ಶಿವಾಜಿನಗರಕ್ಕೆ ಕಂಟಕವಾದ ಮಣಿಪುರಿಗಳು

ಬೆಂಗಳೂರು: ಹೊಂಗಸಂದ್ರಕ್ಕೆ ಬಿಹಾರಿಗಳು ಕಂಟಕವಾದAತೆ ಶಿವಾಜಿನಗರಕ್ಕೆ ಮಣಿಪುರ ಮತ್ತು ಅಸ್ಸೋಂ ಮೂಲದ ನಾಲ್ವರಿಂದ ಹಲವಾರು ಮಂದಿಗೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆಗಳಿವೆ. ಖಾಸಗಿ ಹೋಟೆಲ್‌ನ ಹೌಸ್‌ಕೀಪರ್‌ನಿಂದ ಈ ನಾಲ್ಕು ಮಂದಿಗೆ ಸೋಂಕು ಹರಡಿದೆ. ಜ್ಯುವೆಲರಿ ಶಾಪ್, ಫರ್ನೀಚರ್ ಶಾಪ್, ಚಿಕನ್ ಸೆಂಟರ್ ಹಾಗೂ ಖಾಸಗಿ ಹೊಟೇಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ನಾಲ್ವರು ಶಿವಾಜಿನಗರದಾದ್ಯಂತ ಓಡಾಡಿರುವುದರಿಂದ ಇವರ ಜೊತೆ ಪ್ರಾಥಮಿಕ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದವರನ್ನು ಪತ್ತೆ ಹಚ್ಚುವುದೇ ಹರಸಾಹಸವಾಗಿದೆ. ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿ ಕೆಲಸ ಮಾಡುತ್ತಿದ್ದ ಚಿಕನ್ ಸೆಂಟರ್ ಗೆ ಪ್ರತಿ ವಾರ ನೂರಾರು ಜನ ಮುಗಿಬಿದ್ದು ಕೋಳಿ ಖರೀದಿಸಿದ್ದರು. ಹೀಗಾಗಿ ಆತನೊಂದಿಗೆ ಸಂಪರ್ಕವಿರಿಸಿಕೊಂಡಿದ್ದವರನ್ನು ಪತ್ತೆಹಚ್ಚುವುದೇ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.

 

Please follow and like us:

Leave a Reply

Your email address will not be published. Required fields are marked *

Next Post

ರೈತರ ಪರ ಗುಡುಗಿದ ಸಿದ್ದರಾಮಯ್ಯ

Fri May 8 , 2020
ಲಾಕ್‌ನೌಡ್‌ನಿಂದ ರಾಜ್ಯದಲ್ಲಿ ಉಂಟಾಗಿರುವ ಜನತೆಯ ಸಂಕಷ್ಟಗಳನ್ನು ನಿವಾರಿಸಲು ಕನಿಷ್ಠ ೫೦ಸಾವಿರ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಸಿಎಂ. ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ. ರೈತರು ಬೆಳೆದ ಪದಾರ್ಥಗಳನ್ನು ಸರ್ಕಾರವೆ ಖರೀದಿಸಿ ರೈತರಿಗೆ ಸಹಾಯ ಮಾಡಬೇಕು ಎಂದು ವಿರೋಧ ಪಕ್ಷಗಳ ಮುಖಂಡರ ಸಭೆಯಲ್ಲಿ ಸಿದ್ದರಾಮಯ್ಯ, ಸಿಎಂ. ಬಿಎಸ್‌ವೈಗೆ ಮನವಿ ಮಾಡಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial