ಸಂಸದ ಹಾಗೂ ಶಾಸಕರ ನಡುವೆ ಕಿತ್ತಾಟ

ದಾವಣಗೆರೆ: ಶಾಸಕರು ಹಾಗೂ ಸಂಸದರು ಕಿತ್ತಾಟ ನಡೆಸಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕೋವಿಡ್-೧೯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ. ಮಾಡಾಳು ವಿರುಪಾಕ್ಷ, ಆರ್‌ಓ ಪ್ಲಾಂಟ್ ರಿಪೇರಿ ವಿಚಾರವಾಗಿ ಮಾತನಾಡುತ್ತಿದ್ದ ವೇಳೆ ಸಂಸದ ಸಿದ್ದೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏ ಏನೋ ಮಾತಾಡ್ತೀಯಾ ನೀನು ಅಂತ ಸಿದ್ದೇಶ್ವರ್ ಅಂದ್ರೆ ಏ ಕೂತುಕೊಳ್ಳೊ ನೀನು, ನಿಂದೇನು ಅಂತ ಮಾಡಾಳು ವಿರುಪಾಕ್ಷ ಗುಡುಗಿದ್ದಾರೆ. ಈ ಇಬ್ಬರ ನಡುವಿನ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಎಸ್‌ಪಿ ಹನುಮಂತರಾಯ ಗಲಾಟೆಗೆ ಬ್ರೇಕ್ ಹಾಕಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಜಧಾನಿ ತೊರೆದ ೨ಲಕ್ಷ ಕಾರ್ಮಿಕರು

Sat May 9 , 2020
ಬೆಂಗಳೂರು: ಕೊರೊನಾಘಾತಕ್ಕೆ ನಾಡಿನ ಶ್ರಮಿಕ ರ‍್ಗ ತತ್ತರಿಸಿದೆ. ನಗರ-ಮಹಾ ನಗರಗಳಿಂದ ಹಳ್ಳಿಗಳತ್ತ ಮಹಾ ಮರುವಲಸೆಯ ರ‍್ವ ಕಂಗೆಡಿಸುತ್ತಿದೆ. ಬೆಂಗಳೂರೊಂದರಿಂದಲೇ ಸುಮಾರು ೨ ಲಕ್ಷ ಮಂದಿ ಅನ್ಯ ಜಿಲ್ಲೆ ಮತ್ತು ಪರ ರಾಜ್ಯಗಳಿಗೆ ವಾಪಸಾಗಿದ್ದಾರೆ. ಒಂದೆಡೆ ಕೋವಿಡ್ ೧೯ ಎದುರಿಸುವ ಸವಾಲು, ಮತ್ತೊಂದೆಡೆ ಕರ‍್ಮಿಕರ ಮರು ವಲಸೆ ನಿಭಾಯಿಸಬೇಕಾದ ಮಹಾ ಸವಾಲು ರಾಜ್ಯ-ಕೇಂದ್ರ ಸರಕಾರಗಳ ಮುಂದಿದೆ. ನಗರಗಳಿಂದ ತವರು ತಲುಪಿರುವ ಲಕ್ಷಾಂತರ ಕರ‍್ಮಿಕರಲ್ಲಿ ಎಲ್ಲರಿಗೂ ಸ್ಥಳೀಯವಾಗಿ ಉದ್ಯೋಗ ಲಭಿಸುವುದು ಅಸಾಧ್ಯ. ಬೇರೆ […]

Advertisement

Wordpress Social Share Plugin powered by Ultimatelysocial