ವಿಶ್ವ ಸಂಸ್ಥೆ ಅವಾರ್ಡ್ ಗೆ ಭಾರತೀಯ ಮೇಜರ್  ಸುಮನ್ ಆಯ್ಕೆ

ನವದೆಹಲಿ: ಸೇನಾ ಲಿಂಗಸಮಾನತೆ ಪ್ರತಿಪಾದನೆಗಾಗಿ ವಿಶ್ವಸಂಸ್ಥೆಯಿಂದ ಕೊಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ ಭಾರತೀಯರೊಬ್ಬರಾದ  ಮೇಜರ್ ಸುಮನ್ ಗವಾನಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಸುಮನ್​ ಅವರನ್ನು ಹೊರತುಪಡಿಸಿದರೆ ಇನ್ನೋರ್ವರು ಬ್ರೆಜಿಲ್​ನ ನೌಕಾಪಡೆ ಅಧಿಕಾರಿ ಕಾರ್ಲಾ ಮಾಂಟೆರೋ ಡಿ ಕ್ಯಾಸ್ಟ್ರೊ ಅರೌಜೊ ಅವರು ಆಯ್ಕೆಯಾಗಿದ್ದಾರೆ.   ಇದೇ ಮೊದಲ ಬಾರಿಗೆ ಇಬ್ಬರಿಗೆ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು 2016ರಲ್ಲಿ ಸ್ಥಾಪಿಸಲಾಗಿದೆ. ಶಾಂತಿ ಕಾರ್ಯಾಚರಣೆ ಸಂದರ್ಭದಲ್ಲಿ ಮಹಿಳೆ, ಶಾಂತಿ ಹಾಗೂ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಪ್ರಯಾಣಿಕರಿಂದ ಭರ್ತಿಯಾದ ಬಿಎಂಟಿಸಿ

Tue May 26 , 2020
ಬೆಂಗಳೂರು: ಲಾಕ್​ಡೌನ್​ ಹಂತ ಹಂತವಾಗಿ ಸಡಿಲಿಕೆ ಆದ ಬೆನ್ನಲ್ಲೇ ಜನರ ಸಂಚಾರಕ್ಕಾಗಿ ಬಿಎಂಟಿಸಿ ಬಸ್​ಗಳು ರಸ್ತೆಗಿಳಿದಿವೆ. ಆದರೆ ಜನ ಮಾತ್ರ ಬಸ್​ಗಳತ್ತ ಮುಖ ಮಾಡುತ್ತಿಲ್ಲರಲಿಲ್ಲ. ಇದಕ್ಕೆ ಕೊರೊನಾ ಭಯ ಕಾರಣ ಇರಬಹುದಾ ಅಂತಾ ಯೋಚಿಸಲಾಗಿತ್ತು. ಆದರೆ ಅಸಲಿ ಕಥೆ ಕೋವಿಡ್​ ಆತಂಕವಲ್ಲ, ಬದಲಿಗೆ ಡೈಲಿ ಪಾಸ್ 70 ರೂಪಾಯಿ ನಿಗದಿ ಮಾಡಿರೋದು ಎಂಬ ಸತ್ಯ ತಿಳಿದುಬಂದಿದೆ. ಸಾಕಷ್ಟು ವಿರೋಧಗಳು ವ್ಯಕ್ತವಾದ ನಂತರ ಬಿಎಂಟಿಸಿ ಟಿಕೆಟ್ ರೇಟಿನಲ್ಲಿ ಸಡಿಲಿಕೆ ತಂದರೂ ಕೂಡಾ, […]

Advertisement

Wordpress Social Share Plugin powered by Ultimatelysocial