ಚಳಿಗಾಲದಲ್ಲಿ ಕಾಡುವ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ಈ ಕ್ರಮಗಳನ್ನು ಅನುಸರಿಸಿ

 ಚಳಿ ಹೆಚ್ಚಾದಂತೆ ಉಸಿರಾಟ ಸಂಬಂಧಿತ ಹಲವು ಕಾಯಿಲೆಗಳು ಕಾಡಲು ಆರಂಭಿಸುತ್ತವೆ ಅವುಗಳಲ್ಲಿ ಮುಖ್ಯವಾಗಿ ನೆಗಡಿ, ಪ್ಲೂ, ನ್ಯಮೋನಿಯಾ, ಸೈನಸ್​ ಕಾಡಲು ಆರಂಭವಾಗುತ್ತದೆ.ಚಳಿಗಾಲ ಆರಂಭವಾಗುತ್ತಿದ್ದಂತೆ ಕಾಯಿಲೆಗಳ ಸರಮಾಲೆಯೇ ತೆರೆದುಕೊಳ್ಳುತ್ತದೆ . ಹೊರಗಿನ ಧೂಳು , ಹೊಗೆಯಿಂದ ಉಸಿರಾಟದ ತೊಂದರೆ ಅಧಿಕವಾಗುತ್ತದೆ . ವಾತಾವರದಲ್ಲಿ ತಾಪಮಾನದ ಕುಸಿತದಿಂದ ಉಸಿರಾಟ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ . ಹೀಗಾಗಿ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯವಾಗಿದೆ . ಅಸ್ತಮಾದಂತಹ ಸಮಸ್ಯೆ ಇರುವವರು ದಿನದ ಹೆಚ್ಚು ಕಾಲ ಮನೆಯೊಳಗೆ ಇರಬೇಕಾದ ಅನಿವಾರ್ಯತೆ ಎದುರಾಗುತ್ತದೆ . ಹೀಗಾಗಿ ಚಳಿಯಿಂದ ನಿಮ್ಮನ್ನು ನೀವು ಬೆಚ್ಚಗಿರಿಸಿಕೊಳ್ಳುವುದರೆಡೆಗೆ ಗಮನಹರಿಸಿ .

ಚಳಿ ಹೆಚ್ಚಾದಂತೆ ಉಸಿರಾಟ ಸಂಬಂಧಿತ ಹಲವು ಕಾಯಿಲೆಗಳು ಕಾಡಲು ಆರಂಭಿಸುತ್ತವೆ ಅವುಗಳಲ್ಲಿ ಮುಖ್ಯವಾಗಿ ನೆಗಡಿ , ಪ್ಲೂ , ನ್ಯಮೋನಿಯಾ , ಸೈನಸ್​ ಕಾಡಲು ಆರಂಭವಾಗುತ್ತದೆ .

ಸಾಮಾನ್ಯ ನೆಗಡಿ ಚಳಿಗಾಲದಲ್ಲಿ ನೆಗಡಿಯಾಗುವುದು ಸಾಮನ್ಯ . ಒಬ್ಬರಿಂದ ಒಬ್ಬರಿಗೆ ಹರಡದಿದ್ದರೂ ಕೇವಲ ನೆಗಡಿಯೇ ಸಾಕಷ್ಟು ಅಸ್ವಸ್ಥತೆಗೆ ಕಾರಣವಾಗುತ್ತದೆ . ಅಲ್ಲದೆ ಹಲವು ರೀತಿಯ ವೈರಸ್​ ಹುಟ್ಟಿಕೊಳ್ಳುವಂತೆ ಮಾಡುತ್ತದೆ .

ಫ್ಲೂ ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಲ್ಲಿ ಫ್ಲೂ ಸಾಮಾನ್ಯವಾಗಿದೆ . ಇದು ನಿರ್ದಿಷ್ಟ ವೈರಸ್​ಗಳಿಂದ ಹರಡುವ ಸೋಂಕು ಆದರೆ ಸಾಮಾನ್ಯ ಶೀತಕ್ಕಿಂತ ತೀವ್ರವಾಗಿರುತ್ತದೆ .

ಬ್ರಾಂಕೈಟೀಸ್​ ಶ್ವಾಸಕೋಶಕ್ಕೆ ಗಾಳಿಯನ್ನು ಸಾಗಿಸುವ ನಾಳಗಳು ಊದಿಕೊಂಡಾಗ ಉರಿಯೂತ ಆರಂಭವಾಗುತ್ತದೆ . ಇದರಂದ ಮೈನಡುಕ ಮತ್ತು ಅತಿಯಾದ ಕಫ ನಿಮ್ಮ ದೇಹದಲ್ಲಿ ಶೇಖರಣೆಗೊಂಡು ಕೆಮ್ಮು , ನೆಗಡಿ ಆರಂಭವಾಗತ್ತದೆ .

ನ್ಯುಮೋನಿಯಾ ಶ್ವಾಸಕೋಶದ ಚೀಲದಲ್ಲಿ ದ್ರವ ಅಥವಾ ಕೀವು ತುಂಬಿದಾಗ ನ್ಯುಮೋನಿಯಾ ಸಂಭವಿಸುತ್ತದೆ . ಅದರಿಂದ ನಿಮಗೆ ಉಸಿರಾಟಕ್ಕೆ ತೊಂದರೆಯಾಗುತ್ತದೆ ಹಾಗೂ ರಕ್ತ ಸಂಚಾರಕ್ಕೂ ಅಡ್ಡಿಪಡಿಸುತ್ತದೆ .

