ಲಾಕ್ ಡೌನ್ ಮಧ್ಯೆ ಒಂದು ಪ್ರೇಮ್ ಕಹಾನಿ

ಘಾಜಿಯಾಬಾದ್ (ಉತ್ತರ ಪ್ರದೇಶ): ಕೊರೊನಾ ಲಾಕ್‌ಡೌನ್ ಮಧ್ಯೆ ಕೆಲವೆಡೆ ಕುತೂಹಲಕಾರಿ ಘಟನಾವಳಿಗಳು ನಡೆಯುತ್ತಿವೆ. ಘಾಜಿಯಾಬಾದ್‌ನಲ್ಲಿ ಯುವಕನೊಬ್ಬ ರೇಷನ್, ತರಕಾರಿ ತೆಗೆದುಕೊಂಡು ಬರುವುದಾಗಿ ಸುಳ್ಳು ಹೇಳಿ ಮನೆಯಿಂದ ಹೊರಹೋಗಿ ನವವಿವಾಹಿತನಾಗಿ ಪತ್ನಿ ಜತೆ ವಾಪಸ್ಸಾಗಿದ್ದಾನೆ.
ಗ್ರಾಮದ ಯುವಕ ಪಕ್ಕದ ಗ್ರಾಮದ ಯುವತಿಯನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದನಂತೆ. ಲಾಕ್‌ಡೌನ್ ವಿಸ್ತರಿಸುವ ಕಾರಣ ಅನ್ಯ ದಾರಿ ಕಾಣದೆ ಗೆಳೆಯರ ಸಮ್ಮುಖದಲ್ಲಿ ಸರಳ ವಿವಾಹಕ್ಕೆ ಆತ ನಿರ್ಧರಿಸಿದ್ದ. ಹಾಗೆಯೇ ಅಕ್ಕಿ ಕಾಳು, ತರಕಾರಿ ಅಂತ ಮನೆಯಲ್ಲಿ ನೆಪ ಹೇಳಿ ಹೋದ ಆತ ಬಾಳ ಸಂಗಾತಿಯೊಂದಿಗೆ ಬಂದಿದ್ದಾನೆ. ಆದ್ರೆ, ಈತನ ತಾಯಿ ಮಾತ್ರ ಯಾವುದೇ ಕಾರಣಕ್ಕೂ ಯುವತಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಹೀಗಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹುಡುಗಿಯ ತಾಯಿ ಪೊಲೀಸ್ ಸ್ಟೇಷನ್‌ಗೆ ಬಂದು ಗಲಾಟೆ ಮಾಡಿದ್ದಾಳೆ. ಎರಡೂ ಕಡೆಯವರ ವಿಚಾರಣೆ ಮಾಡಿರುವ ಪೊಲೀಸರು ಬುದ್ಧಿವಾದ ಹೇಳಿ ಹುಡುಗಿಯನ್ನು ಹುಡುಗನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ತಾಯಿಯ ಸಾವಿನ ಬೆನ್ನಲ್ಲೇ ಇಹಲೋಕ ತ್ಯಜಿಸಿದ ಬಾಲಿವುಡ್ ನಟ ಇರ್ಫಾನ್ ಖಾನ್

Wed Apr 29 , 2020
ತನ್ನ ಅದ್ಭುತ ನಟನೆಯ ಮೂಲಕ ಮನೆ ಮಾತಾಗಿದ್ದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಇರ್ಫಾನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಂತ ಅಂದ್ರೆ ಕೆಲ ದಿನಗಳ ಹಿಂದೆ ಇರ್ಫಾನ್ ತಾಯಿ ಕೂಡ ಮೃತಪಟ್ಟಿದ್ದರು. ತಾಯಿಯ ಮುಖವನ್ನು ನೋಡಲಾಗದ ಸ್ಥಿತಿಯಲ್ಲಿದ್ದ ಖಾನ್ ಈಗ ತಾಯಿ ಬಳಿಗೆ ಹೊರಟು ಹೋಗಿದ್ದಾರೆ. ಬಾಲಿವುಡ್ನಲ್ಲಿ ತನ್ನದೇ ಆದ ಚಾಫು ಮೂಡಿಸಿದ್ದ ಇರ್ಫಾನ್ ಖಾನ್ ಇನ್ನು […]

Advertisement

Wordpress Social Share Plugin powered by Ultimatelysocial