ವೈದ್ಯರ ಸಲಹೆ ಇಲ್ಲದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಿದರೆ ಹೃದಯಕ್ಕೆ ಅಪಾಯ

ವಾಷಿಂಗ್ಟನ್: ಕೊರೊನಾ ಸೋಂಕಿತರಿಗೆ ಮಲೇರಿಯಾ ನಿರೋಧಕ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅದಕ್ಕೆ ಸರಿಸಮನಾದ ಔಷಧವನ್ನು ನೀಡುವುದರಿಂದ ಅವರ ಹೃದಯದ ಮೇಲೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಿಳಿಸಿದೆ. ಸಂಶೋಧನೆ, ಅಧ್ಯಯನಕ್ಕಾಗಿ ಆಸ್ಪತ್ರೆಗಳಲ್ಲಿ ಬಳಸುವುದನ್ನು ಹೊರತುಪಡಿಸಿ ಕೊರೊನಾ ವೈರಸ್ ರೋಗಿಗಳಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನೀಡದಂತೆ ವೈದ್ಯರಿಗೆ ಎಚ್ಚರಿಕೆಯನ್ನೂ ನೀಡಿದೆ. ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಮಲೇರಿಯಾ ಹೈಡ್ರಾಕ್ಸಿ ಕ್ಲೋರೋಕ್ವಿನ್ ಪರಿಣಾಮಕಾರಿಯಾಗಬಲ್ಲದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದರು. ಬಳಿಕ ಅನೇಕ ವೈದ್ಯರು ಕೊರೊನಾ ಸೋಂಕಿತರಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನೀಡಿದ್ದರು. ಹೈಡ್ರಾಕ್ಸಿ ಕ್ಲೋರೋಕ್ವಿನ್ ಸೇವನೆಯಿಂದ ಹೃದಯ ಬಡಿತದಲ್ಲಿ ಏರಿಳಿತ, ರಕ್ತದೊತ್ತಡದಲ್ಲಿ ಇಳಿಕೆ, ಸ್ನಾಯು ಅಥವಾ ನರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಕ್ಕೆ ಖಡಕ್ ಸಲಹೆ ನೀಡಿದ ಕಪಿಲ್ ದೇವ್

Sat Apr 25 , 2020
ನವದೆಹಲಿ: ವಿಶ್ವವಿಖ್ಯಾತ ಕ್ರಿಕೆಟ್ ಆಟಗಾರ, ವಿಶ್ವಕಪ್ ಗೆದ್ದ ಭಾರತೀಯ ತಂಡದ ಕ್ಯಾಪ್ಟನ್. ಹಾಗಿದ್ದ ಮೇಲೆ ಜೀವನದಲ್ಲಿ ಕ್ರಿಕೆಟ್ ಬಿಟ್ಟು ಬೇರೇನೂ ಇರಬಾರದೇ? ಹಾಗೇನಿಲ್ಲ, ಕ್ರಿಕೆಟ್ ಬಿಟ್ಟು ಬೇರೆಯದ್ದಕ್ಕೂ ಪ್ರಾಧಾನ್ಯತೆ ಇದೆ ಎನ್ನುತ್ತಾರೆ ಕಪಿಲ್ ದೇವ್. ದೇಶಾದ್ಯಂತ್ ಲಾಕ್‌ಡೌನ್ ಜಾರಿಯಲ್ಲಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಸದ್ಯ ಕ್ರಿಕೆಟ್, ಫುಟ್ಬಾಲ್‌ಕ್ಕಿಂತ ಹೆಚ್ಚು ಮುಖ್ಯವಾಗಿರುವ ಸಂಗತಿಗಳೆಂದರೆ ಶಾಲೆ ಹಾಗೂ ಕಾಲೇಜುಗಳು. ಇವುಗಳ ಬಗ್ಗೆ ನಾವು ಗಮನ ಹರಿಸಬೇಕಿದೆ ಎಂದು ಅವರು ಹೇಳುತ್ತಾರೆ. ಬೇರೆಲ್ಲ ಸಂಗತಿಗಳನ್ನು ಬಿಟ್ಟು […]

Advertisement

Wordpress Social Share Plugin powered by Ultimatelysocial