ಸೈನಸ್​ ಸೈನಸಿಟೀಸ್​ ಅಥವಾ ಸೈನಸ್​ ನಿಮ್ಮ ಮೂಗಿನೊಳಗೆ ಉರಿಯನ್ನು ಉಂಟುಮಾಡುತ್ತದೆ . ಅಲ್ಲದೆ ನಿಮಗೆ ವಿಪರೀತ ತಲೆನೋವು ಮತ್ತು ಮೂಗಿನ ಸೋರುವಿಕೆಗೆ ಕಾರಣವಾಗುತ್ತದೆ .

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಈ ಎಲ್ಲ ಸಮಸ್ಯೆಗಳಿಂದ ದೂರವಿರುವುದು ಹೇಗೆ ? ಈ ಕ್ರಮಗಳನ್ನು ಅನುಸರಿಸಿ ಚಳಿಗಾಲದಲ್ಲಿ ಕಾಡುವ ಉಸಿರಾಟದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

ನಿಮ್ಮ ದೇಹವನ್ನು ಉಣ್ಣೆ ಅಥವಾ ಮೈ ಬೆಚ್ಚಗಿಡುವ ಬಟ್ಟೆಯಿಂದ ಕವರ್​ ಮಾಡಿಕೊಳ್ಳಿ

ಕೈಗಳ ಸ್ವಚ್ಛತೆಗೆ ಹೆಚ್ಚು ಗಮನಹರಿಸಿ . ಅನಗತ್ಯವಾಗಿ ಮುಖ , ಮೂಗು , ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ .

ಮಾಲಿನ್ಯಯುತ ಗಾಳಿಯ ವಾತಾವರಣವಿದ್ದರೆ ಬೆಳಗ್ಗಿನ ಜಾಗಿಂಗ್​ಗೆ ತೆರಳಬೇಡಿ . ಮನೆಯಲ್ಲಿಯೇ ಏರೋಬಿಕ್​​ ಎಕ್ಸೈಸ್​ ಮಾಡಿಕೊಳ್ಳಿ .

ಮನೆಯನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ . ಅಲರ್ಜಿಯಾಗುವಂತಹ ವಸ್ತುಗಳನ್ನು ಇಟ್ಟುಕೊಳ್ಳಬೇಡಿ . ನಿಯಮಿತವಾಗಿ ಬೆಡ್​ , ಸೋಫಾಗಳನ್ನು ಸ್ವಚ್ಛಗೊಳಿಸಿಕೊಳ್ಳಿ .

ಉಸಿರಾಟದ ಅನುಕೂಲತೆಗಾಗಿ ಮಾಡುವ ಪ್ರಾಣಾಯಾಮ ಹಾಗೂ ಇನ್ನಿತರ ಯೋಗಾಭ್ಯಾಸಗಳನ್ನು ಮಾಡಿಕೊಳ್ಳಿ .

ಧೂಮಪಾನ ಮಾಡಬೇಡಿ ಮತ್ತು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಂದ ದೂರವಿರಿ .

ಹೈಡ್ರೇಟ್​ ಆಗಿರಿ . ನಿಮ್ಮ ವೈದ್ಯರ ಸೂಚನೆಯಂತೆ ನಿಯಮಿತವಾಗಿ ಸ್ಟೀಮ್​ ತೆಗೆದುಕೊಳ್ಳಿ . ನಿಮ್ಮದೇ ಮನೆಮದ್ದಿನ ಸ್ಟೀಮ್​ ತೆಗೆದುಕೊಳ್ಳುವ ಮುನ್ನ ಎಚ್ಚರವಹಿಸಿ .

ಸಾಕಷ್ಟು ಹಣ್ಣು , ತರಕಾರಿಗಳನ್ನು ಸೇವಿಸಿ . ಇವು ನಿಮ್ಮ ದೇಹಕ್ಕೆ ಬೇಕಾದ ಪ್ರೋಟೀನ್​ ಅನ್ನು ನೀಡುತ್ತದೆ .

ಎಣ್ಣೆಯಲ್ಲಿ ಕರಿದ ಜಂಕ್​ ಫುಡ್​ಗಳ ಬಳಕೆ ಬೇಡ , ವೈನ್​ ಅಥವಾ ಮದ್ಯ ಸೇವೆನೆಯಲ್ಲಿ ಹಿಡಿತವಿರಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Bank holidays 2022: ಜನವರಿ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ

Fri Dec 24 , 2021
ನವದೆಹಲಿ:2021 ರ ಕೊನೆಯ ತಿಂಗಳು ನಡೆಯುತ್ತಿದೆ, ಈಗ ಹೊಸ ವರ್ಷ ಪ್ರಾರಂಭವಾಗಲಿದೆ. ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಸಂಭ್ರಮದ ವಾತಾವರಣವಿದೆ.ಹೊಸ ವರ್ಷದ ಮೊದಲ ತಿಂಗಳ ಜನವರಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮುಂದಿನ ತಿಂಗಳು ಜನವರಿಯಲ್ಲಿ ನೀವು ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2022 ರ ಜನವರಿಯಲ್ಲಿ ನಡೆಯಲಿರುವ ಬ್ಯಾಂಕ್ ರಜಾದಿನಗಳ ಬಗ್ಗೆ ನೋಡೋಣ. ತಿಂಗಳ […]

Advertisement

Wordpress Social Share Plugin powered by Ultimatelysocial