲೊಗಲ್ ಗ್ರಾಮದ 18 ಜನರನ್ನು ಮೇ 7ರಂದು […]

Advertisement

Wordpress Social Share Plugin powered by Ultimatelysocial