ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿಯಿಂದ ಪ್ರತಿಭಟನೆ

ಪಿಪಿಇ ಕಿಟ್ ಇಲ್ಲ. ನಮಗೆ ಇಲ್ಲಿ ಯಾವ ಸೇಫ್ಟಿ ಇಲ್ಲ ಕನಿಷ್ಠ ಸುರಕ್ಷಾ ಕ್ರಮಗಳಿಲ್ಲ. ಸೋಂಕಿತರನ್ನೆಲ್ಲಾ ಇಲ್ಲಿಗೆ ಸ್ಥಳಾಂತರ ಮಾಡಿದರೆ ನಾವು ಕೆಲಸ ಮಾಡುವುದು ಹೇಗೆ. ನಮಗೂ ಸೋಂಕು ತಗುಲುವ ಆತಂಕವಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಗರದ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ ಆಡಳಿತ ಮಂಡಳಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ವೈದ್ಯರು, ನರ್ಸ್‍ಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಹಳಷ್ಟು ಜನ ಆಸ್ಪತ್ರೆಯ ಮುಂದೆ ಜಮಾಯಿಸಿ ನಾವು ಕೆಲಸ ಮಾಡುವುದಿಲ್ಲ. ನಮಗೆ ಸರಿಯಾದ ಪಿಪಿಇ ಕಿಟ್‍ಗಳಾಗಲೀ , ಮಾಸ್ಕ್‍ಗಳನ್ನಾಗಲೀ ನೀಡಿಲ್ಲ. ನಮಗೆ ರಕ್ಷಣೆ ಇಲ್ಲ ಎಂದ ಮೇಲೆ ಕೆಲಸ ಮಾಡುವುದು ಹೇಗೆ ಎಂದು ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದರು.24 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರು ಹಾಗೂ ಅವರ ಸಂಬಂಧಿಕರು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಓಡಾಡುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ನಮಗೂ ರೋಗ ತಗುಲುವ ಅಪಾಯವಿದೆ ಎಂದು ಪ್ರತಿಭಟನಾ ನಿರತ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.

ವರದಿ:ವೆಬ್ ಡೆಸ್ಕ್ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಕಬ್ಬಿನ ತ್ಯಾಜ್ಯದಿಂದ ಸ್ಯಾನಿಟೈಸರ್ ತಯಾರಿಸಿ: ಸಚಿನ್ ಮೀಗಾ

Sat May 9 , 2020
ಬೆಂಗಳೂರು: ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಮತ್ತು ಸ್ಯಾನಿಟೈಸರ್ ತೀರಾ ಸಾಮಾನ್ಯ ಅಗತ್ಯವಾಗಿದೆ. ಬಟ್ಟೆಯಿಂದ ಮಾಸ್ಕ್ ತಯಾರಿಸಬಹುದಾದ್ದರಿಂದ ಆ ಸಮಸ್ಯೆ ಇಲ್ಲ. ಆದರೆ, ಸ್ಯಾನಿಟೈಸರ್ ಕೊರತೆ ಎಲ್ಲೆಡೆ ಇದೆ. ಸ್ಯಾನಿಟೈಸರ್‌ಗೆ ಬೇಡಿಕೆ ಹೆಚ್ಚಾಗಿ ಹಲವೆಡೆ ನಕಲಿ ಸ್ಯಾನಿಟೈಸರ್‌ಗಳ ಮಾರಾಟವಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸುವ ಪ್ರಸ್ತಾಪ ಮಾಡಿದೆ. ಕೇಂದ್ರದ ಈ ಪ್ರಸ್ತಾಪವನ್ನು ಕೆಪಿಸಿಸಿ ಕಿಸಾನ್ ಸಭಾದ ಅಧ್ಯಕ್ಷ ಸಚಿನ್ ಮೀಗಾ ಕಟುವಾಗಿ […]

Advertisement

Wordpress Social Share Plugin powered by Ultimatelysocial