ಸರ್ಕಾರ ಕೊರೊನಾ ಹೆಸರಿನಲ್ಲಿ ದೋಖಾ ಮಾಡುತ್ತಿದೆ:HDK

ಕೊರೊನಾ ಲಾಕ್ ಡೌನ್ ಕಾರಣದಿಂದ ಸಂಕಷ್ಟ ಅನುಭವಿಸಿರುವ ಶ್ರಮಿಕ ವರ್ಗಕ್ಕೆ ಸರಕಾರ ಘೋಷಿಸಿರುವ 1610 ಕೋಟಿ ರೂ. ಪ್ಯಾಕೇಜ್ ದೋಖಾ ಪ್ರಾಜೆಕ್ಟ್ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಕೊಡುತ್ತೇವೆ ಎಂದರು. ಆದರೆ ಎಷ್ಟು ಜನರಿಗೆ ಎಷ್ಟು ಹಣ ನೀಡಿದ್ದಾರೆ ಎಂದು ಪ್ರಶ್ನಿಸಿದರು. ನೆರೆ ಪರಿಹಾರದಲ್ಲೂ ಜನರಿಗೆ ಮೋಸವಾಗಿದೆ. ಅದೇ ಈಗಲೂ ಮುಂದುವರಿಯುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರೈತರ ಸಾಲಮನ್ನಾ ಮಾಡುವಾಗ ಸರಿಯಾದ ಮಾಹಿತಿಯೊಂದಿಗೆ ನೀಡಿದ್ದೆ. ಆದರೆ ಈಗ ಯಾರು ಅರ್ಹರು, ಫಲಾನುಭವಿಗಳ ಆಯ್ಕೆ ಮಾನದಂಡ, ‌ಮಾರ್ಗಸೂಚಿ ಇದ್ಯಾವುದೂ ಇಲ್ಲದೆ ಬರೀ ಘೋಷಣೆ ಮಾಡಲಾಗಿದೆ ಹಾಗಾಗಿ ಇದು ಘೋಷಣೆಯಾಗಿಯೇ ಇರಲಿದೆ. ಸರಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ಕೊರೊನಾ ಹೆಸರಿನಲ್ಲಿ ಜನರಿಗೆ ದೋಖಾ ಮಾಡುತ್ತಿದೆ. ಬೆಳಗಾವಿಯ ಗಡಿಯಲ್ಲಿ 3-4 ಕಿ.ಮೀಟರ್ ನಲ್ಲಿ ಸಾವಿರಾರು ಕಾರ್ಮಿಕರು ಸೇರಿದ್ದಾರೆ. ಆದರೆ ಅವರಿಗೆ ಸರಕಾರದಿಂದ ಸರಿಯಾದ ನಿರ್ದೇಶನ ನೀಡುತ್ತಿಲ್ಲ. ಒಬ್ಬೊಬ್ಬ ಮಂತ್ರಿಗಳು ಅವರಿಗೆ ಬೇಕಾದ ರೀತಿ ಕೆಲಸ ಮಾಡುತ್ತಿದ್ದಾರೆ  ಎಂದು ಹೇಳಿದರು.

ವರದಿ:ಪೊಲಿಟಿಕಲ್ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

೨೦೨೦ಯಲ್ಲಿ ಡಿಂಪಲ್ ಕ್ವೀನ್ ಎಷ್ಟು ಬ್ಯುಸಿ ಗೊತ್ತಾ..?

Sun May 10 , 2020
ಸದ್ಯದ ಮಟ್ಟಿಗೆ ಕನ್ನಡದ ಬಹುಬೇಡಿಕೆಯ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್. ೨೦೦೭ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ಇವತ್ತಿಗೆ ಕನ್ನಡದ ಭರವಸಸೆಯ ಹಾಗು ಬೇಡಿಕೆಯ ನಟಿಯೂ ಹೌದು. ಕನ್ನಡದ ಬಹುತೇಕ ಎಲ್ಲಾ ನಟರ ಜೊತೆಯೂ ಅಭಿನಯಿಸಿರುವ ರಚಿತಾ ರಾಮ್ ಬುಲ್ ಬುಲ್ ಸಿನಿಮಾದ ನಂತರ ಹಿಂತಿರುಗಿ ನೋಡಿದ್ದು ಇಲ್ಲ.೨೦೧೯ರಲ್ಲಿ ರಚಿತಾರಾಮ್ ಅವರ ಅಭಿನಯದ ೮ ಸಿನಿಮಾಗಳು ಬಿಡುಗಡೆಯಾಗಿದ್ದು ಬಹುತೇಕ ಎಲ್ಲಾ ಸಿನಿಮಾಗಳು […]

Advertisement

Wordpress Social Share Plugin powered by Ultimatelysocial